ಶ್ರೀಕಾಂತಣ್ಣ-Cup-cricket-2-ದೈವಜ್ಞ-ಬ್ರಾಹ್ಮಣ-ಕ್ರಿಕೆಟ್-ತಂಡಕ್ಕೆ-ಪ್ರಥಮ-ಬಹುಮಾನ

 ಶಿವಮೊಗ್ಗದಲ್ಲಿ ಫೆ. 22 ರಿಂದ ಎರಡು ದಿನಗಳ ಕಾಲ ನಡೆದ  "ಶ್ರೀಕಾಂತಣ್ಣ Cup-cricket-2" cricket Match

Cricket, Match

Image

Cricket Match

ಸುದ್ದಿಲೈವ್/ಶಿವಮೊಗ್ಗ

ನಗರದ ATNCC ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳ ಲೀಗ್ ಹಂತದ 6 ಓವರ್ ಗಳ ಪಂದ್ಯಾವಳಿ ಎರಡು ದಿನಗಳು ನಡೆದಿದ್ದು ಇಂದು ರೋಂಚಕ ಪಂದ್ಯದೊಂದಿಗೆ ಮುಕ್ತಾಯಗೊಂಡಿದೆ.  

ಈ ಪಂದ್ಯಾವಳಿಯ ಪ್ರಥಮ ಬಹುಮಾನ 30,000 ರೂ. ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000 ರೂ. ಹಾಗೂ ಆಕರ್ಷಕ  ಟ್ರೋಫಿ ಹಂಚಲಾಯಿತು. ಮಲ್ನಾಡು ಭಾವಸಾರ ಕ್ಷತ್ರಿಯ ಕಿಕೆಟರ್ಸ್  ಇವರ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆದಿದೆ  ಮುಂದಿನ ವರ್ಷ ಇನ್ನು ಹೆಚ್ಚು ತಂಡಗಳು ಈ ಪಂದ್ಯಾವಳಿಯಲ್ಲಿ ಸೇರ್ಪಡೆಯಾಗಲಿವೆ

ಪಂದ್ಯಾವಳಿಯಲ್ಲಿ ದೈವಜ್ಞ ಬ್ರಾಹ್ಮಣರ ಕ್ರಿಜೆಟ್ ತಂಡ ಸ್ವಸ್ಥಿಕ್ ಡೈಮೆಂಡ್ ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ ಹಾಗೂ ಮಲ್ನಾಡ್ ಭಾವಸಾರ ಕ್ರಿಕೆಟರ್ಸ್(MBC-1) ದ್ವಿತೀಯ ಸ್ಥಾನವನ್ನು ಪಡೆದಿದೆ. 

ಮಹಾವೀರ ಸಿಸಿ vs ವಿಶ್ವಕರ್ಮ 11, ಹನುಮಾನ್ ಗ್ಲೇಡಿಯೇಟರ್ಸ್ vs ಹನುಮಾನ್ ಬಾಯ್ಸ್, ಸಹರ ಸಿಸಿ Vs ಸ್ವಸ್ಥಿಕ್ ಡೈಮೆಂಡ್,  ಮೆನ್ ಇನ್ ಬ್ಲೂ Vs ವಿಪ್ರ ಸಿಸಿ, ಎಂಬಿಸಿ-1 Vs ಮಹಾವೀರ ಸಿಸಿ, ವಾಸವಿ ವಾರಿಯರ್ಸ್ Vs  ಅರಮನೆ ಗ್ಲೈಡರ್ಸ್, ಎಂಬಿಸಿ-2 Vs ಸಹರ ಸಿಸಿ, ಸ್ವಸ್ಥಿಕ್ ಓಂ Vs ಮೆನ್ ಇನ್ ಬ್ಲೂ, ವಿಶ್ವಕರ್ಮ-11 Vs ಎಂಬಿಸಿ-1 ಹನುಮಾನ್ ಬಾಯ್ಸ್ Vs ವಾಸವಿ ವಾರಿಯರ್ಸ್, ಸ್ವಸ್ಥಿಕ್ ಡೈಮೆಂಡ್ Vs ಎಂಬಿಸಿ-2, ವಿಪ್ರ ಸಿಸಿ Vs ಸ್ವಸ್ಥಿಕ್ ಓಂ ಗಳ ನಡುವೆ ಪಂದ್ಯಗಳು ನಡೆದಿದೆ. 

ಸ್ವಸ್ಥಿಕ್ ಡೈಮೆಂಡ್ Vs ಎಂಬಿಸಿ 1 ಫೈನಲ್ ಗೆ ಬಂದಿದ್ದು ಸ್ವಸ್ಥಿಕ್ ಡೈಮೆಂಡ್ ರೋಚಕ ಗೆಲವು ಸಾಧಿಸಿದೆ. ಶ್ರೀಕಾಂತ್ ಬಹುಮಾನವನ್ನು ವಿತರಿಸಿದರು. 

Conclusion-Cricket, Match

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close