ಮದುವೆಯಾಗುವುದಾಗಿ ನಂಬಿಸಿ ವಿವಾಹಿತ ಮಹಿಳೆಗೆ ಕೈಕೊಟ್ಟ ಯುವಕ-ಮಹಿಳೆ ಆತ್ಮಹತ್ಯೆ

The incident which led to the suicide of a woman believing that she was going to get married took place in the 3rd turn of Milaghat yesterday


ಸುದ್ದಿಲೈವ್/ಶಿವಮೊಗ್ಗ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬಳ ಆತ್ಮಹತ್ಯೆಗೆ ಕಾರಣವಾದ ಘಟನೆ ನಿನ್ನೆ ಮಿಳಘಟ್ಟದ 3 ನೇ ತಿರುವಿನಲ್ಲಿ ನಡೆದಿದೆ. 

ಮೈಸೂರಿನ ನಿವಾಸಿ ಪುಷ್ಪಲತಾ (31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾಳೆ. ಈಕೆಯ ಗಂಡ ಈಶ್ವರ್ ಅತಿಯಾಗಿ ಕುಡಿಯುತ್ತಿದ್ದ ಕಾರಣ ಗೆಳೆಯನೊಂದಿಗೆ ಶಿವಮೊಗ್ಗದ ಮಿಳಘಟ್ಟಕ್ಕೆ ಮಕ್ಕಳನ್ನ ಕರೆದುಕೊಂಡು ಬಂದು ನೆಲೆಸಿದ್ದರು. 

14 ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಪಾಲಿಬೆಟ್ಟದ ನಿವಾಸಿ ಈಶ್ವರ್ ಎಂಬುವನನ್ನ ಪುಷ್ಪಲತಾ ಮದುವೆಯಾಗಿದ್ದರು. ಒಂದು ವರ್ಷ ಪಾಲಿ ಬೆಟ್ಟದಲ್ಲಿದ್ದ ಪುಷ್ಪಲತಾ ಮತ್ತು ಈಶ್ವರ್ ನಂತರ ಮೈಸೂರಿಗೆ ಬಂದು ನೆಲೆಸಿದ್ದರು. ಈಶ್ವರ್ ಅತಿಯಾದ ಮದ್ಯ ಸೇವಿಸುತ್ತಿದ್ದ ಕಾರಣ ಪುಷ್ಪಲತಾ ಗಂಡನಿಂದ ಒಂದುವರ್ಷದಿಂದ ಪ್ರತ್ಯೇಕವಾಗಿ ಬದುಕು ಸಾಗಿಸಿದ್ದರು. 

ಈ ಮದ್ಯೆ ಭರತ್ ಎಂಬಾತನಿಗೆ ಪುಷ್ಪಲತಾರೊಂದಿಗೆ ಸ್ನೇಹ ಬೆಳೆದಿತ್ತು. ನಂಯರ ಪುಷ್ಪಲತಾ ಶಿವಮೊಗ್ಗಕ್ಕೆ ಕೆಲಸ ಹುಡುಕಿಕೊಙಡು ಬಂದು ಮಿಳಘಟದ ಮೂರನೇ ತಿರವಿನಲ್ಲಿ ಮೂವರು ಮಕ್ಕಳೊಂದಿಗೆ ಬಂದು ನೆಲೆಸಿದ್ದರು. ಆದರೆ ಪ್ರೀತಿಸುವುದಾಗಿ ಹೇಳುತ್ತಿದ್ದ ಭರತ್ ಮದುವೆಯಾಗುವುದಾಗಿ ಭರವಸೆ ನೀಡಿದ್ದನು. 

ಆದರೆ ಮದುವೆಯಾಗುವುದಾಗಿ ಹೇಳುತ್ತಿದ್ದ ಭರತ್ ಪುಷ್ಪಲತಾರನ್ನ ಮದುವೆಯಾಗದೆ ಮುಂದೂಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಭರತ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close