ಅಗ್ನಿಅವಘಡ, ರಾಷ್ಟಭಕ್ತರ ಬಳಗದ ಕಾಂತೇಶ್ ಮತ್ತು ಆಯುಕ್ತರು ಭೇಟಿ

 

A fire broke out at the house of civil servants Nagaratna and Narasimha at 3rd turn 6th avenue of Shimoga's Hosmane, costing lakhs of rupees. A loss has occurred. The incident took place on Saturday evening.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೊಸಮನೆಯ 3 ನೇ ತಿರುವು 6 ನೇ ಅಡ್ಡರಸ್ತೆಯಲ್ಲಿರುವ ಪೌರಕಾರ್ಮಿಕ ನಾಗರತ್ನ ಮತ್ತು ನರಸಿಂಹರವರ ಮನೆಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಘಟನೆ ಶನಿವಾರ ಸಂಜೆ ನಡೆದಿದೆ.

ನಾಗರತ್ನ ರವರು ಮೆಗ್ಗಾನ್ ಆಸ್ಪತ್ರೆಗೆ ಸಂಬಂಧಿಕರನ್ನ ನೋಸಲು ಹೋದಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬೆಂಕಿ ಅವಘಡ ಸಂಭವಿಸಿದೆ.

ಕೆಲ ಮಾಹಿತಿ ಪ್ರಕಾರ ದೇವರಿಗೆ ಹಚ್ಚಿದ ದೀಪದಿಂದ ನಾಗರತ್ನರವರ ಮನೆ ಬೆಂಕಿಗೆ ಆಹುತಿಯಾಗಿದೆ ಎಂದು ಹೇಳಲಾಗುತ್ತಿದೆ. ಆದತೆ ಈ ಘಟನೆಯನ್ನ ನಾಗರತ್ನರವರ ಆ್ತ ಬಳಗ ತಿರಸ್ಕರಿಸಿದೆ.

ಹೊಸಮನೆ ಬಡಾವಣೆಯ 6ನೇ ಮುಖ್ಯ ಮೂರನೇ ಕ್ರಾಸ್ , ಸ್ವಾಮಿ ವಿವೇಕಾನಂದ ರಸ್ತೆಯ ನರಸಿಂಹ ಅವರ ಮನೆಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಕೆ ಈ ಕಾಂತೇಶ್ ರವರು ನಿವಾಸಕ್ಕೆ ಬೇಟಿಕೊಟ್ಟು ಇಬ್ವರನ್ಬೂ ಸಾಂತ್ವಾನ ಹೇಳಿದ್ದಾರೆ. 

ಮನೆಗೆ ಅಗತ್ಯವಿರುವ  ದಿನಸಿ ಹಾಗೂ ಅಕ್ಕಿ  ಸಾಮಾನುಗಳನ್ನು ನೀಡಿದ್ದಾರೆ. ಹಾಗೆ ಇದಕ್ಕೆ ಸಂಬಂಧಪಟ್ಟ ಇಲಾಖೆಯವರಿಗೆ  ದೂರವಾಣಿ ಮುಖಾಂತರ ಸಂಪರ್ಕಿಸಿ  ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು‌ ಈ ಸಂದರ್ಭದಲ್ಲಿ  ಬಳಗದವರು ಹಾಗೂ ಸ್ಥಳೀಯ ನಿವಾಸಿಗಳು ಸಹ ಸಹಕಾರ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಭೇಟಿ ನೀಡಿ ನಷ್ಟದ ಹಣ ಭರಿಸುವ ಪ್ರಯತ್ನ ಮಾಡುವುದಾಗಿ ನಾಗರತ್ನರವರಿಗೆ ತಿಳಿಸಿದ್ದಾರೆ. ಪೌರಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಗೋವಿಂದರವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close