ಹುಲಿ ಗಣತಿಗೆ ಇಟ್ಟಿದ್ದ ಕ್ಯಾಮೆರಾ ಕಳುವು

Two cameras installed for the tiger census survey were stolen in Hebbandekere survey number 85 of Umblebail. A complaint has been registered in the Tunga Nagar police station.


ಸುದ್ದಿಲೈವ್/ಶಿವಮೊಗ್ಗ

ಹುಲಿ ಗಣತಿ ಸರ್ವೆಕಾರ್ಯಕ್ಕೆ ಅಳವಡಿಸಿದ ಎರಡು ಕ್ಯಾಮೆರಾಗಳು ಕಳುವಾಗಿರುವ ಘಟನೆ ಉಂಬ್ಳೆಬೈಲಿನ ಹೆಬ್ಬಂಡೆಕೆರೆ ಸರ್ವೆ ನಂಬರ್ 85 ರಲ್ಲಿ ನಡೆದಿದೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ರವಿ ಡಿ.ಎನ್ ರವರು ದಿನಾಂಕ: 10/01/2025 ರಂದು ಬೆಳಗ್ಗೆ 11:00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆಂದರೆ, ಪಿರ್ಯಾದಿಯು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, 

ಉಂಬ್ಳೆಬೈಲ್ ಬಫರ್ ಶಾಖೆಯಲ್ಲಿ ಸುಮರು 3.6ವರ್ಷಗಳಿಂದ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಡಿಎನ್. ಉಂಬ್ಳೆಬೈಲ್ ರಾಜ್ಯ ಅರಣ್ಯ ಪ್ರದೇಶದ ಸರ್ವೆ ನಂ.85 ರಲ್ಲಿ ಹೆಬ್ಬಂಡೆಕೆರೆ ಹತ್ತಿರ 2024-25 ನೇ ಸಾಲಿನಲ್ಲಿ ಭದ್ರಾವನ್ಯಜೀವಿ ವಲಯಕ್ಜೆ ಸೇರಿದ ಕ್ಯಾಮೆರಾಗಳಾಗಿವೆ. 

ಜ.6 ರಂದು ಅರಣ್ಯ ಸಿಬ್ಬಂದಿಗಳು ನೋಡಿದಾಗ ಇದ್ದ ಈ ಎರಡೂ ಕ್ಯಾಮೆರಾಗಳು, ಜ.08 ರಂದು ಬೆಳಿಗ್ಗೆ ತಪಾಸಣೆ ನಡೆಸಿದಾಗ ಕಳುವಾಗಿವೆ. ಈ ಬಗ್ಗೆ ರವಿಯವರು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close