ಪಂಗನಾಮ ಹಾಕಿದ ಬಂಗಾಳಿ!

Theft incident took place in shimoga worth 280gram of gold 

ಸುದ್ದಿಲೈವ್/ಶಿವಮೊಗ್ಗ

ಗಟ್ಟಿ ಚಿನ್ನವನ್ನ ಆಭರಣವನ್ನಾಗಿ ಮಾಡಿಕೊಡುವಂತೆ ಕೇಳಿಕೊಂಡವರಿಗೆ ಪಶ್ಚಿಮ ಬಂಗಾಳದ ಚಿನ್ನದ ಅಕ್ಕಸಾಲಿಗನೋರ್ವ ಪಂಗನಾಮ ಹಾಕುರುವ ಘಟನೆ ವರದಿಯಾಗಿದೆ.

ತಮಗೆ ಪರಿಚಯವಿದ್ದ ಮತ್ತು ತಮ್ಮ ಬಳಿ ಬಂಗಾರದ ಗಟ್ಟಿಯನ್ನು ಪಡೆದುಕೊಂಡು ಬಂಗಾರದ ಆಭರಣದ ಕೆಲಸವನ್ನು ಮಾಡಿಕೊಡುತ್ತಿದ್ದ, ಪಶ್ಚಿಮ ಬಂಗಾಳ ರಾಜ್ಯದ ವಾಸಿ ಹಾಗೂ ಪ್ರಸ್ತುತ ಧರ್ಮರಾಯನ ಕೇರಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ರಾಹುಲ್ @ ಚಟ್ಟುವಿಗೆ ಸೀಗೆಹಟ್ಟಿಯ ನಿವಾಸಿಯೊಬ್ಬರು ನೀಡಿದ್ದರು.

2024 ಅಕ್ಟೋಬರ್ 25 ರಲ್ಲಿ 280 ಗ್ರಾಂ ಗಟ್ಟಿ ಚಿನ್ನವನ್ನ ನೀಡಲಾಗಿತ್ತು. ಅ.29 ರಂದು ಶಿವಮಿಗ್ಗದ ಧರ್ಮರಾಯನ ಕೇರಿಯಲ್ಲಿ ವಾಸವಾಗಿದ್ದ ರಾಹುಲ್ ಮನೆಯ ಬಳಿ ಹೋದಾಗ ಮನೆಯ ಬಾಗಿಲು ಹಾಕಲಾಗಿತ್ತು. ಕರೆ ಮಾಡಿದಾಗ ರಾಹುಲ್ ತಾನು ಪಶ್ಚಿಮ ಬಂಗಾಳದ ಮನೆಗೆ ಬಂದಿರುವೆ ಎಂದು ಮೊಬೈಲ್ ನಲ್ಲಿ ತಿಳಿಸಿದ್ದನು. 

ವಾಪಾಸ್ ಬಂದು ಆಭರಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ರಾಹುಲ್ ನಿಧಾವಾಗಿ ದಿನಕಳೆದಂತೆ ಶಿವಮೊಗ್ಗ ಕಡೆಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಬಂಗಾರದ ಆಭರಣಗಳನ್ನು ಮಾಡಿಕೊಡುವುದಾಗಿ ಸೀಗೆಹಟ್ಟಿ ನಿವಾಸಿ ದತ್ತಾತ್ರಿ ಬಳಿಯಿಂದ ತೆಗೆದುಕೊಂಡಿರುವ ಬಂಗಾರದ ಗಟ್ಟಿಯನ್ನು ಪತ್ತೆ ಮಾಡಿ, ನಂಬಿಕೆ ದ್ರೋಹ ಮಾಡಿರುವ ರಾಹುಲ್ @ ಚಟ್ಟು ಪರಾಮಾಣಿಕ್ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದತ್ತಾತ್ರಿಯವರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close