ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಬ್ಬರು ರಾಷ್ಟ್ರಭಕ್ತರ ಬಳಗದವರು

Elections were held for the post of chairman and vice-chairman of City Co-operative Bank, and leaders of the Rashtra Bhakta group won for both the posts.


ಸುದ್ದಿಲೈವ್/ಶಿವಮೊಗ್ಗ

ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಪ್ರತಿಕ್ರಿಯೆ ನಡೆದಿದ್ದು, ಎರಡೂ ಸ್ಥಾನಕ್ಕೆ  ರಾಷ್ಟ್ರ ಭಕ್ತರ ಬಳಗದ ಪ್ರಮುಖರು ಗೆದ್ದು ಬೀಗಿದ್ದಾರೆ. 

ಅಧ್ಯಕ್ಷರಾಗಿ ಬಳಗದ STD ರಾಜು ಗೆದ್ದರೆ, ಸಿಟಿ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ  ಪ್ರೇಮಾ ಚಂದ್ರಶೇಖರ್ ರವರು ಗೆದ್ದಿದ್ದಾರೆ. ಬಳಗದ ಇಬ್ಬರ ಗೆಲುವು ರಾಷ್ಟ್ರಭಕ್ತರ ಬಳಗದ ಹುಮ್ಮಸ್ಸನ್ನ ಇಮ್ಮಡಿಗೊಳಿಸಿದೆ. ಈ ವೇಳೆ ಬಳಗದ ಕೆ.ಈ.ಕಾಂತೇಶ್   ಅಭಿನಂದನೆಗಳನ್ನ ಸಲ್ಲಿಸಿದ್ದಾರೆ. 

ಅದರಲ್ಲೂ ಪ್ರೇಮಾ ಚಂದ್ರಶೇಖರ್ ಅವರು ಮಹಿಳ ಮೀಸಲಾತಿಯಲ್ಲಿ ಆಯ್ಕೆಯಾಗಿ ಪ್ರಥಮ  ಗೆಲುವಿನಲ್ಲೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ನೂತನ ಖಜಾಂಚಿಯಾಗಿ - ಬಿ ಲೋಕೇಶ್


ಪ್ರತಿಷ್ಠಿತ ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಖಜಾಂಚಿಯಾಗಿ  ಎಸ್‌ಟಿ ಮೀಸಲು ಕ್ಷೇತ್ರದಿಂದ ನಿರ್ದೇಶಕರ ಚುನಾವಣೆಯಲ್ಲಿ ಅಧಿಕ ಮತ ಜಯಭೇರಿ ಬಾರಿಸಿದ್ದ ಯುವ ಕಾಂಗ್ರೆಸ್ ನಗರಾಧ್ಯಕ್ಷ ಬಿ ಲೋಕೇಶ್ ರವರು  ಆಯ್ಕೆಯಾಗಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close