ಕಾಂಗ್ರೆಸ್ ಷಂಡ ಸರ್ಕಾರ, ಪ್ರೋ ಭವಾನ್ ನೇಣು ಹಾಕಿಕೊಳ್ಳಲಿ-ಚೆನ್ನಿ ಕೆಂಡಮಂಡಲ

MLA Chennabasappa expressed indignation that the cow protection act was taken up by the Congress due to the incident of cutting the cow's udder.


ಸುದ್ದಿಲೈವ್/ಶಿವಮೊಗ್ಗ

ಗೋವಿನ ಕೆಚ್ಚಲನ್ನ ಕತ್ತರಿಸಿದ ಘಟನೆಯಿಂದ ಗೋಸಂರಕ್ಷಣ ಕಾಯ್ದೆಯನ್ನ ಕಾಂಗ್ರೆಸ್ ಸರ್ಕಾರ ಆಪೋಷಣ ತೆಗೆದುಕೊಂಡಿದೆ ಎಂದು ಶಾಸಕ ಚೆನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಾಮರಾಜ್ ಪೇಟೆ ಜಾಗದಲ್ಲಿ ವಿನಾಯಕ ನಗರದಲ್ಲಿ ನಡೆದ ದೃಷ್ಕೃತ್ಯವನ್ನ‌ ಮುಸ್ಲೀಂ ಕಿಡಿಗೇಡಿಗಳು ನಡೆಸಿದ್ದಾರೆ. ಈ ಹಿಂದೆ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದರೆ, ಈಗ ಹಿಂದೂಗಳು ಪೂಜಿಸುವ ಮೂಕ ಪ್ರಾಣಿಗಳ ಮೇಲೆ ದಾಳಿ ನಡೆದಿದೆ

ಚಾಮರಾಜ ಪೇಟೆಯ ವಿನಾಯಕ ನಗರದಲ್ಲಿ ಡ್ರಗ್ ಮಾಫೀಯ ಜಾಗವಾಗಿದೆ. ಈ ಕೃತ್ಯಗಳು ಮಾನಸಿಕವಾಗಿ ದಾಳಿ ನಡೆಯುವ ಸಂಚಿದೆ. ಇದನ್ನ‌ ನಡೆಸುವ ಮೂಲಕ ಹಿಂದೂಗಳ ಜನಸಂಖ್ಯೆಯನ್ನ ಕಡಿಮೆ ಮಾಡುವ ಹುನ್ನಾರವೂ ಇದೆ. ಪಶುಸಂಗೋಪನ ಆಸ್ಪತ್ರೆಯನ್ನ 8-9 ತಿಂಗಳ ಹಿಂದೆ ಪಶುಸಂಗೋಪನೆ ಆಸ್ಪತ್ರೆ ಬೇಡ ಎಂದು ಬೇರೆ ಕಟ್ಟಡ ನಿರ್ಮಾಣ ನಡೆಸುವ ಪ್ರಯತ್ನ ನಡೆದಿತ್ತು ಎಂದು ಹೇಳಿದರು. 

ನಾನು ಅಲ್ಲಿರುವ ಕಾರ್ಯಕರ್ತರೊಂದಿಗೆ ಮಾತನಾಡಿದಾಗ ಗೋವಿನ ಕೆಚ್ಚಲನ್ನ ಕತ್ತರಿಸಿದ್ದು ಮಾತ್ರವಲ್ಲ ಗೋವಿನ ಮೂತ್ರ ವಿಸರ್ಜಿಸುವ ಜಾಗಕ್ಕೆ ಕಬ್ಬಿಣದ ಸರಳನ್ನ ಹಾಕಲಾಗಿತ್ತು. ಸರ್ಕಾರ ಸತ್ತಿದೆ ಆದರೆ ಕಾನೂನು ಪಾಲಿಸುವ ಪೊಲೀಸರು ಸಮರ್ಪಕ ಪಾಲನೆಯಾಗುತ್ತಿಲ್ಲ ಎಂದು ದೂರಿದರು. 

ಗೋಮಾಂಸ ತಿಂದರೆ ಏನು ಮಹಾ ಪಾಪ ಬರುತ್ತೆ ಎಂದು ಸದನದಲ್ಲಿ ಸಿಎಂ ಮಾತನಾಡುತ್ತಾರೆ ಎಂದರೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಚೀಲಗಳಲ್ಲಿ ಗೋವಿನ ಚರ್ಮ, ಮೂಳೆಯನ್ನ ನದಿಗೆ ಬಿಡಲಾಗುವುದು. ಗೋಹತ್ಯೆ ತಡೆಯಲು ಕ್ರಮ ಆಗದೆ ಇರುವ ಕಾರಣ ಈಘಟನೆಗಳು ಪುನರ್ವರ್ತನೆ ಯಾಗಿದೆ ಗೋವಿನ ಶಾಪಕ್ಕೆ ಗುರಿಯಾಗ್ತೂರ ಎಂದು ಶಾಸಕರೂ ಶಾಪಹಾಕಿದರು. 

ಮೇವು ತಿನ್ನಲು ಹೋದ ಗೋವಿನ ಬಾಯಿ ಸ್ಪೋಟಗೊಂಡು ಗಾಯವಾಗಿರುವ ಘಟನೆ ನಡೆದಿದೆ. ಒಂದೆಡೆ ಕೆಚ್ಚಲು ಕತ್ತರಿಸುವ, ಮೇವಿಗೆ ಸ್ಪೋಟಕ ಹಾಕಲಾಗುತ್ತುರುವ ಘಟನೆ ಕಣ್ಣುಮುಙದೆ ಇದ್ದರೂ ಪರಿಣಾಮಕಾರಿ ಕಾನೂನು ಇಲ್ಲವೆಂಬುದು ಸ್ಪಷ್ಟವಾಗಿದೆ. ವಿನಸಯ ನಗರ ವಡಾವಣೆಯಲ್ಲಿ ಮಾದಕ ದ್ರವ್ಯವನ್ನ ಸ್ವೀಕರಿಸುವ ಗುಂಪೊಂದು ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸುತ್ತದೆ. ಗೋವಿನ ಕೆಚ್ಚಲು ಕತ್ತರಿಸುವ  ಬಿಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಬಂಧಿಸಿರುವ ಆರೋಪಿಗಳಲ್ಲಿ ಬಿಹಾರಿಗಳು ಹೆಚ್ಚಿದೆ ಎಂದರು.

ಇದಕ್ಕೆ ಕುಮ್ಮಕ್ಕು ರಾಜ್ಯ ಸರ್ಕಾರವೇ. ಗೋವುಹತ್ಯೆಗೆ ಸರ್ಕಾರವೂ ಕಾರಣವಾಗಿದೆ. ಗೋಸಂರಕ್ಷಣೆಗಾಗಿ ಯೋಜನೆ ಕಾಯ್ದೆಗಳಿವೆ. ಆದರೆ ಅದರ ಕಾರ್ಯಕ್ರಮಗಳು ಎಲ್ಲಿ ನಡೆಯುತ್ತಿದೆ ಗೊತ್ತಿಲ್ಲ ಎಂದ ಶಾಸಕರು 70 ಹೊಸ ಗೋಶಾಲೆ ಕೊಡಬೇಕಾಗಿತ್ತು. ರಾಜ್ಯ ಸರ್ಕಾರ ರದ್ದುಮಾಡಿದೆ. ಜಮೀನು ಮಂಜೂರಾದರೂ ಸದನ ಸಮಿತಿ ರದ್ದುಪಡಿಸಿದೆ ಎಂದರು. 

ಬಿಜೆಪಿ ಸರ್ಕಾರವಿದ್ದಾಗ ನಡೆದಿದ್ದ ಈ ಕಾರ್ಯವನ್ನ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಲಾಗಿದೆ. 70 ಜಾಗ ನೀಡಲು ತೀರ್ಮಾನಿಸಿದ ನಂತರ 70 ಹೆಚ್ಚಿನ ಗೋಶಾಲೆಗಳನ್ನ ನಿರ್ಮಿಸಲು ಜಾಗ ಗುರಿತಿಸಲು ತೀರ್ಮಾನಿಸಲಾಗಿತ್ತು. ಮುಸ್ಲೀಂರ ವಿರುದ್ಧ ಬಿಜೆಪಿ ಇದೆ ಅಂತ ಅಲ್ಲ ಠಾಣೆಯ ಮೇಲೆ ದಾಳಿ ನಡೆಸಿದವರನ್ನ ಆರೋಪಿಗಳು ಎಂದು ಗುರುತಿಸಿದರೆ ಅವರನ್ನ ಆರೋಪ ಸ್ಥಾನದಿಂದ ಮುಕ್ತಗೊಳಿಸುತ್ತೀರ. ಇದು ಬಿಜೆಪಿಗೆ ಬೇಸರ ತರುವ ಸಂಗತಿ ಎಂದರು. 

ಗೋವುಗಳ ಅಂಕಿಸಂಖ್ಯೆ

ಸಹನೆ ದೌರ್ಬಲ್ಯವಲ್ಲ. ಹಿಂದೂಗಳು ಸಹನೆ ಕಟ್ಟೆ ಒಡೆದರೆ ತಡೆಯಲು ಯಾರಕೈಯಲ್ಲೂ ಸಾಧ್ಯವಿಲ್ಲ. 2007 ರಲ್ಲಿ 1,50,70325 ಇತ್ತು. 2012 ರಲ್ಲಿ 95,16,484  ಇದ್ದ ಗೋವಿನ ಸಂಖ್ಯೆ2019 ರಲ್ಲಿ 84 ಲಕ್ಷದ 69 ಸಾವಿರದ 4 ಇತ್ತು.   ಶೇ.11%  ಗೋವುಗಳ ಸಂಖ್ಯೆ ಕಡಿಮೆಯಾಗಿದೆ. ಯಾವ‌ರೋಗದಿಂದ ಗೋವುಗಳ ಸಂಖ್ಯೆ ಕಡಿಮೆಯಾಗಿಲ್ಲ. ಹಾಗಾದರೆ ಗೋವಿನಹತ್ಯೆ ಏನಾಗುತ್ತಿದೆ ಎಂದು ಪ್ರಶ್ನಿಸಿದರು. 

ಪರಿಸರ ಕಾಪಾಡುವ, ನದಿಗಳ ಸಂರಕ್ಷಣೆ ಮಾಡಬೇಕು ಎಂಬ ಸಂಧರ್ಭದಲ್ಲಿ ನೇತ್ರಾವತಿ ನದಿಗೆ ಗೋತ್ಯಾಜ್ಯಗಳನ್ನ‌ಮೂಟೆಗಟ್ಟಲೆ ನಡೆಯುತ್ತದೆ. ಗೋವಿನ ಹತ್ಯೆ ನಡೆದಂಗೆ ಹಂದಿಗಳ ಹತ್ಯೆ ಯಾಕೆ ಆಗೊಲ್ಲ ಎಂದು ಹೇಳುದರೆ ಕಾಂಗ್ರೆಸ್ ಬೊಬ್ಬೆಹಾಕುತ್ತೆ ಎಂದು ಗರಂ ಆದರು‌.

ಮುಸ್ಲೀಂ ಸಮಾಜವೂ ಹಿಂದೂ ಭಾವನೆಗೆ ಗೌರವ ಕೊಡಬೇಕು

ಗೋಹತ್ಯೆಯನ್ನ ಮಸ್ಲೀಂ ಸಮಾಜ ಬಂದ್ ಮಾಡಬೇಕು. ಸಮಾಜ ಕರೆ ಕೊಡಬೇಕು. ಸೆಕ್ಯುಲರ್ ಸ್ಟೇಟ್ ಎಂದ ಮೇಲೆ ಹಿಂದೂಗಳ ಭಾವನೆಗೆ ಗೌರವ ತರುವ ಯಾವಕೆಲಸ ನಡೆಯುತ್ತಿದೆ. ಸಮಾಜ ಸಹ ಕರೆ ನೀಡಬೇಕು. ಇದನ್ನ ಹೇಳಲು ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ವಾ? ಎಂದು ಕಿಡಿಕಾರಿದರು. 

ನೇಣು ಹಾಕಿಕೊಂಡು ಸಾಯಲಿ

ನಾನು ಸಹ ಚಾಮರಾಜ ಪೇಟೆಯ ವಿನಯಕ ನಗರಕ್ಕೆ ಹೋಗಿಬರುವೆ. ಹಿಂದೂಗಳ ಮತ್ತು ಗೋವಿನಸ್ಥಿತಿಗತಿಯನ್ನ ಅರಿಯುವೆ ಎಂದರು. ಹಿಂದೂ ಎನುವುದೇ ಅವಮಾನಕರ ಎಂದ ಪ್ರೊ.ಭಗವಾನ್ ನೇಣು ಹಾಕಿಕೊಂಡು ಸಾಯಿ ಎನುವೆ ಎಂದ ಶಾಸಕ ಚೆನ್ನಬಸಪ್ಪ ವಿಷಯಕೆದಕಿ ಓಡಿಹೋಗುವ ಭಗವಾನ್ ಈ ರಾಷ್ಟ್ರದಲ್ಲಿ ಇರಬಾರದು. ಸಹಿಷ್ಣತೆಯಿಂದ ಇರಬೇಕು ಇಲ್ಲ ನೇಣು ಹಾಕಿಕೊಂಡು ಸಾಯಲಿ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close