![]() |
The year's first gold jewelery theft FIR has been registered at KSRTC bus stand. The first theft complaint in 11 days was registered at the Doddapet police station |
ಸುದ್ದಿಲೈವ್/ಶಿವಮೊಗ್ಗ
KSRTC ಬಸ್ ನಿಲ್ದಾಣದಲ್ಲಿ ವರ್ಷದ ಮೊದಲ ಚಿನ್ನಾಭರಣ ಕಳುವಿನ ಎಫ್ಐಆರ್ ದಾಖಲಾಗಿದೆ. 11 ದಿನಗಳಲ್ಲಿ ಮೊದಲ ಕಳ್ಳತನದ ದೂರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಪ್ಪನ್ ಪೇಟೆ ಸರ್ಕಾರಿ ಕಾಲೇಜಿನ ದ್ವಿತೀಯ ದರ್ಜೆ ಕೆಲಸ ಮಾಡುತ್ತಿದ್ದ ಮಹಿಳೆ ಶಿವಮೊಗ್ಗಕ್ಕೆ ಬಂದು ಭದ್ರಾವತಿಗೆ ಹೋಗಲು ಬಸ್ ನ ಸೀಟ್ ಹಿಡಿಯಲು ಮುಂದಾದ ವೇಳೆ ಪರ್ಸ್ ನ ಬ್ಯಾಗ್ ಕಳವು ಮಾಡಿದ್ದಾರೆ.
60 ಸಾವಿರ ರೂ. ಕ್ಯಾಶು, ಎಟಿಎಂ ಕಾರ್ಡ್, ಕಾಲೇಜಿನ ದಾಖಲೆಗಳು, ಪಾಸ್ ಬುಕ್, ಮೊದಲಾದ ದಾಖಲಾತಿಗಳು ಕಳುವಾಗಿದೆ. ಬಸ್ ನಿಲ್ದಾಣದಲ್ಲಿ ಭದ್ರಾವತಿಗೆ ಹೋಗಲು ಬೆಂಗಳೂರು ಬಸ್ ಹತ್ತಿದಾಗ ಈ ಶಾಕ್ ಎದುರಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.