FIR has been registered against three people who were threatening the public by holding a long while riding a bike and threatening them not to cross their bike.
ಸುದ್ದಿಲೈವ್/ಶಿವಮೊಗ್ಗ
ಬೈಕ್ ನಲ್ಲಿ ಹೋಗುವಾಗ ಲಾಂಗ್ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಮಾಡಿ, ತಮ್ಮ ಬೈಕ್ ನ್ನ ದಾಟದಂತೆ ಬೆದರಿಕೆ ಹಾಕುತ್ತಿದ್ದ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜ.13 ರಂದು ಸಂಜೆ ಸುಮಾರು 5-30 ರಿಂದ 5-45 ಗಂಟೆಯ ಸಮಯದಲ್ಲಿ ಶಿವಮೊಗ್ಗ ನಗರದ ಮಿಳಘಟ್ಟ ಮುಖ್ಯ ರಸ್ತೆಯಿಂದ ಅಣ್ಣಾನಗರದ ಕಡೆ ಹೋಗುವ ಮಾರ್ಗದಲ್ಲಿ ಅಶೋಕನಗರ ರೆಹಮಾನ್, ಲಷ್ಕರ್ ಮೊಹಲಾ ವಾಸಿ ಮುಸ್ತಫಾ ಮತ್ತು ಜೆ,ಪಿ ನಗರ ವಾಸಿ ಜಾಫರ್ ರವರುಗಳು ಬೈಕ್ ನಲ್ಲಿ ಹೋಗುತ್ತಿದ್ದರು.
ಬೈಕ್ ನಲ್ಲಿ ಹೋಗುವಾಗ ಈ ಮೂವರು ಕೈಗಳಲ್ಲಿ ಅಪಾಯಕಾರಿ ಆಯುಧಗಳಾದ ದೊಡ್ಡ ಲಾಂಗ್ ಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ತೋರಿಸುತ್ತಾ ಭಯವನ್ನುಂಟು ಮಾಡುತ್ತಾ, ತಮ್ಮ ಬೈಕ್ ನ್ನ ಓವರ್ ಟೇಕ್ ಮಾಡಿಕೊಂಡು ಮುಂದೆ ಹೋಗದಂತೆ ಹಿಂಬದಿ ಬರುವ ವಾಹನ ಸವಾರರಿಗೆ ತಡೆಯುತ್ತಾ ಹೋಗುತ್ತಿರುವುದಾಗಿ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ಬಂದಿದೆ.
ತಕ್ಷಣ ಪೊಲೀಸರು ಅಣ್ಣಾನಗರದ ಬಳಿ ಹೋಗುವಾಗ ನಾಲ್ಕನೆ ಕ್ರಾಸ್ ಬಳಿ ಲಾಂಗ್ ಗಳನ್ನು ಹಿಡಿದುಕೊಂಡು ಹೋಗುತ್ತಿದ್ದವರ ಬಳಿ ಪೊಲೀಸರು ಹೋದಾಗ, ಸಮವಸ್ತ್ರದಲ್ಲಿದ್ದ ಪೊಲೀಸರನ್ನ ನೋಡಿ ಬೈಕ್ ಚಾಲನೆ ಮಾಡಿಕೊಂಡು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಆರೋಪಿಗಳು ಮೀಳಘಟ್ಟ ಮುಖ್ಯ ರಸ್ತೆಯಿಂದಲೂ ಲಾಂಗ್ ಗಳನ್ನು ಹಿಡಿದುಕೊಂಡು ಜನರಿಗೆ ತೋರಿಸುತ್ತಾ ಭಯವನ್ನುಂಟು ಮಾಡಿದ್ದು ಅಲ್ಲದೆ ಹಿಂಬಾಗ ಬರುವ ವಾಹನ ಸವಾರಿಗೆ ಮುಂದೆ ಹೋಗದಂತೆ ತಡೆಯುತ್ತಾ ತೊಂದರೆ ನೀಡಿದ ಮೂವರ ವಿರುದ್ಧ ದೂರು ದಾಖಲಾಗಿದೆ.