ಸುದ್ದಿಲೈವ್/ಶಿವಮೊಗ್ಗ
ಕರಾವಳಿ ಭಾಗದಲ್ಲಿ ಕಾಣುವ ಹುಲಿ ಕಥೆಯ ಆಧಾರವಾಗಿ ತೆಗೆದ ಅಧಿಪತ್ರ ಚಲನ ಚಿತ್ರ ಫೆ.07 ರಂದು ಬಿಡುಗಡೆಯಾಗಲಿದೆ. ವಿಚಿತ್ರವಾದ ಹೆಸರಿನೊಂದಿಗೆ ಚಿತ್ರದ ಟೈಟಲ್ ಕೂಡಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಚಿತ್ರದ ಟ್ರಯಲ್ ಬಿಡುಗಡೆಯಾಗಿದೆ. ಆದರೆ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಚಲನಚಿತ್ರದತಂಡ ಮತ್ತೊಮ್ಮೆ ನಗರದ ಶುಭಂ ಹೋಟೆಲ್ ನಲ್ಲಿ ಬಿಡುಗಡೆಯಾಗಿದೆ.
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ, ಗಿಚ್ಚಿಗಿಲಿಯ ಜಾಹ್ನವಿ ಈ ಚಲನ ಚಿತ್ರದ ನಾಯಕ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕರಾದ ಶೈನ್ ಶೆಟ್ಟಿ ಅವರ ಕನಸಿನ ಕೂಸಾಗಿರುವ ಅಧಿಪತ್ರದ ಚಿತ್ರ ಕರವಾಳಿ ಸೊಗಡಿನ ಚಿತ್ರವಾಗಿ ಹೊರಹೊಮ್ಮಿದೆ. ಈಚಿತ್ರ ಸಸ್ಪೆನ್ಸ್ ಚಿತ್ರವಾಗಿದೆ.
ಟ್ರೈಲರ್ ಬಿಡುಗಡೆ ಮಾಡಿರುವ ರೂಪೇಶ್ ಶೆಟ್ಟಿ ಮಾತನಾಡಿ, ಕೃಥೆಯೇ ಚಿತ್ರದ ನಾಯಕನಾಗಿದೆ. ಶೈನ್ ಶೆಟ್ಟಿ ಅವರ ಕನಸಿನ ಚಿತ್ರ ಫೆ.07 ಕ್ಕೆ ಬಿಡುಗಡೆಯಾಗಲಿದೆ ಎಂದರು. ಚಲನಚಿತ್ರ ನಟಿ ಜಾಹ್ನವಿ ಮಾತನಾಡಿ ಅಧಿಪತ್ರದಲ್ಲಿ ಪತ್ರಕರ್ತರಾಗಿ ತೆರೆಯ ಮೇಲೆ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹುಲಿಯ ಹುಡುಕಿಕೊಂಡು ನಾಯಕ ಬಂದು ಹುಲಿಯನ್ನ ಹೇಗೆ ಹಿಡಿಯುವುದೇ ಚಲಚಿತ್ರದ ಕಥೆಯಾಗಿದೆ ಎಂದರು.
ಕಥೆ ಚೆನ್ನಾಗಿದ್ದರೆ ಪ್ರೇಕ್ಷನೂ ಸಹ ಚಲನಚಿತ್ರ ಮಂದಿರಕ್ಕೆ ಬಂದು ಜನನೋಡುತ್ತಾರೆ ಎನ್ನುವುದು ಸಿನಿ ತಜ್ಞರ ಮಾತು, ಅದರಂತೆ ಅಧಿಪತ್ರ ಚಲನಚಿತ್ರ ಸಹವಾಗಿದೆ. ಕಥೆಯನ್ನ ಚೆನ್ನಾಗಿ ತೆಗೆಯಲಾಗಿದ್ದು ಸಸ್ಪೆನ್ಸ್ ಸಿನಿಮಾ ಆಗಿದೆ ಎಂದರು.
ಬಿಗ್‌ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಸಿನಿಮಾ ಅಧಿಪತ್ರ. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಚಯನ್ ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಾಹ್ನವಿ ಅವರ ಮೊದಲ ಸ್ಯಾಂಡಲ್‌ವುಡ್‌ನ ಚಲಚಿತ್ರವಾಗಿದೆ. ಈ ಸಿನಿಮಾ ನೈಜ ಘಟನೆಯನ್ನು ಆಧರಿಸಿದ್ದು, ಮಂಗಳೂರು ಹಾಗೂ ಉಡುಪಿ ಸುತ್ತಮುತ್ತ ಸಿನಿಮಾವನ್ನು ಚಿತ್ರೀಕರಣ ಮಾಡಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿದೆ.