ನನ್ನ ಕೈಗೆ ಸಿಕ್ರೆ ಕೈ ಕಾಲು ಕಡೀತ್ತೀನಿ-ಈಶ್ವರಪ್ಪ

There are thousands of priests of various castes of Hindu society in the state. They called us with the desire that all castes should be united and I participated in the program very happily. The Swamijis said that a revolutionary brigade should be started. Former DCM Eshwarappa said that it will be started.


ಸುದ್ದಿಲೈವ್/ಶಿವಮೊಗ್ಗ 

ರಾಜ್ಯದಲ್ಲಿ ಹಿಂದೂ ಸಮಾಜ ವಿವಿಧ ಜಾತಿಯ ಮಠಾಧೀಶರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಎಲ್ಲಾ ಜಾತಿ ಒಂದಾಗಬೇಕು ಅನ್ನೋ ಆಪೇಕ್ಷೆಯಿಂದ ನಮ್ಮನ್ನ ಕರೆದ್ರು ತುಂಬಾ ಸಂತೋಷದಿಂದ ಕಾರ್ಯಕ್ರಮದಲ್ಲಿ ನಾನು ಭಾಗಿಯಾದೆ. ಕ್ರಾಂತಿವೀರ ಬ್ರಿಗೇಡ್ ಆರಂಭಿಸಬೇಕು ಅಂತಾ ಸ್ವಾಮೀಜಿಗಳು ಹೇಳಿದ್ದಾರೆ. ಆರಂಭಿಸಲಾಗುವುದು ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1001 ಸ್ವಾಮೀಜಿ ಗಳ ಪಾದವನ್ನ ತೊಳೆದು ಕ್ರಾಂತಿವೀರ ಬ್ರಿಗೇಡ್ ಆರಂಭಿಸಬೇಕು ಅಂದುಕೊಂಡಿದ್ದೇವೆ. ಉತ್ತರ ಕರ್ನಾಟಕ ದಲ್ಲಿ ಬಹುತೇಕ ಮಠಗಳು ದುಸ್ಥಿತಿಯಲ್ಲಿವೆ. ಹಿಂದೂ ಸಮಾಜ ಒಂದಾಗಬೇಕು ಅನ್ನೋ ಭಾವನೆಯಿಂದ ಎಲ್ಲಾ ಸ್ವಾಮೀಜಿ ಶ್ರಮಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಾಧುಸಂತರ ನೇತೃತ್ವದಲ್ಲಿ ಫೆ 4 ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟಿಸುತ್ತಿದ್ದೇವೆ ಎಂದರು. 

ಸಾಧುಸಂತರ ಸಾಕಷ್ಟು ಓಡಾಟ ನಡೆಸುತ್ತಿದ್ದಾರೆ. ಕಾರ್ಯಕ್ರಮ ಯಶಸ್ವಿ ಮಾಡ್ತೇವೆ. 1001 ಸ್ವಾಮೀಜಿ ಪಾದಪೂಜೆ ಮಾಡ್ತೇವೆ. ಹಿಂದೂ ಧರ್ಮ ಉಳಿಸುವಂತಹ ಎಲ್ಲಾ ಸ್ವಾಮೀಜಿ ಗಳು ಈ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಿದ್ದಾರೆ. ಬಸವನಪಾಗೇವಾಡಿ ಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಜಿಲ್ಲೆಯಲ್ಲೂ ಜಿಲ್ಲಾ ಸಮಿತಿ ಮಾಡಲು ಪ್ರಯತ್ನ ಮಾಡ್ತೇವೆ ಎಂದರು. 

ಧರ್ಮ ಉಳಿಸುವಂತಹ ಕೆಲಸ ನಿರಂತರ ನಡೆಯುತ್ತದೆ. ಶಿವಮೊಗ್ಗ ಆಶ್ರಯ ಮನೆ ವಿಚಾರದಲ್ಲಿ, ಸಚಿವ, ಸಂಸದ, ಶಾಸಕ ಹೇಳಿಕೆ ಗಮನಿಸಿದ್ದೇನೆ. ಜಿಲ್ಲೆಯಲ್ಲಿ ಸ್ನೇಹದಿಂದಲೂ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ವ್ಯಯಕ್ತಿಕ ದ್ವೇಷ ರಾಜಕಾರಣಿ ಹುಟ್ಟಿಕೊಂಡಿದೆ. ಬಡವರು ಹಣ ಕಟ್ಟಿ ಏಳೆಂಟು ವರ್ಷ ಆಗಿದೆ. ಅವರಿಗೆ ಶ್ರೀಘ್ರದಲ್ಲೇ ಮನೆ ಕೊಡುವ ಕೆಲಸ ಆಗಬೇಕಿದೆ ಎಂದರು. 

ಮೂಲ ಸೌಲಭ್ಯ ಕೂಟ್ಟು ಮನೆ ಕೊಡಿ. ಬಡವರಿಗೆ ಮನೆ ಬೇಗಾ ನೀಡಿ. ಸಮಯ ನಿಗದಿ ಮಾಡಿ ಬಡವರಿಗೆ ಮನೆ ನೀಡಿ. ಅಕ್ರಮ ಪ್ರವೇಶ ಮಾಡಿ ದಂದೆ ನಡೆಸಲು ಅವಕಾಶ ಮಾಡಿಕೊಡಬೇಡಿ. ಆಶ್ರಯ ಮನೆ‌‌ ಒಂದೆರಡು ತಿಂಗಳಿನಲ್ಲಿ‌ ನೀಡಿ. ಇಲ್ಲದಿದ್ದರೆ ಹೋರಾಟ ಮಾಡ್ತೇವೆ. ಕೋಟಾ ಗ್ರಾಮದಲ್ಲಿ ಹಸುವಿನ ಬಾಲ ಕಟ್ ಮಾಡಿದ್ದಾರೆ. ಅವರ ಮನುಷ್ಯರಿಗೆ ಹುಟ್ಟಿದ್ದಾರೋ ಅಥವಾ ದನಕ್ಕೆ ಹುಟ್ಟಿದ್ದಾರೋ ಗೊತ್ತಿಲ್ಲ. ಕಡಿಯವರು ಯಾರಿಗೆ ಹುಟ್ಟಿದ್ದಾರೋ ಗೊತ್ತಿಲ್ಲ ಎಂದರು. 

ನನ್ನ ಕೈಗೆ ಸಿಕ್ರೆ ಅವರ ಕೈ ಕಾಲು ಕಡೀತ್ತೀನಿ

ನಿಮ್ಮ ತಾಯಿ ಕೆಚ್ಚಲು ಕಡಿದ್ರೆ ಸುಮ್ಮನೆ ಇರ್ತೀರಾ?ಹಿಂದೂಗಳ ತಾಳ್ಮೆ ನೀತಿ ಸಂಹಿತೆ ಕಾಯ್ತಿದೆ. ರಾಜ್ಯದಲ್ಲಿ ದೊಡ್ಡ ಬೆಂಕಿ ಹಚ್ಚಿಕೊಳ್ಳುತ್ತದೆ. ಪೊಲೀಸ್ ಇಲಾಖೆ ಬೆನ್ನತ್ತಿ ಇವರನ್ನ ಬಂಧಿಸಬೇಕು. ಹೊನ್ನಾವರಕ್ಕೆ ಹೋಗಿ ಬಂಧಿಸಿ ಅವರಿಗೆ ಸರಿಯಾದ ಶಿಕ್ಷೆ ಕೊಡಿ ಎಂದು ಆಗ್ರಹಿಸಲಾಯಿತು. 

ಅಂತಹ ದುಷ್ಕರ್ಮಿಗಳಿಗೆ ಕೈ ಕಾಲ್ ಕಟ್ ಮಾಡಬೇಕಾಗುತ್ತದೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. 

ಖರ್ಗೆಗೆ ಹಿಂದೂ ಧರ್ಮದ ಬಗ್ಗೆ ಯಾಕೆ ಚಿಂತೆ?

ಗಂಗೆಯಲ್ಲಿ ಮಿಂದರೆ ಬಡತನ ನಿರ್ಮೂಲನೆಆಗುತ್ತಾ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತೀವ್ರರೀತಿಯ ದಾಳಿ ನಡೆಸಿದ ಮಾಜಿ ಡಿಸಿಎಂ, ಖರ್ಗೆ ಅವರು ಎರಡು ವರ್ಷದ ಹುಡುಗ ಆಡಿದ ಹಾಗೇ ಆಡ್ತಾ ಇದ್ದಾರೆ. ಇವರಿಗೆ ಏನು ರೋಗ ಬಂದಿದ್ಯಾ? ತಾಕತ್ತು ಇದ್ರೆ ಮೆಕ್ಕಾ ಮದೀನ ಹೋಗಿ ಬರ್ತಾರೆ ಅಲ್ಲ ಅವರ ಬಗ್ಗೆ ಮಾತನಾಡಿ. ಹಿಂದೂ ಸಮಾಜದ ಬಗ್ಗೆ ನಿಮ್ಗೆ ಯಾಕೆ ಚಿಂತೆ? 40 ಕೋಟಿ ಜನ ಹೋಗಿ ಬರ್ತಾರೆ. ಪುಣ್ಯ ಕ್ಷೇತ್ರದ ಬಗ್ಗೆ ಹಗುರ ಮಾತನಾಡುವ ಕೆಲಸ ಕೆಲ ಕಾಂಗ್ರೆಸಿಗರಿಗೆ ಇದೆ.ಕೆಲವರು ಕದ್ದು ಕಾಶಿ ಗೆ ಹೋಗಿ ಬರ್ತಾರೆ‌. ನಮ್ಮ‌ ನಂಬಿಕೆ ಪ್ರಶ್ನೆ ಮಾಡಲು ಇವರು ಯಾರು? ಎಂದು ಪ್ರಶ್ನಿಸಿದರು. 

ನೀವು ಬರೋದು ಬಿಡೋದು ನಿಮ್ಗೆ ಬಿಟ್ಟಿದ್ದು. ಮೋದಿ , ಅಮಿತ್ ಬಗ್ಗೆ ಟೀಕೆ ಮಾಡೋಕೆ ನೀವು ಯಾರು?ಹಿಂದೂ ಸಮಾಜದ ಪ್ರಶ್ನೆ ಮಾಡುವ ಹಕ್ಕು ಕಾಂಗ್ರೆಸ್ ನಾಯಕರಿಗೆ ಇಲ್ಲ. ಎರಡು ವರ್ಷದ ಮಗು ಹಾಡಿದ ಹಾಗೇ ಆಡಬೇಡಿ. ಎರಡು ವರ್ಷ ಮಗು ಆಗಿದ್ರೆ ಹೊಡೆದುಬಿಡುತ್ತಿದ್ದೆ ಎಂದು ವ್ಯಂಗ್ಯವಾಡಿದರು. 

ಬಡವರ ಹೊಟ್ಟೆ ತುಂಬಿದೆ. ದಯವಿಟ್ಟು ಖರ್ಗೆಯವರೇ ಟೀಕೆ ಮಾಡಬೇಡಿ. ಮುಸ್ಲಿಂ ಮತಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿದಿರೋದು ಸರಿಯಲ್ಲ. ನೀವು ದೊಡ್ಡ ರಾಜಕಾರಣಿ. ಹೀಗೆಲ್ಲಾ ಮಾತನಾಡಿದರೆ ನೀವು ಬಾಯಿ ಮುಚ್ಚಿ ಕೊಂಡು ಇರಿ ಎಂದು ಹೇಳಬೇಕಾಗುತ್ತದೆ ಎಂದು ಗರಂ ಆದರು. 

ಬಿಜೆಪಿ ಶುದ್ಧೀಕರಣವಾಗಲಿದೆ

ಬಿಜೆಪಿ ರಾಜ್ಯಾಧ್ಯಕ್ಷ ರಿಗೆ ಚುನಾವಣೆ ಮೊದಲಿನಿಂದಲೂ ಚುನಾವಣೆ ಯಿಂದಲೇ ಆಯ್ಕೆ ಆಗಿರೋದು. ರಾಜ್ಯದ ರಾಜಕಾರಣ ಗಬ್ಬೆದ್ದು ಹೋಗಿದೆ. ನಾವು ಕಟ್ಟಿದ ಪಕ್ಷವು ಹಾಳಾಗಿ ಹೋಗಿದೆ. ಕೆಲವು ಸ್ವಾರ್ಥ ರಾಜಕಾರಣಿಗಳ ಕೈಗೆ ಬಿಜೆಪಿ ಪಕ್ಷ ಸಿಕ್ಕಿದೆ. ಸರಿ ಹೋಗುತ್ತೆ, ತಾತ್ಕಾಲಿಕ ಸಮಸ್ಯೆ ಇದೆ. ದೊಡ್ಡವರು ಇದನ್ನ ಸರಿ ಮಾಡ್ತಾರೆ ಎಂಬ ವಿಶ್ವಾಸವನ್ನ ಹೊರಹಾಕಿದರು. 

ಬಿಜೆಪಿ ಶುದ್ದೀಕರಣ ಅಂದ್ರೆ ಹಿಂದುತ್ವವನ್ನ ಪ್ರತಿಪಾದಿಸುವುದು. ಅದೇ ಕೆಲಸ ನಾನು ಮಾಡ್ತಾ ಇದ್ದೀನಿ. ನಾನು ಶುರು‌ಮಾಡಿದ ಮೇಲೆ ಯತ್ನಾಳ್ ಹೇಳಿದ್ರು. ಸುಧಾಕರ್ ಸೇರಿ ಮೊದಲಾದವರು ಶುದ್ದೀಕರಣ ಪ್ರಯತ್ನ ಮಾಡ್ತಾ ಇದ್ದಾರೆ. ಎಲ್ಲರ ನಂಬಿಕೆ ಬಿಜೆಪಿ ಶುದ್ದೀಕರಣ. ಅದು ಆಗುತ್ತದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close