![]() |
Auto drivers have appealed to the district collector against the Shimoga traffic police. Auto drivers have filed a petition against the PSI, which recently arrested drivers. |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಟ್ರಾಫಿಕ್ ಪೊಲಿಸ್ ವಿರುದ್ಧ ಆಟೋ ಚಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಇತ್ತೀಚೆಗೆ ಚಾಲಕರ ಕೊರಳು ಪಟ್ಟಿ ಹಿಡಿದ ಪಿಎಸ್ಐ ವಿರುದ್ಧ ಆಟೋ ಚಾಲಕರು ಮನವಿ ನೀಡಿದ್ದಾರೆ.
ಪಿಎಸ್ಐ ಅವರ ಕಾರ್ಯ ಮೆಚ್ಚುವಂತಾದರೂ ಚಾಲಕರ ವಿರುದ್ಧ ನಡೆದು ಕೊಂಡ ರೀತಿ ಚಾಲಕರನ್ನ ಸಿಡಿದೇಳುವಂತೆ ಮಾಡಿದೆ. ಕಂಡಕಂಡಲ್ಲಿ ಚಾಲಕರನ್ನ ತಡೆದು ಸಾರ್ವಜನಿಕರ ಎದುರೇ ಮರ್ಯಾದೆ ಇಲ್ಲದಂತೆ ಮಾಡಿರುವುದಾಗಿ ಚಾಲಕರು ಆಕ್ರೋಶ ವ್ಯಕ್ತಪಡಿಸಿ
ಇಂದು ಕರ್ನಾಟಕ ಚಾಲಕರ ಒಕ್ಕೂಟ ಜಿಲ್ಲಾ ಶಾಖೆ ಸೈಯದ್ ಆದಿಲ್ ನೇತೃತ್ವದಲ್ಲಿ ಡಿಸಿಯವರಿಗೆ ಮನವಿ ಸಲ್ಲಿಸಲಾಗಿದ್ದು ಚಾಲಕರ ಮಾನಮ ರ್ಯಾದೆಯನ್ನ ಈ ಟ್ರಾಫಿಕ್ ಪೊಲೀಸರು ಕಳೆಯದಿರಲಿ ಎಂದು ಆಗ್ರಹಿಸಿದ್ದಾರೆ.
ಇದು ಇಲ್ಲಿಗೆ ನಿಲ್ಲುತ್ತಿಲ್ಲ. ನಾಳೆ ಕಟ್ಟಡ ರಾಜ್ಯ ಕಾರ್ಮಿಕರು ಮತ್ತು ಅಸಂಘಟಿತರ ಕಾರ್ಮಿಕ ಸಂಘಟನೆ ದೇವರಾಜ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ಈ ಪಿಎಸ್ಐ ವಿರುದ್ಧ ಕ್ರಮ ಜರುಗಿಸದಿದ್ದರೆ ಇನ್ನೂ ಏನೇನು ನೋಡಬೇಕಿದೆ ಕಾದು ನೋಡಬೇಕಿದೆ. ಮಿನಿಟ್ ಮೇಲೆ ಬಂದಂತಹ ಈ ಪಿಎಸ್ಐ ವಿರುದ್ಧ ಇಲಾಖೆ ಅಂಕುಶ ಹಾಕಲಿದೆಯಾ ಕಾದು ನೋಡಬೇಕಿದೆ.