ಸುದ್ದಿಲೈವ್/ಶಿವಮೊಗ್ಗ
ಭದ್ರಾವತಿಯ ತಾಲೂಕು ಕಚೇರಿಯ ಬಳಿ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಂಡಿರುವ ಚಿನ್ನಯ್ಯನವರ ಮತ್ತು ಸಂದೀಪರವರ ಸಂವಿಧಾನ ಜಾಗೃತಿ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ದಲಿತ ಸಂಘರ್ಷ ಸಮಿತಿ ಗುರುಮೂರ್ತಿ ಬಣ ಎಸ್ಪಿಗೆ ಮನವಿ ನೀಡಿದ್ದಾರೆ.
ಭದ್ರಾವತಿ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯು ನಮ್ಮದೆಂದು ಸತ್ಯ ಮತ್ತು ಶ್ರೀನಿವಾಸ ಎಂಬುವರು ದಾವೆ ಹೂಡಿದ್ದರು. ಇದನ್ನ ಫೆ.10 ಕ್ಕೆ ತೀರ್ಪು ಕಾಯ್ದಿರಿಸಿ ಆದೇಶಿಸಿದೆ.
ಜೊತೆಗೆ ಭದ್ರಾವತಿ ಡಿವೈಎಸ್ಪಿಗೂ ಸೂಚನೆ ನೀಢಿ ಯಾವುದೇ ಕಾರಣಕ್ಕೂ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನ ಸತ್ಯರವರ ಬಣಕ್ಕೆ ನೀಡಬಾರಷುಎಂದು ಸೂಚನೆಯನ್ನಮಾನ್ಯ ನ್ಯಾಯಾಲಯ ನೀಡಿದೆ.
ಕೆಳ ನ್ಯಾಯಾಯವು ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪನವರ ಸಂಘಟನೆಯನ್ನ ಗುರುಮೂರ್ತಿ ಅವರದ್ದು ಎಂದು ಆದೇಶಿಸಿತ್ತು. ಈ ಆದೇಶವನ್ನ ತಡೆಹಿಡಿಯುವಂತೆ ಆಗ್ರಹಿಸಿ ಸತ್ಯ ಮತ್ತು ಶ್ರೀನಿವಾಸರವರು ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ಈಗ ನ್ಯಾಯಾಲಯ ಅವರ ಮನವಿಯನ್ನ ತಿರಸ್ಕರಿಸಿ ಆದೇಶವನ್ನ ಕಾಯ್ದಿರಿಸಿದೆ.
ಇದರ ಬೆನ್ನಲ್ಲೆ ಜ. 29 ರಂದು ಸತ್ಯರವರ ಬಣ ದಲಿತ ಸಂಘರ್ಷ ಸಮಿತಿ ಪ್ರೊ.ಬಿಕೃಷ್ಣಪ್ಪನವರ ಹೆಸರಿನಲ್ಲಿ ಭದ್ರಾವತಿಯ ವೀರಶೈವ ಸಭಾಭವನದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮಕ್ಕೆ ಮುಂದಾಗಿದೆ. ಇದನ್ನ ಗುರುಮೂರ್ತಿ ಅವರ ಬಣ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕಾರ್ಯಕ್ರಮಕ್ಕೆ ಮುಂದಾಗಿದ್ದು ಅನುಮತಿ ನೀಡದಂತೆ ಆಗ್ರಹಿಸಿದ್ದಾರೆ.
ಇದರಿಂದ ದಲಿತ ಸಂಘರ್ಷ ಸಮಿತಿಗಳ ಬಣ ಬಡಿದಾಟ ಮುಂದುವರೆದಿದೆ.