![]() |
Kuvempu university convocation program was held to distribute medals. It was a happy day for the students. MLA DS Arun alleged that it was given to the events management team and desecrated. |
ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವ ವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದಕ ಪ್ರಶಸ್ತಿ ವಿತರಣೆ ನಡೆದಿದೆ. ಇದು ವಿದ್ಯಾರ್ಥಿಗಳಿಗೆ ಸಂತೋಷದ ದಿನವಾಗಿತ್ತು. ಇದನ್ನ ಈವೆಂಟ್ಸ್ ಮ್ಯಾನೇಜ್ ಮೆಙಟ್ ಗೆ ಕೊಟ್ಟು ಅಪವಿತ್ರಗೊಳಿಸಲಾಗಿದೆ ಎಂದು ಶಾಸಕ ಡಿ.ಎಸ್ ಅರುಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟಿಕೋತ್ಸವದಲಗಲಿ ಉನ್ನತ ಶಿಕ್ಷಣ ಸಚಿವರು ಗೈರಾಗುತ್ತಾರೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆದ 9 ನೇ ಘಟಿಕೋತ್ಸವದಲ್ಲಿ ಕೃಷಿ ಸಚಿವರು ಮತ್ತು ಜಿಲ್ಲಾ ಉತ್ಸವ ಸಚಿವರು ಸಹಭಾಗಿಯಾಗಿಲ್ಲ. ಇದು ರಾಜ್ಯಪಾಲರ ವಿರುದ್ಧದ ಸಮರನಾ ಎಂದು ಅವರು ಪ್ರಶ್ನಿಸಿದರು.
ವಿವಿಯ ಭವಿಷ್ಯ ಇದಾಗಿತ್ತು. ಕುವೆಂಪು ವಿವಿಯನ್ನ ರಾಜ್ಯ ಸರ್ಕಾರ ಮುಚ್ಚುವ ಹುನ್ಬಾರನಾ ಎಂದು ಅರುಣ್ ಪ್ರಶ್ನಿಸಿದ್ದಾರೆ. 1987 ರಲ್ಲಿ ರಾಮಕೃಷ್ಣ ಗೆಗಡೆಯವರ ಕಾಲದಲ್ಲಿ ಕುವೆಂಪು ವಿವಿ ಆರಂಭವಾಗಿತ್ತು. ಉನ್ಬತ ಶಿಕ್ಷಣ ಸಚಿವ ಮತ್ತು ತೋಟಗಾರಿಕೆ ಇಲಾಖೆಯ ಸಚಿವರು ಗೈರು ರಾಜ್ಯಪಾಲರನ್ನ ಅವಮಾನಿಸುವ ಅಥವಾ ಕುವೆಂಪು ವಿವಿಯ ಮುಚ್ಚುವ ಹುನ್ನಾರನಾ ಎಂದು ಪ್ರಶ್ನಿಸಿದರು.
ಗ್ರಾಮೀಣ ಅಭಿವೃದ್ಧಿ ಕುವೆಂಪು ವಿವಿಗೆ ಕುಲಪತಿಗಳಾಗಿದ್ದ ರಾಜ್ಯಪಾಲರನ್ನ ತೆಗೆದು ಸಿಎಂನ್ನ ನೇಮಿಸಿ ಸಚಿವ ಸಂಪುಟ ಇತ್ತೀಚೆಗೆ ನಿರ್ಧರಿಸಿತ್ತು. ವಿವಿಯಲ್ಲಿನ ಕುಲಪತಿಗಳ ಸ್ಥಾನವನ್ನ ರಾಜ್ಯಪಾಲರಿಗೆ ಕೊಡಲಾಗಿದೆ. ಈ ಸ್ಥಾನವನ್ನ ತೆಗೆದುಹಾಕಲಾಗಿದೆ ಎಂದರು.
ಯುವನಿಧಿ ಯೋಜನೆಯಲ್ಲಿ ನಮ್ಮ ಜಿಲ್ಲೆಯ ಒಬ್ಬ ವುದ್ಯಾರ್ಥಿ ಸದಸ್ಯರಾಗಿಲ್ಲ. ಕಾರಣ ಮಾರ್ಕ್ಸ್ ಕಾರ್ಡೇ ನೀಡಿಲ್ಲ. ಸಿಂಡಿಕೇಟ್ ಸಮಿತಿ ಸಭೆ ಕನಿಷ್ 10 ನಡೆಯಬೇಕು. ಕಳೆದ ವರ್ಷ ನಡೆದಿದ್ದು 2 ಸಭೆ ಮಾತ್ರವಾಗಿದೆ. ಗ್ಯಾರೆಂಟಿಯನ್ನ ಬೋಗಸ್ ಎಂದು ಪರಿಗಣಿಸಿದಂತೆ ಕಾಂಗ್ರೆದ್ ಕಂಡು ಬರುತ್ತಿದೆ. ಇಲ್ಲವೆಂದರೆ ನೀವು ಇಲ್ಲಿಗೆ ಬನ್ನಿ ಪರಿಶೀಲಿಸಿ ಎಂದು ಅರುಣ್ ಸವಾಲು ಹಾಕಿದರು.
ಎಲ್ ಎಂ ಎಸ್ ಸಾಫ್ಟ್ ವೇರ್ ತನಿಖೆಯಾಗುತ್ತಿದೆ ಕೇಳಬೇಕೆಂದರೆ ಸಚಿವರು ಗೈರಾಗಿದ್ದಾರೆ. ಯುಎಸ್ ಸಿಎಂ ಸಾಫ್ಟ್ ಸಮಸ್ಯೆಯಿದೆ. ಭ್ರಷ್ಠಾಚಾರದ ಬಗ್ಗೆ ಕೇಳಬೇಕೆಂದರೆ ಸಚಿವರ ನಾಪತ್ತೆಯಾಗಿದ್ಸಾರೆ ಎಂದು ವಿವರಿಸಿದರು.
ಘಟಿಕೋತ್ಸವದಲ್ಲಿ ಮಕ್ಕಳಿಗೆ ಗೌರವ ಸಿಕ್ಕಂತೆ ಸಚಿವರಿಗೂ ಗೌರವ ಸಿಗುತ್ತದೆ. ಘಟಿಕೋತ್ಸವನ್ನ ಈವೆಂಟ್ಸ ಮ್ಯಾನೇಜ್ ಮೆಂಟ್ ಗೆ ನೀಡಲಾಗಿದೆ. ಇದು ಸಹ ಹಣ ಹೊಡೆಯುವ ಹುನ್ನಾರವಾಗಿದೆ. ವಿವಿಯ ಆಡಳಿತದಲ್ಲಿ 500 ಜನ ಸಿಬ್ಬಂದಿಗಳಿದ್ದಾರೆ ಇಷ್ಟು ಜನ ಬೇಕಾ ಎಂದರೆ ಉತ್ತರವಿಲ್ಲ. ಈ ಘಟಿಕೋತ್ಸವಕ್ಕೆ ಇವರನ್ನ ಬಳಸಿಕೊಳ್ಳಬಹುದಿತ್ತು. ಆದರೆ ಮಾಡಲಿಲ್ಲ. ಸ್ಪೋರ್ಟ್ಸ್ ಕೋಟಾದಲ್ಲಿ ಒಂದು ರೂ ವ್ಯಯವಾಗಿಲ್ಲ. ಈ ಹಣ ಗುತ್ತಿಗೆ ನೌಕರಿಗೆ ನೀಡಲಾಗಿದೆ ಎಂದು ದೂರಿದರು.
ಕುವೆಂಪು ವಿವಿಯ ಸನಸ್ಯೆ ಬಗೆಹರಿಸಿ ಇಲ್ಲವೆಂದರೆ ಉನ್ನತ ಸಚಿವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ. ರಾಜ್ಯ ಪಾಲರನ್ನಭದಲಿಸುವ ಬದಲು ನೀವೆ ಕುಲಪತಿಗಳಾಗಿ ಎಂದು ಆಗ್ರಹಿಸಿದರು.
ಸಚಿವರು ಗೌರವಯುತವಾಗಿ ನಡೆದುಕೊಳ್ಳಲಿ
ಸಚಿವ ಮಧು ಬಂಗಾರಪ್ಪನವರಿಗೆ ಹೆಸರು ಸೂಚಿಸದೆ ಎಚ್ಚರಿಸಿದ ಡಿ.ಎಸ್ ಅರುಣ್ ಸಂಸದರನ್ನ ಅಗೌರವದಿಂದ ಟೀಕೆ ಮಾಡಿದರೆ ನಮ್ಮ ಬೂತ್ ಅಧ್ಯಕ್ಷ ನಿಮ್ಮ ಟೀಕೆಗಳಿಗೆ ಉತ್ತರಿಸುತ್ತಾನೆ. ಅಭಿವೃದ್ಧಿಗೆ ಪೂರಕವಾಗಿರುವ ಸಂಸದರಿಗೆ ನೀವು ಸಾಥ್ ನೀಟಿ. ಅಗೌರವದ ಟೀಕೆ ಮಾಡಿದರೆ ಏನು ಸಿಗತ್ತೆ. ಕಳೆದ 20 ತಿಂಗಳಲ್ಲಿ ಹೊಸ ಯೋಜನೆಗಳನ್ನ ಜಿಲ್ಲಾ ಉಸ್ತುವಾರಿ ಸಚಿವರು ತೋರಿಸಿದರೆ ಅವರನ್ನ ನಾವು ಒಪ್ಪಿಕೊಳ್ಳುತ್ತೇವೆ. ಹೊಸ ಯೋಜನೆ ತಾರದೆ ಅಗೌರವದ ಟೀಕೆ ಮಾಡಲು ಅವರಿಗೆ ಅಧಿಕಾರವಿಲ್ಲ ಎಂದರು.
ಎಲ್ಲವೂ ಸರಿ ಹೋಗಲಿದೆ
39 ಬಿಜೆಪಿಯ ಸಂಘಟನಾ ಮಂಡಲಗಳಿವೆ ಐದು 23 ಜಿಲ್ಲೆಯ ಜಿಲ್ಲಾಧ್ಯಕ್ಷರನ್ನ ಪಾರದರ್ಶಕರಾಗಿ ಆಯ್ಕೆ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಚುನಾವಣೆ ಅಧಿಕಾರಿಗಳಜೊತೆಗೆ ಮಾತನಾಡಿದೆ. ಸಹಮತದಿಂದ ನಡೆದುಕೊಳ್ಳಲಾಗಿದೆ 15 ದಿನಗಳಲ್ಲಿ ಎಲ್ಲವೂ ಸರಿಪಡಿಸಲಾಗುವುದು ಎಂದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಬಣವೂ ಪ್ರಯತ್ನಿಸಲಿ ಬೇಸರವಿಲ್ಲ. ಆದರೆ ಜಗಳಗಳು ನಾಲ್ಕು ಗೋಡೆಯಲ್ಲಿರಲಿ ಎಂಬುದು ನಮ್ಮ ಆಶಯ. ಬಿಜೆಪಿ ಒಂದೇ ಪರಿಹಾರವೆಂದರು.