![]() |
MLA Chennabasappa alleged that shelter houses should be distributed and the district in-charge minister is doing injustice to the poor as a result of his greed for power. |
ಸುದ್ದಿಲೈವ್/ಶಿವಮೊಗ್ಗ
ಆಶ್ರಯ ಮನೆಗಳ ಹಂಚಿಕೆ ಆಗಬೇಕಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರದ ಪಿತ್ತ ನೆತ್ತಿಗೇರಿಸಿಕೊಂಡ ಪರಿಣಾಮ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ವಸತಿ ಸಚಿವರು ಶಿವಮೊಗ್ಗಕ್ಕೆ ಬರಬೇಕಿತ್ತು. 652 ಮನೆಗಳ ಹಂಚಿಕೆಯಾಗಬೇಕಿತ್ತು. ಅವರು ಬಾರದಂತೆ ನೋಡಿಕೊಂಡ ಜಿಲ್ಲಾ ಉಸ್ತುವಾರಿ ಸಚಿವರು ತಡೆದಿರುವುದು ಯಾವ ಉದ್ದೇಶಕ್ಕೆ ಗೊತ್ತಿಲ್ಲ. ಇದು ಬಡವರ ಮನಸ್ಸಿಗೆ ಘಾಸಿಯಾಗಿದೆ. ನನಗೆ ಬಹಳ ನೋವಾಗಿದೆ ಎಂದರು.
ಡಿ.7 ರಂದು ಮನೆಹಂಚಬೇಕಿತ್ತು. ಆಯುಕ್ತರನ್ನ ನಿಯಂತ್ರಿಸುವ ಮೂಲಕ. ಈಗ ವಸತಿ ಸಚಿವರಿಗೆ ನಾನು ಇಲ್ಲದಿರುವಾಗ ಹೇಗೆ ಬರ್ತೀರ ಎಂದು ಸಚಿವರು ನಿಯಂತ್ರಸಿದ್ದಾರೆ. ನಾನು ಆಶ್ರಯ ಸಮಿತಿ ಅಧ್ಯಕ್ಷನಾಗಿದ್ದು ನನ್ನನ್ನ ಸಂಪರ್ಕಿಸಿಲ್ಲ. ಮೂರು ಬಾರಿ ವಸತಿ ಸಚಿವರ ಆಗಮನವನ್ನ ತಡೆಹಿಡಿಯಲಾಯಿತು ಎಂದು ಆರೋಪಿಸಿದರು.
ವಸತಿ ಸಚಿವ ಜಮೀರ್ ಬರಲು ಸಿದ್ದರಿದ್ದರು. ನಾನು ಬಡವರ ಪರವಾಗಿದ್ದೀನಿ ಉಸ್ತವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಅದನ್ನೂ ಮಾಡಿದರೂ ವಸತಿ ಸಚಿವರನ್ನ ತಡೆಹಿಡಿದಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಎಂದಿದ್ದಾರೆ.
7 ವರ್ಷ ಕಳೆದಿದೆ. ಬಿಜೆಪಿ ಸರ್ಕಾರ ಇದ್ದಾಗ ಏನು ಮಾಡಿದ್ದರು ಎಂದು ಸಚಿವರು ಪ್ರಶ್ನಿಸುತ್ತಾರೆ. ಕುಡಿಯುವ ನೀರಿನ ವ್ಯವಸ್ಥೆ ಬಿಜೆಪಿ ಸರ್ಕಾರ ಇದ್ದಾಗಲೇ ನಡೆದಿದ್ದು. ಬಡವರು 23 ಕೋಟಿ ಕೊಟ್ಟಿದ್ದಾರೆ. ಭಿಕ್ಷೆ ಕೊಡ್ತಿಲ್ಲ. ಮಾಂಗಲ್ಯ ಸರ ಅಡವಿಟ್ಟು ಹಣಕಟ್ಟಿದ್ದಾರೆ. ಇದು ನಿಮ್ಮಯೋಗ್ಯತೆಗೆ ಸರಿಯಾದ ನಡವಳಿಕೆ ಅಲ್ಲ ಎಂದು ಆಗ್ರಹಿಸಿದರು.
ಆಶ್ರಯ, ಅಕ್ಷಯ ಯೋಜನೆಯನ್ನ ತಂದ ಬಂಗಾರಪ್ಪನವರ ಮಗನ ನಡವಳಿಕೆ ಇದಲ್ಲ. 2021-22 ರಲ್ಲಿ ಕಾರ್ಯಾದೇಶ ಆಗಿರೋದು 199 ಕೋಟಿಯ ಆಶ್ರಯ ಮನೆಗಳು 261 ಕೋಟಿ 98 ಲಕ್ಷಕ್ಕೆ ಏರಿತು. 24 ತಿಂಗಳಲ್ಲಿ ಮುಗಿಸಬೇಕಿತ್ತು. ಇನ್ನೂ ಮುಗಿದಿಲ್ಲ. ಅದೇ ನೋವಿರೋದು. ಇದನ್ನ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನ ನಡೆದಿದೆ 3000 ಮನೆಯಲ್ಲಿ 620 ಮನೆ ಹಂಚಲಾಗಿದೆ. 650 ಮನೆ ಕೊಡಲು ಸಿದ್ದವೆಂದರು.
526 ಮನೆ 3 ತಿಂಗಳಲ್ಲಿ ಮುಗಿಸಲಿದೆ 576 ಮನೆ ಮನ ಹಂಚಲು ಅವಕಾಶವಿದೆ 1152 ಮನೆ ಕೊಡಲು ಅವಕಾಶವಿದೆ. ಈ ಮನೆಗಳು ಶೀಘ್ರದಲ್ಲಿಯೇ ಆಗುತ್ತಾ ಎಂದು ಪ್ರಶ್ನಿಸಿದ ಶಾಸಕರು 142 ಕೋಟಿ ಗುತ್ತಿಗೆ ದಾರನಿಗೆ ಪೇಮೆಂಟ್ ಆಗಿದೆ. ಬಡವರ ವಂತಿಕೆ 23 ಕೋಟಿ ನೀಡಲಾಗಿದೆ ಎಂದರು.
ನಿಮ್ಮ ಅಪ್ಪನ ಮನೆ ಆಸ್ತಿ ಕೇಳ್ತಾ ಇಲ್ಲ. ಜನರನ್ನ ಹಣಕೊಟ್ಟು ಭಿಕ್ಷೆ ಬೇಡುವ ಸ್ಥಿತಿಗೆ ನಿಲ್ಲಿಸಿದ್ದೀರಿ. 150 ಕೋಟಿ ಹಣ ಬಿಡುಗಡೆ ಆಗಿದೆ. ಮನೆಕೊಟ್ಟರೆ ಬ್ಯಾಂಕ್ ನವರು ಪ್ಲೆಡ್ಜ್ ಮಾಡಿಕೊಂಡು ಮನೆ ಹಂಚುತ್ತಾರೆ. ಇದಕ್ಕೆ ಸಚಿವರು ಅಡ್ಡಪಡಿಸುತ್ತೀರಿ. ನೀವು ಇಲ್ಲಿಗೆ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ಸಮಿತಿ ಮಾಡುವ ಕೆಲಸಕ್ಕೆ ಅಡ್ಡಬರ್ತೀರ ಎಂದು ದೂರಿದರು.
ಅಭಿವೃಧ್ಧಿಗೆ ಹಣ ಇಟ್ಟಿದೆ. ಕೊಟ್ಟಿರುವ ಹಣಕ್ಕೆ ಮನೆ ಕೀ ಕೊಡಿ ಎಂದರೆ ಸಚಿವರು ಅವರನ್ನ ಭೀಕ್ಷುಕರನ್ನಾಗಿಸಿದ್ದೀರಿ ಮಧು ಬಂಗಾರಪ್ಪನವರೆ ನಿಮ್ಮಪಿತ್ತ ಇಳಿಸಲು ಬಡವರಿಗೂ ಸಮಯ ಬರುತ್ತೆ ಗೋಪಿಶೆಟ್ಟಿಕೊಪ್ಪದಲ್ಲಿ ಆದ ಟೆಂಡರ್ ನ್ನ ಗೋವಿಂದಾಪುರದಲ್ಲಿ ಕಟ್ಟಿ ಎಂದು ಸಿಸ್ಟಮ್ ನ್ನ ಕೊಲಾಪ್ಸ್ ಮಾಡಿದ್ದೀರಿ. ಪೂರ್ಣ ಕಾಮಗಾರಿ ಮುಗಿಯಬೇಕಿರುವುದು ಫಲಾನುಭವಿಗಳ ಹಣದಲ್ಲಿ ಮುಗಿಸಬೇಕು ಎಂದರು.
ನಾನು ವಸತಿ ಸಚಿವರ ಜೊತೆ ಮೂರುಬಾಲ್ಕುಬಾರಿ ಫೆ.4 ರಂದು ಆಶ್ರಯ ಸಮಿತಿ ಸಭೆಯಿದೆ.ಈ ಹಿಂದೆ ಹಕ್ಕುಚ್ಯುತಿ ಮಂಡನೆ ಮಾಡಿದ್ದೆ. ಸಭಾಧ್ಯಕ್ಷರು ಸಮಾಧಾನ ಪಡಿಸಿದ್ದರು. ಪರಿಹಾರ ಮಾಡದಿದ್ದರೆ ಹಕ್ಕುಚ್ಯುತಿ ಆಟೋಮೆಟಿಕ್ ಆಗಿ ಆಗುತ್ತೆ ಎಂದು ಶಾಸಕರು ವಿವರಿಸಿದರು.
ನಿಮ್ಮ ಮೇಲೆ ಸಚಿವರು ಈಗಲೂ ಪ್ರೀತಿ ತೋರಿದ್ದಾರೆ ಎಂಬ ಮಾಧ್ಯಮಪ್ರಶ್ನೆಗೆ ತೆಗೆದುಕೊಂಡು ಏನು ಪ್ರಯೋಜನ ಎಂದರು ಇನ್ನು ಯಾವುದೇ ಕಾರಣಕ್ಕೂ ಸಹಿಸೊಲ್ಲ. ದಿನಾಂಕ ಫಿಕ್ಸ್ ಮಾಡಿ ಬ್ರಹ್ಮ ಬಂದರು ಇದನ್ನ ತಡೆಯಲ್ಲ ಎಂದರು.
ಹಾಲಪ್ಪನವರಿಗೆ ಸಗಣಿ ತಿನ್ನುತ್ತಿದ್ದರ ಎಂಬ ಮಧು ಹೇಳಿಕೆ ಟಾಂಗ್ ನೀಡಿದ್ದು ಶಾಸಕರು ನೀವೇನು ಧನ ತಿನ್ನುತ್ತಿದ್ದಾರಾ ಎಂದ ಗರಂ ಆದರು. ಸಚಿವರು ಈಗಲಾದರೂ ಸರಿಯಾಗಿ ಎಂದು ಸಲಹೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಹಿರಿಯರಿದ್ದಾರೆ. ಸಂವಿಧಾನದಲ್ಲೇ ಇರುವ ಹಕ್ಕಿನ ಭಾವ ಅದು ಕುಂಭ ಮೇಳದ ಬಗ್ಗೆ ತಾತ್ಸರ ಮಾತನಾಡುತ್ತೀರಿ. ಹಿಂದೂಗಳು ಎಂದರೆ ಖರ್ಗೆಗೆ ತಾತ್ಸಾರ ಮನೋಬಾವ ಬೇಡ. ರಾಹುಲ್ ಗಾಂಧಿ ಹೇಳಿದಂತೆ ಮಾತನಾಡುತ್ತೀರ? ಕುಂಭ ಮೇಳ ಮಾಡುವುದರಿಂದ ಬಡವರಿಗೆ ಏನು ಲಾಭ ಎನ್ನುವ ಖರ್ಗೆ ಮೆಕ್ಕ ಮದೀನಕ್ಕೆ ಹೋಗುವರ ಬಗ್ಗೆನೂ ಹೇಳ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಗಂಗೆಯಲ್ಲಿ ಸ್ನಾನ ಮಾಡಿದರೆ ನರಕಕ್ಕೆ ಹೋಗ್ತಾರೆ ಎನ್ನುತ್ತೀರಿ. ಕಾಂಗ್ರೆಸ್ಸೇ ನರಕಕ್ಕೆ ಹೋಗುತ್ತದೆ. ಕಾಂಗ್ರೆಸ್ ಗೆ ಸ್ವರ್ಗದ ಬಾಗಿಲೇ ತೆರೆಯಲ್ಲ. ನರಕದ ಕೊಠಡಿ ಬೇರೆನೇ ನಿರ್ಮಿಸಲಾಗಿದೆ. ಕುಂಭಮೇಳದಲ್ಲಿ ಕೋಟ್ಯಾಂತರ ಉದ್ಯೋಗ ಸೃಷ್ಠಿಯಾಗಿದೆ. ಹಿಂದೂಗಳನ್ನ ಬೈದು ನಾಯಕರಾಗಬೇಡಿ. ಅಧೋಗತಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.
ಸಂವಿಧಾನವನ್ನ ಪಾಕೆಟ್ ನಲ್ಲಿ ಇಟ್ಟುಕೊಂಡು ಹೋಗುವ ನೀವು ಸ್ವರ್ಗಕ್ಕೇ ಹೋಗಲಿ ಎಂದು. ಆದರೆ ರಾಹುಲ್ ಮಾತುಕೇಳಿದರೆ ನರಕಕ್ಕೆ ಹೋಗುತ್ತೀರಿ ಎಂದು ದೂರಿದರು. ಪಾಲಿಕೆ ಚುನಾವಣೆಗೆ ಸಂಬಂಧಿಸದಂತೆ ಆಯೋಗಕ್ಕೆ ಭೇಟಿ ನೀಡಲಾಗಿತ್ತು. ನಿನ್ನ ಪತ್ರ ಬಂದಿದೆ. ಪತ್ರದಲ್ಲಿ ಮತದಾರರ ಪಟ್ಟಿ ವಿಳಂಬ ಮತ್ತು ಮೀಸಲಾತಿ ನಿಗದಿಯಾಗದ ಕಾರಣ ತಡವಾಗಿದೆ.
ವೋಟರ್ ಲೀಸ್ಟ್ ತಯಾರಿ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ ಎಂದರು.