![]() |
The sale of meat is being banned on various dates in the year 2025. But I don't know who will follow these rules or not, generally only these bans will be heard in the media. |
ಸುದ್ದಿಲೈವ್/ಶಿವಮೊಗ್ಗ
2025ನೇ ಸಾಲಿನಲ್ಲಿ ವಿವಿಧ ದಿನಾಂಕಗಳಂದು ಮಾಂಸ ಮಾರಾಟ ನಿಷೇಧಿಸಾಗುತ್ತಿದೆ. ಆದರೆ ಈ ನಿಯಮಗಳನ್ನ ಯಾರು ಪಾಲಿಸುತ್ತಾರೋ, ಬಿಡ್ತಾರೋ ಗೊತ್ತಿಲ್ಲ ಒಟ್ಟಿನಲ್ಲಿ ಮಾಧ್ಯಮಗಳಲ್ಲಿ ಮಾತ್ರ ಈ ನಿಷೇಧಗಳು ಮಾತ್ರ ರಾರಾಜಿಸುತ್ತಿರುತ್ತದೆ.
ಶಿವಮೊಗ್ಗ ಮಹಾನಗರ ಪಾಲಿಕೆಯು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಕೆಳಕಂಡ ದಿನಾಂಕಗಳಂದು ಮಾಂಸ ರಹಿತ ದಿನವೆಂದು ಘೋಷಿಸಿದೆ.
ಜನವರಿ 30 ರಂದು ಸರ್ವೋದಯ ದಿನ, ಫೆ. 26 ಮಹಾಶಿವರಾತ್ರಿ, ಏ.06 ರಂದು ಶ್ರೀರಾಮ ನವಮಿ ದಿನ, ಏ.10 ಮಹಾವೀರ ಜಯಂತಿ ದಿನ, ಮೇ.12 ಬುದ್ಧಪೂರ್ಣಿಮೆ ಜಯಂತಿ ದಿನ, ಆ.16 ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ, ಆ.27 ರಂದು ಗಣೇಶ ಚತುರ್ಥಿ ದಿನ, ಅ.02 ರಂದು ಗಾಂಧಿ ಜಯಂತಿ ದಿನ ಹಾಗೂ ನ.25 ರಂದು ಸೈಂಟ್ ಟಿ.ಎಲ್. ವಾಸ್ವಾನಿ ಜನ್ಮದಿನ.
ಪ್ರಯುಕ್ತ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಎಲ್ಲಾ ದಿನಾಂಕಗಳಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ಮೇಲ್ಕಂಡ ದಿನಾಂಕಗಳಂದು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.