ಸುದ್ದಿಲೈವ್/ಶಿವಮೊಗ್ಗ
ಲಷ್ಕರ್ ಮೊಹಲ್ಲಾದಲ್ಲಿ ಎರಡು ಗ್ಯಾಂಗ್ ವಾರ್ ಗಳ ನಡುವೆ ನಡೆದಿದ್ದ ಘಟನೆ ಕೊಲೆಯಾಗಿ ಅಂತ್ಯವಾಗಿತ್ತು. ಆ ವೇಳೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಾಲಾಪರಾಧಿ ಯಾಗಿ ಹೊರಹೊಮ್ಮಿದ್ದ ಯುವಕ ಮತ್ತೊಂದು ಪ್ರಕರಣದಲ್ಲಿ ಅಂದರ್ ಆಗಿದ್ದಾನೆ. ಗಾಂಜಾ ಸೇವನೆ ಪ್ರಕರಣದಲ್ಲಿ ಅಂದರ್ ಆಗಿದ್ದಾನೆ.
2023 ರಲ್ಲಿ ಲಷ್ಕರ್ ಮೊಹಲ್ಲಾದ ಜನತಾ ಮಟನ್ ಸ್ಟಾಲ್ ಎದುರು ಯಾಸಿನ್ ಕುರೇಶಿ ಮತ್ತು ಆದಿಲ್ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ಯಾಸಿನ್ ಕುರೇಶಿಯ ಪತ್ನಿಯ ತಮ್ಮ ಬುರಾನ್ ಗಾಂಜಾ ಸೇವಿಸುವ ಚಟಕ್ಕೆ ಮಾರಿಹೋಗಿದ್ದ. ಆತನ ಗಾಂಜಾ ಸೇವನೆ ಬಿಡಿಸುವ ವಿಷಯದಲ್ಲಿ ಆದಿಲ್ ಮತ್ತು ಯಾಸಿನ್ ಕುರೇಶಿ ನಡುವೆ ಗ್ಯಾಂಗ್ ವಾರ್ ನಡೆದು ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಪ್ರಕರಣದಲ್ಲಿ ಸುಹೇಲ್ ಯಾನೆ ಮೋಹಿನುದ್ದೀನ್ ಯಾನೆ ಡೇಂಜರ್ ಬಾಲಾಪರಾಧಿಯಾಗಿದ್ದ.
ಈಗ 18 ವರ್ಷ ತುಂಬಿದ್ದು, ಗ್ಯಾಙಗ್ ವಾರ್ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಗಾಂಜಾ ಸೇವಿಸಿ ಸಾರ್ವಜನಿಕ ಉಪಟಳ ನೀಡುವ ಮತ್ತು ಕೊಲೆ ಪ್ರಕರಣ ನಡೆಯುವ ಸಾಧ್ಯತೆಯಿದೆ ಎಂಬ ಅನುಮಾನದ ಹಿನ್ನಲೆಯಲ್ಲಿ ಕೋಟೆ ಪೊಲೀಸರು ಆತನನ್ನ ಬಂಧಿಸಿ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.