ನಮ್ಮ ಟಿವಿ ವಿ. ಜಗದೀಶ್ ಸೇರಿದಂತೆ 13 ಜನರಿಗೆ ವೃತ್ತಿ ಸೇವಾ ಪ್ರಶಸ್ತಿ

13 people including Namma TV Editor-in-Chief V. Jagadish received Vritti Seva Award from Rotary Central. Ex-MLA Ashok Naik said that no matter what the profession is, one gets satisfaction when one serves with loyalty and honesty.

ಸುದ್ದಿಲೈವ್/ಶಿವಮೊಗ್ಗ

ರೋಟರಿ ಸೆಂಟ್ರಲ್‌ನಿಂದ ನಮ್ಮ ಟಿವಿ ಮುಖ್ಯ ಸಂಪಾದಕ ವಿ.ಜಗದೀಶ್ ಸೇರಿದಂತೆ 13 ಜನರಿಗೆ ವೃತ್ತಿ ಸೇವಾ ಪ್ರಶಸ್ತಿ ದೊರೆತಿದೆ. ವೃತ್ತಿ ಯಾವುದೇ ಇರಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡಿದಾಗ ಸಾರ್ಥಕತೆ ದೊರೆಯುತ್ತದೆ ಎಂದು ಮಾಜಿ ಶಾಸಕ ಅಶೋಕ್ ನಾಯ್ಕ್ ಹೇಳಿದರು.

ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ 13 ಜನರಿಗೆ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃತ್ತಿ ಸೇವಾ ಪ್ರಶಸ್ತಿ ಪ್ರದಾನ ನೀಡಿ ಮಾತನಾಡಿ, ರೋಟರಿ ಸಂಸ್ಥೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ. ಇದರಿಂದ ಇತರರಿಗೂ ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.

ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಮಾತನಾಡಿ, ಜನವರಿ ತಿಂಗಳಲ್ಲಿ ಪ್ರಪಂಚಾದ್ಯಂತ ರೋಟರಿ ಸಂಸ್ಥೆಗಳು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತೇವೆ. ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಅತಿ ಹೆಚ್ಚು ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಜನಮಾನಸ ತಲುಪಿದೆ. ಶಿವಮೊಗ್ಗ ಸೆಂಟ್ರಲ್ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಹೊತ್ತು ನೀಡಿದೆ ಎಂದರು.

ವೃತ್ತಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಕಿರಣ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದೇವೆ. ಹೆಚ್ಚು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಕ್ಲಬ್ ವತಿಯಿಂದ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.

ನಿಯೋಜಿತ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣ್ ಗೌಡ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುತ್ತ ಮತ್ತು ಸಮಾಜದಲ್ಲಿ ಸೇವೆ ಮಾಡಿದವರನ್ನು ಗುರುತಿಸುತ್ತ ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು. 

ವೃತ್ತಿ ಶ್ರೇಷ್ಠ ಪ್ರಶಸ್ತಿ ವಿತರಣೆ: 1. ಮುತ್ತಮ್ಮ   (ಮನೆ ಕೆಲಸ), 2. ದಿನೇಶ್   (ಕಾರ್ಪೊರೇಷನ್ ಮ್ಯಾನ್ ಡ್ರೈವರ್), 3. ಶ್ರೀನಿವಾಸ್ (ಜೆಂಟ್ಸ್ ಬ್ಯೂಟಿ ಪಾರ್ಲರ್), 4. ನಾಗರಾಜ್ (ಟೀ ಸಪ್ಲೈ), 5. ಬಸವರಾಜಪ್ಪ (ಪೋಸ್ಟ್ ಮ್ಯಾನ್), 6. ಕುಮಾರ್ ಜೆ (ಮೇಸ್ತ್ರಿ), 7. ಜಗದೀಶ್  (ನಮ್ಮ ಟಿವಿ), 8. ಮಾಲತೇಶ್ (ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ), 9. ಜೇಮ್ಸ್ ರತ್ನಂ {ಹೋಮ್ ನರ್ಸಿಂಗ್ ಸರ್ವಿಸ್), 10. ಈಶ್ವರ್ ಭಟ್ (ಶಾರದಾದೇವಿ ಅಂದರ ವಿಕಾಸ ಶಾಲೆಯ ಆಡಳಿತ ಅಧಿಕಾರಿ), 11. ಬಸವರಾಜ್ ಜೆಡಿ (ಮುಖ್ಯ ಶಿಕ್ಷಕರು), 12. ಲಕ್ಷ್ಮಣ್ (ಮುಖ್ಯ ಶಿಕ್ಷಕರು) ಹಾಗೂ 13. ರಮೇಶ್ (ಶಿಕ್ಷಕರು) ಅವರಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್ ಮಾತನಾಡಿ, ವೃತ್ತಿ ಸೇವಾ ಪ್ರಶಸ್ತಿಯ ಬಗ್ಗೆ ವಿವರಣೆ ನೀಡಿದರು. ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಜಿ.ವಿಜಯ್ ಕುಮಾರ್, ಚುಡಾಮಣಿ ಪವಾರ್, ಆನಂದ್ ಹಾಗೂ ಕ್ಲಬ್ ಕಾರ್ಯದರ್ಶಿ ಈಶ್ವರ್, ಬಸವರಾಜ್, ಗೀತಾ ಜಗದೀಶ್, ಶುಭಾ ಚಿದಾನಂದ ಇತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close