ಅವಿರೋಧ ಆಯ್ಕೆ

Elections were held on Monday for the post of Chairman and Vice-Chairman of the Primary Cooperative Agriculture and Rural Development Bank here and the Chairman and Vice-Chairman were elected unopposed.


ಸುದ್ದಿಲೈವ್/ಭದ್ರಾವತಿ ಜ 14:

ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮುಂದಿನ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು.

ಸಾಲ ಪಡೆಯದ ಕ್ಷೇತ್ರದಿಂದ ಬಿಕೆ ಶಿವಕುಮಾರ್ ಅಧ್ಯಕ್ಷರಾಗಿ, ವೀರಪುರದ ಮಹಿಳಾ ಮೀಸಲು ಕ್ಷೇತ್ರದ ಮೀರಾಬಾಯಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಡಾ|| ರಾಜಕುಮಾರ್ ರಸ್ತೆಯ ಪಿ ಎಲ್ ಡಿ ಬ್ಯಾಂಕ್ ನಲ್ಲಿ  ಚುನಾವಣೆ ನಡೆಯಿತು 

 6234 ಸದಸ್ಯರನ್ನು ಹೊಂದಿರುವ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಗೆ 15 ನಿರ್ದೇಶಕರಿದ್ದು, 13 ಜನ ಆಯ್ಕೆಯಾಗಿ ಇಬ್ಬರು ನಾಮ ನಿರ್ದೇಶನ ಸದಸ್ಯರಿದ್ದಾರೆ.

ಡಿಸೆಂಬರ್ ನಲ್ಲಿ ನಿರ್ದೇಶಕರ ಚುನಾವಣೆಯಲ್ಲಿ 12 ಜನ ಅವಿಧವಾಗಿ ಆಯ್ಕೆಯಾಗಿ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು ಉಳಿದಂತೆ  ಸರ್ಕಾರದ ನಾಮನಿರ್ದೇಶಕರಾಗಿ  ಯಂಕಾರೆಡ್ಡಿ ಹಾಗೂ ಖಾಸಗಡ ಪದನಿಮಿತ್ತ ಕ್ಷೇತ್ರದಿಂದ ರಾಜ್ಯ ಬ್ಯಾಂಕಿನ ಪ್ರತಿನಿಧಿ ಎನ್ ರಘುನಾಥ ನಾಮನಿರ್ದೇಶಕರಾಗಿ ನೇಮಕಗೊಂಡರು. ನೂತನ ನಿರ್ದೇಶಕರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು.

 ಅಧ್ಯಕ್ಷರಾಗಿ ಆಯ್ಕೆಯಾದ ಬಿ ಕೆ ಶಿವಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರವು ಅತಿ ಹೆಚ್ಚು ಶಾಖೆಗಳನ್ನು ಹೊಂದಿದ್ದು ಅದರಲ್ಲಿ ಪ್ರಾಥಮಿಕ ಸಹಕರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಹ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದು ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಹಣದ ಸೌಲಭ್ಯಗಳನ್ನು ಪಡೆದು ಬ್ಯಾಂಕಿನ ಸದಸ್ಯರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಈಗಾಗಲೇ ರಾಜ್ಯ ಸರ್ಕಾರ ಅತಿ ಕಡಿಮೆ ಬಡ್ಡಿಗೆ ರೈತರಿಗೆ ಸಾಲ ನೀಡುತ್ತಿದೆ ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು ನಷ್ಟವಾಗಿರುವ ಅವರ ಬೆಳೆಗಳನ್ನು ಅಂದಾಜು ಮಾಡಿ ಸರ್ಕಾರದಿಂದ ಬೇರೆ ಯಾವುದಾದರೂ ರೀತಿಯ ಸಹಕಾರ ಸಿಗುವುದಾದರೆ ಹೆಚ್ಚಿನ ಶ್ರಮವಹಿಸಿ ರೈತರಿಗೆ ಅನುಕೂಲ ವಾಗುವಂತಹ ವಾತಾವರಣವನ್ನು ಕೊಡಲು ಕ್ಷಮಿಸುವುದಾಗಿ ತಿಳಿಸಿದರು.  ಅಭಿವೃದ್ಧಿ ಬ್ಯಾಂಕ್ ನ ರಾಜ್ಯಾಧ್ಯಕ್ಷ ಷಡಕ್ಷರಿ ರವರಿಗೆ ರೈತರ ಕಷ್ಟಗಳ ಬಗ್ಗೆ  ಮನದಟ್ಟು ಮಾಡಿಕೊಟ್ಟು ಹಣ ಬಿಡುಗಡೆ ಗೊಳಿಸಿಕೊಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

 ತಮ್ಮ ಇಂದಿನ ಸ್ಥಾನದ ಬಗ್ಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದದಿಂದಾಗಿ ಆಯ್ಕೆಗೊಂಡಿದ್ದು ತಮಗೂ ರೈತರ ಸಂಕಷ್ಟಗಳ ಬಗ್ಗೆ ಅರಿವಿದೆ ಮುಂದಿನ ದಿನಗಳಲ್ಲಿ ರೈತರ ಸಂಕಷ್ಟಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೂ ಸಂಸದರಿಗೂ, ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರಿಗೆ ಶಾಸಕ ಬಿಕೆ ಸಂಗಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರಿಗೂ ಹಾಗೂ ಸ್ಥಳೀಯ ನಿವಾಸಿಗಳಾದ ವಿಧಾನಪರಿಷತ್ ಶಾಸಕರಾದ  ಬಲ್ಕಿಸ್ ಬಾನು ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಪರಿಷತ್ ಶಾಸಕರಿಗೂ ತಮ್ಮ ಕೃತಜ್ಞತೆಯನ್ನು ತಿಳಿಸಿದರು. ಜಿಲ್ಲೆಯ ಎಲ್ಲಾ ಸಹಕಾರಿ ಬಂಧುಗಳಿಗೆ ತಮ್ಮ ಕೃತಜ್ಞತೆಯನ್ನು ತಿಳಿಸಿದರು. ಸದ್ಯ ರೈತರಿಂದ ಬರಬೇಕಾಗಿರುವ ಬಾಕಿ ಹಣಕ್ಕೆ ಒಮ್ಮೆಲೆ ವಸುಲಾತಿಗೆ ಕ್ರಮವಹಿಸದೆ ರೈತರೇ ಬ್ಯಾಂಕಿನ ಬೆನ್ನೆಲುಬು ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದೇನೆ, ಅವರಿಗೆ ಸ್ಪಂದಿಸುವ ಮೂಲಕ ಬಾಕಿ ಉಳಿದಿರುವ ಸಾಲದ ಹಣಕ್ಕೆ ಶಾಂತ ರೀತಿಯಲ್ಲಿ ವಸೂಲಾತಿಯನ್ನು ಮಾಡಲು ತಾವು ದಾರಿ  ಹುಡುಕುವುದಾಗಿ  ತಿಳಿಸಿದರು. 

ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಮೀರಾಬಾಯಿ ಮಾತನಾಡಿ ಮಹಿಳಾ ರೈತರ ಬಗ್ಗೆ ತಾವು ಹೆಚ್ಚಿನ ಗಮನಹರಿಸುವುದಾಗಿ ತಿಳಿಸಿದರು ಮಹಿಳಾ ರೈತರಿಗಿರುವ ಸಂಕಷ್ಟಗಳ ಬಗ್ಗೆ ತಮಗೆ ಅರಿವಿದೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಬರಬೇಕೆಂಬ ಅಭಿಲಾಷನು ತಾವು ಹೊಂದಿರುವುದಾಗಿ ತಿಳಿಸಿದರು ಅಧ್ಯಕ್ಷರು ತಿಳಿಸಿದಂತೆ ರಾಜ್ಯದಲ್ಲಿ ಆಳ್ವಿಕೆಯಲ್ಲಿರುವ  ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟ ಮಹಿಳೆಯರ ಪ್ರಾತಿನಿಧ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಇದರ ಸದುಪಯೋಗ ಪಡೆದು ಬ್ಯಾಂಕನ್ನು ಅಭಿವೃದ್ಧಿ ಪದದತ್ತ ಕೊಂಡೆಯುವುದಾಗಿ ತಿಳಿಸಿದರು ಶಾಸಕ ಬಿಕೆ ಸಂಗಮೇಶ್ವರ ರವರ ಆಶೀರ್ವಾದದಿಂದ ನಿರ್ದೇಶಕರಾಗಿದ್ದ ತಾವಿಂದು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಶಾಸಕರಿಗೆ ಧನ್ಯವಾದಗಳುಗಳನ್ನು ತಿಳಿಸಿದರು. 

ಅಧ್ಯಕ್ಷ ಸ್ಥಾನಕ್ಕೆ ಐದು ಜನ ನಾಮಪತ್ರ ಸಲ್ಲಿಸಿದ್ದು ಶಿವಕುಮಾರ್ ಅವರನ್ನು ಬೆಂಬಲಿಸಿ ನಾಲ್ಕು ಜನ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು ಇದರಿಂದಾಗಿ ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು, 

ಚುನಾವಣೆ ನಡೆಯುವ ಸಂದರ್ಭದಲ್ಲಿ ನಗರಸಭಾ ಪ್ರಭಾರಿ ಅಧ್ಯಕ್ಷ ಎಂ ಮಣಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ  ಕಾಂತರಾಜ್, ನಗರಸಭಾ ಸದಸ್ಯರುಗಳು,  ಕಾಂಗ್ರೆಸ್ ಪಕ್ಷದ ನಗರ ಹಾಗೂ ಗ್ರಾಮಾಂತರ ಅಧ್ಯಕ್ಷರಾದ  ಎಸ್ ಕುಮಾರ್ ಹಾಗೂ ಎಚ್ ಎಲ್ ಷಡಕ್ಷರಿ, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರ್ಕಾರದ ನಾಮನಿರ್ದೇಶಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕ ಅಧ್ಯಕ್ಷ ಎಸ್ ಮಣಿ ಶೇಖರ್, ಜಿಲ್ಲಾ ಉಪಾಧ್ಯಕ್ಷ ಎಸ್ ಮಲ್ಲಿಕಾರ್ಜುನ್, ವಿಐಎಸ್ಎಲ್ ಕಾರ್ಮಿಕ ಸಂಘದ ಮಾಜಿ ಉಪಾಧ್ಯಕ್ಷ ಎಂ ಬಸವಂತಪ್ಪ ನಿವೃತ್ತ ಕಾರ್ಮಿಕ ಸಂಘದ ರಾಮಲಿಂಗಯ್ಯ ಹಾಗೂ ಮುಕುಂದಪ್ಪ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

 ಚುನಾವಣಾ ಅಧಿಕಾರಿಯಾಗಿ ಅಭಿವೃದ್ಧಿ ಅಧಿಕಾರಿ  ಶಾಂತರಾಜ್ ಕಾರ್ಯನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close