ರಕ್ತಸ್ರಾವದಿಂದ ಗರ್ಭಿಣಿ ಸಾವು

An incident of a one-month pregnant woman with miscarriage and bleeding has been reported. This incident is a mirror to the suspicion that there is no proper treatment for pregnant women.


ಸುದ್ದಿಲೈವ್/ಶಿವಮೊಗ್ಗ

ಒಂದುವರೆ ತಿಂಗಳು ಗರ್ಭಿಣಿಗೆ ಗರ್ಭಪಾತವಾಗಿ ಅತಿಯಾದ ರಕ್ತಸ್ರಾವವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಗರ್ಭಿಣಿಯರಿಗೂ ಸೂಕ್ತ ಚಿಕಿತ್ಸೆ ಇಲ್ಲವೆಂಬ ಅನುಮಾನಕ್ಕೆ ಈ ಘಟನೆ ಕೈಗನ್ನಡಿಯಾಗಿದೆ. 

ಹೊಸನಗರ ತಾಲೂಕಿನ ನಗರ ಹೋಬಳಿಯ ದುಬಾರತಟ್ಟಿ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದ ಅಶ್ವಿನಿ ಕೆ.ಆರ್ ಎಂಬುವರು ಒಂದು ವರೆ ವರ್ಷದ ಹಿಂದೆ ಅರಳಿ ಪ್ರಕಾಶ್ ಗೆ ಮದುವೆ ಮಾಡಿಕೊಡಲಾಗಿತ್ತು. ನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು.

ಅರಳಿ ಪ್ರಕಾಶರವರು ಕೋಳಿ ಅಂಗಡಿ ನಡೆಸಿಕೊಂಡಿದ್ದರು. ಜ.24 ರಂದು ಅಶ್ವಿನಿಯು ಗರ್ಭಿಣಿಯಾಗಿರುವುವುದು ತವರು ಮನೆಗೆ ತಿಳಿಸಿದ್ದರು. ಆದರೆ ಜ.26 ರಂದು ರಕ್ತಸ್ರಾವವಾಗಿದ್ದರಿಂದ ಸಾಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಮರುದಿನ ಬೆಳಿಗ್ಗೆ ಶಿಕ್ಷಕಿ ತವರು ಮನೆಯವರೊಂದಿಗೆ ಮಾತನಾಡಿದ್ದರು.

ಮತ್ತೆ ಸಂಜೆ ರಕ್ತಸ್ರಾವ ಹೆಚ್ಚಾದ ಪರಿಣಾಮ ಅವರನ್ನ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಖಾಸಗಿ ಆಸ್ಪತ್ರೆಗೆ ಕರೆತರುವಾಗಲೆ ಶಿಕ್ಷಕಿ ಸಾವನ್ನಪ್ಪಿದ್ದಾಳೆ. ಇತ್ತೀಚೆಗೆ ಬಾಣಂತಿ ಸಾವು ಸಂಚಲನ ಮೂಡಿಸಿತ್ತು. ಈಗ ಗರ್ಭಿಣಿಯರನ್ನೂ ಉಳಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close