ಮಾಂಗಲ್ಯ ಸರ ಹಿಂದಿರುಗಿಸಿದ ವಿದ್ಯಾರ್ಥಿನಿ

 

An SSLC student returned the 8 gram Mangalya sutra, which was lost by a woman in a sub-divisional hospital here, to its owner and showed sincerity.

ಸುದ್ದಿಲೈವ್/ಸಾಗರ 

ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ 8ಗ್ರಾಂ ತೂಕದ ಮಾಂಗಲ್ಯ ಸರವನ್ನು SSLC ವಿದ್ಯಾರ್ಥಿನಿಯೊಬ್ಬಳು ಅದರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ. 

ಸಾಗರದ ಜೋಸೆಫ್ ನಗರದ ಮೆಹಬೂಬ್ ಸಾಬ್ ಅವರ ಪುತ್ರಿ ರಜಿಯ ಎಂಬ ವಿದ್ಯಾರ್ಥಿನಿ ಪ್ರಾಮಾಣಿಕತೆ ತೋರಿದವರು.

ತುಮರಿ ಸಮೀಪ ಕಾರಣಿ ಗ್ರಾಮದ ನಾಗರಾಜ್ ಅವರ ಪತ್ನಿ ಸಂಗೀತ ಸೋಮವಾರ ತನ್ನ ಮಗುವಿಗೆ ಆರೋಗ್ಯ ಸಮಸ್ಯೆಯ ಕಾರಣಕ್ಕೆ ವೈದ್ಯರಿಗೆ ಮಗುವನ್ನು ತೋರಿಸಲು ಆಸ್ಪತ್ರೆಗೆ ಬಂದಾಗ ಸಂಗೀತ ಅವರ 8ಗ್ರಾಂ ತೂಕದ ಮಾಂಗಲ್ಯ ಸರ ಬಿದ್ದು ಹೋಗಿತ್ತು.

ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ರಜಿಯಾಳಿಗೆ ಮಾಂಗಲ್ಯ ಸರ ಸಿಕ್ಕಿದೆ.ತಕ್ಷಣ ಅದನ್ನು ವೈದ್ಯರಿಗೆ ಕೊಟ್ಟು ಕಳೆದುಕೊಂಡವರಿಗೆ ಹಿಂದುರುಗಿಸುವಂತೆ ಕೇಳಿಕೊಂಡಳು.

ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಸಂಗೀತ ಆತಂಕಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಾ ಕಳೆದುಕೊಂಡ ಸರದ ಹುಡುಕಾಟ ನಡೆಸಿದ್ದರು.

ಕಳೆದುಕೊಂಡ ಮಾಂಗಲ್ಯ ಸರ ಪೋಲೀಸರ ವಶದಲ್ಲಿರುವುದನ್ನ ಸ್ಥಳೀಯ ಟೈಮ್ಸ್ ಆಫ್ ಸಾಗರ್ ಪತ್ರಿಕಾ ಮಾಧ್ಯಮದ ಮೂಲಕ ತಿಳಿದು ಮಂಗಳವಾರ ಪೇಟೆ ಪೋಲೀಸ್ ಠಾಣೆಗೆ ದಂಪತಿ ಸಮೇತ ಆಗಮಿಸಿದ್ದರು.

ಠಾಣಾಧಿಕಾರಿ ಹುಚ್ಚಪ್ಪ ಅವರ ಸಮ್ಮುಖದಲ್ಲಿ ಮಾಂಗಲ್ಯ ಸರವನ್ನು ವಾರಸುದಾರರಿಗೆ ನೀಡಿದರು. ರಜಿಯಾ ಅವರ ಪ್ರಾಮಾಣಿಕತೆಯನ್ನು ಪೋಲೀಸರು ಹಾಗೂ ಸರ ಕಳೆದುಕೊಂಡವರು ಪ್ರಶಂಸಿಸಿದರು.

ಈ ಸಂಧರ್ಭದಲ್ಲಿ ಪೋಲೀಸ್ ಹೆಡ್ ಕಾನ್ಸ್‌ಟೇಬಲ್ ಹೇಮಂತ್,ವಿದ್ಯಾರ್ಥಿನಿ ರಜಿಯಾ,ಸಖಿ ಕೇಂದ್ರದ ಪ್ರೇಮ ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close