![]() |
Chandana channel's most popular show, Dr||Na. The record-breaking That Anta heli Eco quiz program conducted by Someswara is currently being organized in Shimoga city. |
ಸುದ್ದಿಲೈವ್/ಶಿವಮೊಗ್ಗ
ಚಂದನ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ, ಡಾ||ನಾ. ಸೋಮೇಶ್ವರ ನಡೆಸಿಕೊಡುತ್ತಿರುವ ದಾಖಲೆ ನಿರ್ಮಿಸಿರುವ ಥಟ್ ಅಂತ ಹೇಳಿ ಪರಿಸರ ರಸಪ್ರಶ್ನೆ ಕಾರ್ಯಕ್ರಮವು ಇದೀಗ ಶಿವಮೊಗ್ಗ ನಗರದಲ್ಲಿ ಆಯೋಜನೆಗೊಳ್ಳುತ್ತಿದೆ.
ಶಿವರಾತ್ರಿಯ ದಿನದಂದು ಅಬ್ಬಲಗೆರೆಯ ಈಶ್ವರವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ದಿನಾಂಕ 16/02/2025ರಂದು ಅರ್ಹತಾ ಸುತ್ತು ನಡೆಯಲಿದೆ. ವಿನಾಯಕ ನಗರದ ನವ್ಯಶ್ರೀ ಅನ್ನಪೂರ್ಣ ದಲ್ಲಿ ಅಂದು ಸಂಜೆ ಐದು ಗಂಟೆಗೆ ನಡೆಯುವ ಅರ್ಹತಾ ಸುತ್ತಿನಲ್ಲಿ ಭಾಗವಹಿಸಲು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಇಲ್ಲಿ ಆಯ್ಕೆಯಾದವರು ಶಿವರಾತ್ರಿಯಂದು ನಡೆಯುವ ಥಟ್ ಅಂತ ಹೇಳಿ ಪರಿಸರ ರಸಪ್ರಶ್ನೆ ಕಾರ್ಯಕ್ರಮಕ್ಕೆ ಸ್ಪರ್ಧಿಗಳಾಗಿ ಅರ್ಹತೆ ಪಡೆಯಲಿದ್ದಾರೆ.
ನೋಂದಾವಣೆ ಮಾಡಿಕೊಂಡವರು ಮಾತ್ರ ಅರ್ಹತಾ ಸುತ್ತಿನಲ್ಲಿ ಭಾಗವಹಿಸಬಹುದಾಗಿದ್ದು, ನೋಂದಣಿ ಹಾಗೂ ಮಾಹಿತಿಗಾಗಿ ಚೇತನ್ ರಾಯನಹಳ್ಳಿ, ಮೊ: 95380 20367, ನಾಗರಾಜ್ ಶೆಟ್ಟರ್- 9448139271, ನಾಗೇಶ್ ನವ್ಯಶ್ರೀ – 9844282504ಗೆ ಸಂಪರ್ಕಿಸಬಹುದು.
ಪ್ರಕೃತಿ ಆರಾಧನೆಯೇ ಪರಶಿವನ ಆರಾಧನೆ ಎಂಬ ನಮ್ಮ ಪೂರ್ವಜರ ಆಶಯಗಳಿಂದ ಇಂದಿನ ಹಬ್ಬಗಳ ಆಚರಣೆಗಳು ದೂರವಾಗಿ ಕೃತಕತೆ ಹಾಗೂ ಆಡಂಬರಗಳಿಗೆ ಮಹತ್ವ ಹೆಚ್ಚಾಗುತ್ತಿದ್ದು, ಪ್ರಕೃತಿ ಕೇಂದ್ರಿತ ಶಿವರಾತ್ರಿ ಆಚರಣೆಗೆ ಒತ್ತು ನೀಡುತ್ತಾ ಬಂದಿರುವ ಈಶ್ವರವನದ ಈ ಬಾರಿಯ ಶಿವರಾತ್ರಿಯಂದು ನಡೆಯಲಿರುವ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮವು ಪಂಚಭೂತಗಳಾದ ಭೂಮಿ, ಆಕಾಶ, ವಾಯು, ಅಗ್ನಿ ಹಾಗೂ ಜಲಗಳನ್ನೊಳಗೊಂಡ ಪ್ರಕೃತಿ ಹಾಗೂ ಪರಿಸರ ಕುರಿತು ಹೆಚ್ಚು ಕೇಂದ್ರೀಕೃತವಾಗಿದೆ.