ಒಳ ಮೀಸಲು ಜಾರಿಗೆ ಮಾದಿಗ ದಂಡೋರ ಆಗ್ರಹ

Shivanna of Madiga Dandora has warned that if the policy of delay in implementing the internal reservation report is not followed as per the Supreme Order, struggle will be inevitable in the coming days.

ಸುದ್ದಿಲೈವ್/ಶಿವಮೊಗ್ಗ

ಸುಪ್ರೀಂ ಆದೇಶದಂತೆ ಒಳ ಮೀಸಲಾಯಿತಿ ವರದಿಯನ್ನ ಜಾರಿಗೊಳಿಸಲು ವಿಳಂಬ ನೀತಿ ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಮಾದಿಗ ದಂಡೋರದ ಶಿವಣ್ಣ ಎಚ್ಚರಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಆಯೋಗ ರಚನೆಗೆ ಸರ್ವೆ ಕಾರ್ಯ ನಡೆಸಲು 2009 ರಂದು ಸರ್ಕಾರ ಒಪ್ಪಿತ್ತು. ಸದಾಶಿವ ಆಯೋಗದ ಅಡಿ ಸರ್ವೆ ಆಗಿದೆ. ಈಗಿನ ಸರ್ಕಾರ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಎತ್ತಿ ಹಾಕಿತ್ತು. 

ರಾಜ್ಯ ಸರ್ಕಾರ ನಮಗೆ ಜಾರಿ ಮಾಡಲು ಹಕ್ಕಿಲ್ಲ ಎಂದಿತು. ಆನೆಕಲ್ ನಾರಾಯಣ ಸ್ವಾಮಿ, ಶಂಕರಪ್ಪನವರು ಸುಪ್ರೀಂಗೆ ಮನವಿ ಸಲ್ಲಿಸಿದ ಪರಿಣಾಮ ಆದೇಶ ಹೊರಗೆ ಬಂದರೂ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಬೊಮ್ಮಾಯಿ ಸರ್ಕಾರ ಅನುಷ್ಠಾನ ಮಾಡುವ ಪ್ರಯತ್ನವನ್ನಾದರೂ ಮಾಡಿತು. ಈಗಿನ ಸರ್ಕಾರ ಎಷ್ಟು ವರ್ಷಗಳ ಕಾಲ ಕಾಲಹರಣ ಮಾಡಲಿದೆ ಗೊತ್ತಿಲ್ಲ. 

ಬೆಳಗಾವಿಯಲ್ಲಿ ಒಳ ಮೀಸಲು ಜಾರಿಗೆ ಸಮಾವೇಶ ನಡೆಸಲಾಯಿತು. ಸಮಾಜಕಲ್ಯಾಣ ಇಲಾಖೆ ಸಚಿವರು ಭಾಗಿಯಾಗಿ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು. ಆದರೆ ಸಮ್ಮೇಳನ ನಡೆದು ತಿಂಗಳು ಕಳೆಯುತ್ತಾ ಬಂದರೂ ಏನೂ ಕ್ರಮ ಆಗಿಲ್ಲ. ಸುಪ್ರೀಂ ಆದೇಶವನ್ನ ಜಾರಿ ಮಾಡಲು ಪ್ರತ್ಯೇಕ ಆಯೋಗ ರಚನೆಗೆ ಭರವಸೆ ನೀಡಿ ಮೂರು ರಿಂಗಳು ಕಳೆದವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸನಾಧಾನ ವ್ಯಕ್ತಪಡಿಸಿದರು.

ನಾಗಮೋಹನ್ ದಾಸ್ ಅವರನ್ನ ಹಲವು ಸಂಘಟನೆ ಭೇಟಿಯಾಗಿದೆ. ಎಂಪೆರಿಕಲ್ ಡಾಟಾದ ಬಗ್ಗೆ ಮಾತನಾಡಲಾಗುತ್ತಿದೆ. 2011 ರಲ್ಲಿ ಸದಾಶಿವ ಆಯೋಗ ಇದನ್ನ ತಿಳಿಸಿದ್ದಾಗಲೂ ವಿಳಂಬ ನೀತಿ ಅನುಸರಿಸುತ್ತಿವೆ ಎಂದರು. 

ಇದೇ ಕಾಲಹರಣ ಮಾಡಿದರೆ ಬೊಮ್ಮಾಯಿ ಸರ್ಕಾರ ಅನುಭವಿಸಿದ ಸೋಲು ಕಾಂಗ್ರೆಸ್ಸೂ ಸಹ  ಮುಂದಿನ ಚುನಾವಣೆಗಳಲ್ಲಿ ಎದುರಿಸಬೇಕಾಗುತ್ತದೆ. ಜ.31 ಕ್ಕೆ ಕೊನೆಯ ದಿನಾಂಕವಾದರೆ ಮಾದಿಗ ದಂಡೋರ ಸುಮ್ಮನೆ ಕೂರಲ್ಲ ಎಂದು  ದಂಡೋರ ಎಚ್ಚರಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close