![]() |
A suicide hydra took place between a female nurse and a doctor at a hospital in rural Bhadravati. |
ಸುದ್ದಿಲೈವ್/ಭದ್ರಾವತಿ
ಭದ್ರಾವತಿ ಗ್ರಾಮಾಂತರ ಭಾಗದ ಆಸ್ಪತ್ರೆಯಲ್ಲಿ ಮಹಿಳಾ ನರ್ಸ್ ಮತ್ತು ವೈದ್ಯೆಯರ ನಡುವಿನ ಆತ್ಮಹತ್ಯೆಯ ಹೈಡ್ರಾಮ ನಡೆದಿದೆ. ಭದ್ರಾವತಿ ಬಿಆರ್ ಪಿ ಆಸ್ಪತ್ರೆಯಲ್ಲಿ ಒಂದು ಗಂಟೆ ಮುಂಚೆ ನರ್ಸ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರೆ ಒಂದು ಗಂಟೆಯ ನಂತರ ವೈದ್ಯೆಯೂ ಸಹ ಘಟನೆಯಿಂದ ಬೇಸತ್ತು ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದಾರೆ.
ಮಹಿಳಾ ವೈದ್ಯೆಯ ವಿರುದ್ಧ ಮಾನನಸಿಕ ಕಿರುಕುಳ ಆರೋಪ ಎಸಗಿ ಮಹಿಳಾ ನರ್ಸ್ ನಿಂದ ಆತ್ಮಹತ್ಯೆ ಯತ್ನ ನಡೆದಿದೆ. ಬಿಆರ್ ಪಿ ಸರ್ಕಾರಿ ಆಸ್ಪತ್ರೆಯ ನರ್ಸ್ ಸುಕನ್ಯಾ ಆತ್ಮಹತ್ಯೆ ಯತ್ನಿಸಿದ್ದಾರೆ.
ನರ್ಸ್ ಸುಕನ್ಯಾರಿಂದ ಆತ್ಮಹತ್ಯೆ ಯತ್ನ ನಡೆದರೆ, ಇತ್ತ ಡಾ.ಹಂಸವೇಣಿಯು ಸಹ ಘಟನೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಟ್ಟಿನಲ್ಲಿ ಆತ್ಮಹತ್ಯೆಗೂ ಹೈಡ್ರಾಮಾ ನಡೆಯುತ್ತಿದೆ ಎಂಬ ಶಂಕೆಗೆ ಘಟನಾವಳಿಯು ಸಾಕ್ಷಿಯಾಗುತ್ತಿದೆ.
ಡಾ.ಹಂಸವೇಣಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸ್ಲೀಪಿಂಗ್ ಟ್ಯಾಬ್ಲೆಟ್ ಸೇವಿಸಿ ಆತ್ಮಹತ್ಯೆಗೆ ನರ್ಸ್ ಸುಕನ್ಯಾ ಮುಂದಾಗಿದ್ದಾರೆ. ಕಳೆದ ೫ ವರ್ಷದಿಂದ ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿರುವ ಸುಕನ್ಯಾ ನರ್ಸ್ ಆಗಿದ್ದರು. ಬಿಆರ್ ಪಿ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಇವರು ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಂದು ಬೆಳಗ್ಗೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸುಕನ್ಯಾ ಅಸ್ವಸ್ಥಗೊಂಡಿದ್ದರು. ಅವರನ್ನ ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಿಬ್ಬಂದಿಗಳು ದಾಖಲಿಸಿದ್ದಾರೆ. ಸುಕನ್ಯಾರನ್ನು ಭೇಟಿ ಮಾಡಿದ ಡಿಹೆಚ್ ಒ ಡಾ.ನಟರಾಜ್ ಆರೋಗ್ಯ ವಿಚಾರಿಸಿದ್ದಾರೆ.
ಸುಕನ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದ ಡಿಎಚ್ಒ ಘಟನೆಗೆ ವೈಯಕ್ತಿಕ ವಿಷಯ ಕಾರಣ ಎಂದು ಡಾ.ನಟರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವುದಾಗಿ ಹೇಳಿದ ಡಿಎಚ್ಒ ತಿಳಿಸಿದದ್ದಾರೆ. ಇದಾದ ಒಂದು ಗಂಟೆಯ ಅವಧಿಯಲ್ಲಿ ಡಾ.ಹಂಸವೇಣಿಯೂ ಸಹ ನಿದ್ರೆ ಗುಳಿಗೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.