![]() |
In Shimoga, on February 14 and 15, there is a power outage due to quarterly maintenance and power pole change. |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಫೆ.14 ಮತ್ತು 15 ರಂದು ತ್ರೈಮಾಸಿಕ ನಿರ್ವಾಹಣೆ ಮತ್ತು ವಿದ್ಯುತ್ ಕಂಬ ಬದಲಾವಣೆಯ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ.
ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಹತ್ತಿರದ ಶಿವಾಜಿ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ಫೆ.14 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ಯಾಲಕಪ್ಪಕೇರಿ, ಬೇಡರಕೇರಿ, ಅಶೋಕರಸ್ತೆ, ಅನವೇರಪ್ಪ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗ ನಗರದ ಆಲ್ಕೋಳ ವಿ.ವಿ.ಕೇಂದ್ರದಿಂದ ತುರ್ತು ಕಾಮಗಾರಿ ಇರುವುದರಿಂದ ಫೆ.14 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಸಾಗರ ರಸ್ತೆ, ಎ.ಪಿ.ಎಂ.ಸಿ. ಮತ್ತು ಆರ್.ಎಂ.ಸಿ. 100 ಅಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಫೆ. 15 ರಂದು ಬೆಳಿಗ್ಗೆ 9 ಗಂಟೆಯಿAದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಫೆ.15 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ, ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕೊಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್‌ಆರ್‌ಪಿ ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಕೆಎಂಎಫ್ ಡೈರಿ ಹಾಗೂ ಸುತ್ತಮುತ್ತನಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.