ಅಟ್ಟಹಾಸ ಮೆರೆದ ಅರಣ್ಯ ವಾಹನ ಚಾಲಕ


A complaint has been registered at the Holehonur police station against the forest driver who stopped the tractor that was taking the bamboo cuttings used for planting temoto and rammed it to the Mavinakatte forest office.

ಸುದ್ದಿಲೈವ್/ಹೊಳೆಹೊನ್ನೂರು

ಟೆಮೊಟೋ ನೆಡಲು ಬಳಸುವ ಬಿದಿರಿನ ಕಡ್ಡಿಯನ್ನ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ತಡೆದು ಮಾವಿನಕಟ್ಟೆ ಫಾರೆಸ್ಟ್ ಕಚೇರಿಗೆ ಹೊಡಿ ಎಂದ‌ ಅಟ್ಟಹಾಸ ಮೆರೆದ ಅರಣ್ಯ ಚಾಲಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಜ.13 ರಂದು ಬೆಳಿಗ್ಗಿನ ಜಾವ 3-30 ಕ್ಕೆ ಅರಬಿಳಚಿ ಕ್ಯಾಂಪ್, ವಾಸಿ ಪಳನಿ ಎಂಬುವರ ಕೆಎ-14-ಬಿ-4256 ರ 407 ವಾಹನದಲ್ಲಿ ಬಿದಿರು ಸೀಬನ್ನು ತುಂಬಿಕೊಂಡು ಕೂಡ್ಲಿಗೆರೆಯಿಂದ ದಾವಣಗೆರೆಯ ರೈತರಿಗೆ ಕೊಡಲು ಕೈಮರ ಮಾರ್ಗವಾಗಿ ಕ್ರೈಮರ ಸರ್ಕಲ್ ಹತ್ತಿರ ಹೋಗುತ್ತಿರುವಾಗ ಅರಣ್ಯ ಇಲಾಖೆ ಎಂದು ಇರುವ ಬೋರ್ಡ ಇರುವ ಬುಲೋರ ಜೀಪೊಂದು ಬಂದು ಅಡ್ಡನಿಂತಿದೆ.

ಪಳನಿ ಅವರ ಟ್ರ್ಯಾಕ್ಟರ್ ವಾಹನವನ್ನು ಅಡ್ಡ ಹಾಕಿ ವಾಹನದಲ್ಲಿ ಏನಿದೆ ಎಂದು ತಪಾಸಣೆ ಮಾಡಿದ ವ್ಯಕ್ತಿ ಈ ಬಿದಿರನ್ನು ಮಾವಿನಕಟ್ಟೆ ಪಾರೆಸ್ಟ ಆಪೀಸಿಗೆ ಹೊಡೆಯೋ ಎಂದು ಗದರಿಸಿದ್ದಾನೆ. ಅದಕ್ಕೆ ಪಳನಿಯವರು ಇದು ಟಮೊಟ ಗಿಡಕ್ಕೆ ನೆಡುವ ಬಿದಿರಿನ ಕಡ್ಡಿ ದಾವಣಗೆರೆಗೆ ಹೊಯುತ್ತಿದ್ದೇನೆ ಎಂದಿದ್ದಾರೆ. 

ಅದಕ್ಕೆ  ನನಗೆ ಹಿಂದಿರುಗಿ ಮಾತನಾಡುತ್ತೀಯಾ ಎಂದು ಪಳನಿಯವರ ಕೊರಳ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದು ಅವರ ವಾಹನದಲ್ಲಿದ್ದ ಲಾಟಿಯನ್ನು ತೆಗೆದು ಕೊಂಡು ಬಂದು ಮೈಕೈಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಜೊತೆಯಲ್ಲಿದ್ದ ಕೃಷ್ಣ ಮೂರ್ತಿ ರವರು ಗಲಾಟೆ ಬಿಡಿಸಲು ಮುಂದಾದಾಗ ಅವರಿಗೂ ಸಹ ಹೊಡೆದು ಪಳನಿಯ ಮೊಬೈಲ್ ನ್ನು ಕಸಿದುಕೊಂಡು  ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ. 

ನಂತರ ಪಳನಿಯವರು ಪರಿಚಯಸ್ತರಾದ ಅಹರತೊಳಲು ವಾಸಿ ಸಂದೀಪ ಹಾಗೂ ಅರಬಿಳಚಿ ಕ್ಯಾಂಪ್ ವಾಸಿ ಕೆ ರಾಮಲಿಂಗ ರವರನ್ನು ಕರೆದುಕೊಂಡು ಕಚೇರಿಗೆ ಹೋಗಿ ವಿಚಾರಿಸಿದಾಗ ಹಲ್ಲೆ ಮಾಡಿದವನು ಅನಿಲ್ ಬಿನ್ ಚಂದ್ರಪ್ಪ ಅರಣ್ಯ ಇಲಾಖೆಯ ವಾಹನ ಚಾಲಕ ನೆಂದು ತಿಳಿದು ಬಂದಿದೆ. 

ಹೀಗೆ ಕರ್ತವ್ಯ ಮರೆತು ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೊರಟ ಚಾಲಕ ಅನಿಲ್ ಬಿನ್ ಚಂದ್ರಪ್ಪನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close