![]() |
Shimoga Municipal Corporation Accounts Manager has fallen into Lokayukta's trap. He fell into the trap of Lokayukta while accepting bribe from the contractor. |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆಯ ಲೆಕ್ಕ ವಿಭಾಗದ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಗುತ್ತಿಗೆದಾರನ ಬಳಿ ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಭದ್ರಾವತಿ ಮೂಲದ ಗುತ್ತಿಗೆದಾರ ಸುನೀಲ್ ಎಂಬುವರು 3 ಲಕ್ಷದ ಕೆಲಸ ಮಾಡಿ ಮುಗಿಸಿದ್ದು ಬಿಲ್ ಮಾಡಿಸಿಕೊಳ್ಳಲು ಅಕೌಂಟ್ ವಿಭಾಗದ ಸಿದ್ದೇಶ್ 12 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದನು. ಇಂದು ಕಚೇರಿಯಲ್ಲಿಯೇ 10 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ.
ದಾಳಿಯಲ್ಲಿ ಸಿದ್ದಿಬಿದ್ದ ಅಧಿಕಾರಿಯನ್ನ ಸಿದ್ದೇಧ್ ಎಂದು ಗುರುತಿಸಲಾಗಿದ್ದು, ಇವರು ಅಕೌಂಟ್ ಸೆಕ್ಷನ್ ನಲ್ಲಿ ವ್ಯವಸ್ಥಾಪಕರಾಗಿದ್ದರು.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ, ಇನ್ಸ್'ಪೆಕ್ಟರ್ ಗಳಾದ ಸುರೇಶ್, ಪ್ರಕಾಶ್ ಸೇರಿದಂತೆ ಮತ್ತವರ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.