ಬಂಟಿಂಗ್ ಕಳಚಿ ಮತ್ತೆ ಅನುಮತಿ ನೀಡಿದ ಪಾಲಿಕೆ

Today suddenly there was an incident where the ABVP removed the bunting in the Amir Ahmed circle of the corporation and again agreed to the corporation's permission.


ಸುದ್ದಿಲೈವ್/ಶಿವಮೊಗ್ಗ

ಇಂದು ಏಕಾಯಕಿ ಪಾಲಿಕೆ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಎಬಿವಿಪಿ ಬಂಟಿಂಗ್ ತೆರವುಗೊಳಿಸಿ ಮತ್ತೆ ಪಾಲಿಕೆ ಅನುಮತಿಗೆ ಸಮ್ಮತಿಸಿರುವ ಘಟನೆ ನಡೆದಿದೆ. 

ಎಬಿವಿಪಿಯವರು ಈ ಹಿಂದೆ ಪಾಲಿಕೆ ಅಧಿಕಾರಿಯನ್ನ ಭೇಟಿಯಾಗಿ ಅನುಮತಿ ಪಡೆದ ನಂತರವೂ ಬಂಟಿಂಗ್ಸ್ ನ್ನ ತೆರವುಗೊಳಿಸಲಾಗಿತ್ತು. ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ನಾಳೆಯಿಂದ ಮೂರು ದಿನಗಳ ಕಾಲ ಎಬಿವಿಪಿಪ್ರಾಂತ ಸಮ್ಮೇಳನ ನಡೆಯಲಿದ್ದು ನಗರದಾದ್ಯಂತ ಬಂಟಿಂಗ್ಸ್ ಅಲಂಕಾರಕ್ಕೆ ಪಾಲಿಕೆ ಗೆ ಪತ್ರ ನೀಡಿ ಅನುಮತಿ ಪಡೆಯಲಾಗಿತ್ತು. 

ಆದರೆ ಪಾಲಿಕೆಯ ಈ ದಿಡೀರ್ ನಡೆ ಗೊಂದಲಕ್ಕೆ ಕಾರಣವಾಗಿತ್ತು. ನಾವು ಫ್ಲೆಕ್ಸ್ ಹಾಕಿಲ್ಲ ಬಂಟಿಂಗ್ಸ್ ಮಾತ್ರ ಹಾಕಿದ್ದೇವೆ ಅಲಂಕಾರಕ್ಕೆ ಅನುಮತಿ ಈಗಾಗಲೇ ಕೇಳಿದ್ದೇವೆ ಎಂಬುದು ಎಬಿವಿಪಿ ವಾದ. ಶಾಸಕರ ಮಧ್ಯಪ್ರವೇಶದಿಂದ ಕಿತ್ತ ಬಂಟಿಂಗ್ಸ್ ಅನ್ನು ಪಾಲಿಕೆ ವಾಪಾಸು ನೀಡಿದ್ದು ಮತ್ತೆ ಎಬಿವಿಪಿ ಕಾರ್ಯಕರ್ತರು ಕಟ್ಟಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close