ನಿನ್ನೆ ಬಜಾರ್ ನಲ್ಲಿ ನಡೆದ ಘಟನೆ-ಓರ್ವ ಬಂಧನ


ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಕಸ್ತೂರ ಬಾ ರಸ್ತೆಯಲ್ಲಿರುವ ಮುರುಡೇಶ್ವರ ದೇವಸ್ಥಾನದ ಬಳಿ ಹಿರಾಲಾಲ್ ಸನ್ ಎಂಬುವರ ಮೇಲೆ ಬೈಕ್ ನಲ್ಲಿ ಬಂದ ಇಬ್ವರು ಕಿಡಿಗೇಡಿಗಳು ಹಲ್ಲೆ ನಡೆಸಿ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಬಂಧಿಸಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಇಂದು ಘಟನೆಯನ್ನ ಖಂಡಿಸಿ ಇಂದು ಜೈನ ಸಮುದಾಯದ ವ್ಯಾಪಾರಸ್ಥರು ಗಾಂಧಿ ಬಜಾರ್ ಎಸ್ಪಿ ಮಿಥುನ್ ಕುಮಾರ್ ಗೆ ಮನವಿ ಮಾಡಿದ್ದಾರೆ.  ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಅವರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರಲ್ಲಿ ಒಬ್ಬನನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ನಿನ್ನೆ ಸಂಜೆ 6 ಗಂಟೆಗೆ ನಾಲ್ವರು ಕಚೋರಿ ಮಾರುವ ಅಂಗಡಿಗೆ ಬಂದಿದ್ದಾರೆ. ಕಚೋರಿ ಅಙಗಡಿಗೆ ಬಂದವರು ಹತ್ತಿರದಲ್ಲಿರುವ ಕುಕ್ಕರ್ ಅಂಗಡಿಯ ವಿಳಾಸ ಕೇಳಿದ್ದಾರೆ. ಅಂಗಡಿ ಬಾಗಿಲು ಹಾಕಿದ್ದಕ್ಕೆ ನಮಗೆ ತಪ್ಪು ವಿಳಾಸ ಹೇಳುತ್ತೀಯಾ ಎಂದು ಗಲಾಟೆ ಮಾಡಿದ್ದಾರೆ. 

District Defense Officer Mithun Kumar G.K has informed the media that one person has been arrested in connection with the case of two miscreants who came on a bike attacked Hiralal Sun and stabbed him with a knife near the Murudeshwara temple on Kastura Ba Road yesterday.

ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಎಸ್ಪಿ ಅವರು ವರ್ತಕರಿಗೆ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಮದನ್ ಯಾನೆ ಮಂಜುನಾಥ್ ಎಂಬ ಸುಮಾರು 35 ವರ್ಷದವನನ್ನ ಬಂಧಿಸಲಾಗಿದೆ. ಉಳಿದ ಮೂವರ ಪತ್ತೆಗಾಗಿ ಕ್ರಮ ಜರುಗಿಸಲಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close