ಮದ್ಯ ಸೇವಿಸುವಾಗ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಹಲ್ಲೆ

It is reported that a person was stabbed and injured in an incident that occurred during the consumption of alcohol. This disease was admitted to Megan Hospital.


ಸುದ್ದಿಲೈವ್/ಶಿವಮೊಗ್ಗ

ಮದ್ಯ ಸೇವನೆ ವೇಳೆ ಪ್ರಸ್ತಾಪವಾದ ವಿಷಯದಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಗಾಯಗೊಂಡವನನ್ನ‌ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಜ.13 ರಂದು ಬೆಳಗಿನ ಜಾವ  01.30 ಪಿಎಂ ಗಂಟೆಗೆ ಕಿರಣ್ ಎಂಬುವರು ವಿನೋಬ ನಗರ ಪೊಲೀಸ್  ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಆನಂದ್, ನಿತಿನ್, ಮೋಹನ್, ಮಾಲತೇಶ,, ರಾಕೇಶ್ ಅಡ್ಡು ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.   

ಕಿರಣ್ ಎಂಬುವರ ಸ್ನೇಹಿತನಾದ ಸದಾನಂದ ಇವರಿಗೆ ಆನಂದ ಬಿನ್ ಜಯರಾಮ, ನಿತಿನ್ ಬಿನ್ ನಾಗರಾಜ, ಮೋಹನ ಬಿನ್ ಜಯರಾಮ, ಮಾಲತೇಶ ಬಿನ್ ರಾಜು, ರಾಕೇಶ್, ಆಡು ಮತ್ತು ಇತರರು ದಿನಾಂಕಃ-12/01/2025 ರಂದು ರಾತ್ರಿ 10.15 ರ ಸಮಯದಲ್ಲಿ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ದೂರು ದಾಖಲಾಗಿದ್ದು ಘಟನೆ ಸಾಗರ ರಸ್ತೆಯ ಬಾರ್ ಬಳಿ ನಡೆದ ಘಟನೆಯಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.  

6 ಜನರ ಜೊತೆ ಪಾರ್ಟಿ ಮಾಡುವಾಗ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಈ ವೇಳೆ ಕಿರಣ್ ಗೆ 02 ಹೊಡೆತ ಹೊಡೆದು ಯಾರನ್ನ ಕರೆಸುತ್ತೀಯೋ ಕರೆಸೂ ಎಂದು ಬೆದರಿಕೆ ಹಾಕಿದ್ದಾರೆ.  ಆಗ ಕಿರಣ್ ತನ್ನ ಸ್ನೇಹಿತನಾದ ಸದಾನಂದ ಬಿನ್ ನಾಗರಾಜ ಇವರನ್ನ ಗಾಡಿಕೊಪ್ಪ ಬಾರ್ ವೊಂದರ ಪಕ್ಕ ಬರಲು ತಿಳಿಸಿದ್ದಾರೆ.  

ಸದಾನಂದರವರು ಬಂದ ನಂತರ ಪುನಃ ಜಗಳ ಪ್ರಾರಂಭವಾಗಿ 6 ಜನರ ಪೈಕಿ 03 ಜನ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ.  ಹಲ್ಲೆಗೊಳಗಾದ ಸದಾನಂದ ಇವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close