ಮಕರ ಸಂಕ್ರಮಣ, ಸಿಗಂದೂರಿಗೆ ಹರಿದು ಬಂದ ಭಕ್ತ ಸಾಗರ



ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯ ಸಿಗಂದೂರಿನಲ್ಲಿ ಇಂದು ವೈಭವದ ವಾರ್ಷಿಕ ಜಾತ್ರೆ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಶ್ರೀ ಚೌಡೇಶ್ವರಿಯ ದರ್ಶನ ಪಡೆದು ಪುನೀತರಾದರು.‌ ಅದರ ಕುರಿತ ವರದಿ ಇಲ್ಲಿದೆ.

One of the powerhouses of the state, Sigandur in Shimoga district, today is the annual fair of Vibhava. Devotees from different parts of the state got darshan of Shri Choudeshwari and became blessed.

ಸಿಗಂದೂರಿನಲ್ಲಿ ವೈಭವದ ಜಾತ್ರಾ ಮಹೋತ್ಸವ ನಡೆದಿದೆ. ದೇವಿಯ ದರ್ಶನಕ್ಕೆ ಭಕ್ತ ಸಮೂಹವೇ ಹರಿದುಬಂದಿದೆ. ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯಲಾಗಿದೆ. ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದು ಭಕ್ತರು ಕೃತಾರ್ಥರಾಗಿದ್ದಾರೆ. 

ಜಾತ್ರೆಗೆ ಮೆರಗು ನೀಡಿದ ಕಲಾ ತಂಡಗಳು

ಸಿಗಂದೂರು. ನಾಡಿನ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದು. ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಿಂಗನಮಕ್ಕಿ ಡ್ಯಾಂ ನಿಂದ ಆವೃತವಾದ ಹಿನ್ನೀರಿನಲ್ಲಿರುವ ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷದ  ಮಕರ ಸಂಕ್ರಾಂತಿಯಂದು ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ರಾಜ್ಯದಲ್ಲಿ ಪ್ರಸಿದ್ಧ ಜಾತ್ರೆಯಾಗಿ ಗುರುತಿಸಿಕೊಂಡಿದೆ. ಇಂದು ನಡೆದ ಜಾತ್ರೆಯಲ್ಲಿ ಸಾವಿರಾರು  ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು. ಧರ್ಮದರ್ಶಿ ರಾಮಪ್ಪ ಅವರ ನೇತೃತ್ವದಲ್ಲಿ ದೇವಿಯ ಮೂಲ ಸ್ಥಳ ಸೀಗೆ ಕಣಿವೆಯಲ್ಲಿ ವಿಶೇಷ ಪೂಜೆ ನಡೆಯಿತು. ನಂತರ ದೇವಸ್ಥಾನದಲ್ಲಿ ವಿವಿಧ ಹೋಮ ಹವನ ನಡೆಯಿತು.


ಇನ್ನು ಜಾತ್ತೆಯ ಹಿನ್ನೆಲೆಯಲ್ಲಿ  ರಾಜ್ಯದ ವಿವಿಧಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇಷ್ಟಾರ್ಥವನ್ನು ಈಡೇರಿಸುವ ದೇವಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತು ಭಕ್ತರು ಅಲಂಕೃತಗೊಂಡಿದ್ದ ದೇವಿಯ ದರ್ಶನ ಪಡೆದು ಕೃತಾರ್ಥರಾದರು. ಜಾತ್ರೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ನೆರೆದಿದ್ದ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವಿಯ ದರ್ಶನ ಪಡೆಯಲು ಬರುತ್ತಿದ್ದಾರೆ.

ಧರ್ಮದರ್ಶಿ ಎಸ್ ರಾಮಪ್ಪ

----------------------------------------------

ಒಟ್ಟಾರೆ ಸಂಕ್ರಾಂತಿಯ ಸಡಗರದ ನಡುವೆ ನಡೆದ ಚೌಡೇಶ್ವರಿಯ ಜಾತ್ರೆಯಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕೃತಾರ್ಥರಾಗಿದ್ದಂತು ಸತ್ಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close