ನಂಬರ್ 24 ರಹಸ್ಯ ಬೀದಿಗೆ ಬಿತ್ತು!


ಸುದ್ದಿಲೈವ್/ಭದ್ರಾವತಿ

ರಿಪಬ್ಲಿಕ್(republic) ಆಫ್ ಭದ್ರಾವತಿಗೆ ಬೇಕಾ ವಿಟ್ನೆಸ್(witness) ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಡು ರಸ್ತೆಯಲ್ಲೇ ಮಚ್ಚು, ಲಾಂಗು,  ಭರ್ಜಿ  ದೊಣ್ಣೆಗಳು ಜಳಪಿಸುತ್ತಿದೆ. ಹಾಡು ಹಗಲೇ ದೊಣ್ಣೆಯಿಂದ ಬಡಿದಾಟ, ಬಾಟಲಿ ಎಸೆತ ಹಾಗೂ ಕಲ್ಲು ತೂರಾಡಲಾಗಿದೆ. 

ಲಾ ಅಂಡ್ ಆರ್ಡರ್ ಬ್ರೇಕ್ ಆದರೂ ಕಣ್ಣು ಕಾಣಲ್ಲ,  ಕಿವಿ ಕೇಳಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲವಾದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಬಡಿದಾಟ ನಡೆದರೂ ಕಂಪ್ಲೇಂಟ್ ಆಗಿಲ್ಲ. ಆದರೆ ಪ್ರಭಾವಿ ನಾಯಕರಿಂದಲೇ ರಾಜಿ ಪಂಚಾಯಿತಿ ನಡೆಸಿದ ಪ್ರಯತ್ನ ನಡೆದಿದೆ. 


ಕಣ್ಣಿದ್ದೂ ಕುರುಡರಾಗಿದ್ದಾರಾ ಅಲ್ಲಿನ ಪೊಲೀಸರಿಗೆ ಅಕ್ರಮ ದಂಧೆಕೊರರು ನಡೆಸುವ ತಿಂಗಳ ವರಮಾನದ ಮೇಲೆ  ಮೇಲೆ ಮಾತ್ರ ಕಣ್ಣು ಎಂಬ ಆರೋಪಕ್ಕೆ ಇಲಾಖೆ ಸಿಲುಕಿಕೊಂಡಂತಿದೆ. 

ಭದ್ರಾವತಿಯಲ್ಲಿ ಅಕ್ರಮ ದಂಧೆ ಕೋರರ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲವಾಬೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಸುಮೋಟೋ ಕೇಸ್ ಕೂಡ ದಾಖಲು ಮಾಡೋಲ್ಲ ಎಂದರೆ ಹೇಗೆ ಎಂಬುದು  ಜನ ಸಾಮಾನ್ಯನ ಪ್ರಶ್ನೆಯಾಗಿದೆ.  

ಭದ್ರಾವತಿಯಲ್ಲಿ ಅಕ್ರಮ ಓಸಿ ದಂಧೆಯ ಹಿನ್ನೆಲೆಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಭದ್ರಾವತಿಯ ಉಜ್ಜನಿಪುರ ಸರ್ಕಲ್ ನಲ್ಲಿ ಲಾಂಗು ಮಚ್ಚು ತಲ್ವಾರ್ ಗಳು ಝಳಪಿಳಿಸಿವೆ. ಫೆಬ್ರವರಿ 9ರ ಭಾನುವಾರ ಸಂಜೆ 5:15ರಲ್ಲಿ ವೇಳೆಗೆ ಈ ಘಟನೆ ನಡೆದಿದೆ. 

ಗ್ಯಾಂಗ್ ವಾರ್  ಫೈಟ್  ಗೆ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯಗಳೇ ಸಾಕ್ಷಿ..!

ಆನೆ ಪ್ರದೀಪ್ ವರ್ಸಸ್ ಹಳೆ ಬಟ್ಟೆ ಆಕಾಶ್ ಗ್ಯಾಂಗ್  ನಡುವೆ ಮಾರಾಮಾರಿ ನಡೆದಿದೆ. ಭದ್ರಾವತಿಯ ಉಜ್ಜನಿಪುರ ಸರ್ಕಲ್ ಬಳಿಯ ರಾಘವೇಂದ್ರ ವೈನ್ಸ್ ಬಳಿ ಮಾರಾಮಾರಿಯಾಗಿದೆ. ನಾಲ್ಕಾರು ಬೈಕಿನಲ್ಲಿ ಮಚ್ಚು, ದೊಣ್ಣೆ, ಬರ್ಚಿ ಹಿಡಿದು ಬಂದ ಹಳೆ ಬಟ್ಟೆ ಆಕಾಶ್ ನ ಗ್ಯಾಂಗ್ ಸರ್ಕಲ್ ಬಳಿ ನಿಂತಿದ್ದ ಆನೆ ಪ್ರದಿ ಗೆ ಭರ್ಜರಿ ಒದೆ ಬಿದ್ದಿದೆ. 

ಆನೆ ಪ್ರದಿಯ ಮೇಲಿನ ಅಟ್ಯಾಕ್ ತಪ್ಪಿಸಲು ಹೋದ ಜಪಾನ್ ಗೆ ತಲೆಬುರುಡೆ ಒಡೆದು ರಕ್ತ ಚಿಮ್ಮಿತ್ತು. ಬಹಳ ಹೊತ್ತು ಉಜ್ಜನಿಪುರ ಸರ್ಕಲ್ ಬಳಿ ನಡೆದಿತ್ತು ಮಚ್ಚು ಲಾಂಗು ದೊಣ್ಣೆ ಹಿಡಿದು ಕೂಗಾಟ ಕಿರುಚಾಟ ನಡೆದಿದೆ. 

ಹಳೆ ಬಟ್ಟೆ ರಾಕೇಶ್ ಗ್ಯಾಂಗ್ ನವರು ಬಾಟಲಿ ಎಸೆದರೆ ಆನೆ ಪ್ರದಿ, ಗ್ಯಾಂಗ್ ನವರು  ಕಲ್ಲು ತೂರಾಟ  ನಡೆಸಿದ್ದರು. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಷಯ ಗೊತ್ತಾದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗ್ಯಾಂಗ್ ವಾರ್ ಬಗ್ಗೆ ಇನ್ಸ್ಪೆಕ್ಟರ್ ಸುಮೋಟೋ ಪ್ರಕರಣ ದಾಖಲಿಸಲೇ ಇಲ್ಲ ಎಂಬ ಆರೋಪವಿದೆ. 

ಇಷ್ಟಕ್ಕೂ ಈ ಗಲಾಟೆ ನಡೆದಿದ್ದು ಯಾಕೆ?

ಇದು ಓಸಿ ನಂಬರ್ ಪಾನಾ ಗಲಾಟೆ ಎಂದು ಹೇಳಲಾಗುತ್ತಿದೆ. ಒಂದು ರೂಪಾಯಿ ಒಂದು ನಂಬರ್ ಗೆ ಕಟ್ಟಿದರೆ ಆ ನಂಬರ್ ಪಾಸಾದರೆ 80 ರೂಪಾಯಿ ಹಣಕಟ್ಟಿದವನಿಗೆ ಸಿಗುವ ಓಸಿ ಆಟದ ದಂದೆಯಾಗಿದೆ. ನಂಬರ್ ಒಂದಕ್ಕೆ 80000 ಕಟ್ಟಲಾಗಿತ್ತು. ಕಟ್ಟಿದ ನಂಬರ್ ಪಾಸ್ ಆಗಿದ್ದರಿಂದ ಎಂಬತ್ತು ಲಕ್ಷರು ಕೊಡಬೇಕಾಗಿತ್ತು. ಒಸಿ ಬರೆಸಿದ 24 ನಂಬರ್ ಪಬ್ಲಿಕ್ ಆಗಿದೆ ಎಂದು ಆಟ ಆಡಿದವರಿಗೆ ಹಣ ಕೊಡಲೇ ಇಲ್ಲ ಎಂಬ ಮಾತು ಕೇಳಿ ಬಂದಿದೆ. 

ಹಣದ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಆನೆ ಪ್ರದಿಗೆ  ಗೂಸ ಬಿದ್ದಿದೆ. ಇದೇ ಕಾರಣಕ್ಕೆ ಆನೆ ಪ್ರದೀಪ್ ಅಂಡ್  ಗ್ಯಾಂಗ್ ಗೆ ಥಳಿಸಲಾಗಿದೆ. ಈ ಗ್ಯಾಂಗ್ ವಾರ್ ನ ಗಲಾಟೆ ಪ್ರಭಾವಿ ನಾಯಕರ ಮನೆಯಲ್ಲಿ ರಾಜಿ ಪಂಚಾಯಿತಿ ನಡೆದಿದೆ. ಈಗಲೂ  ಓಸಿ ದಂಧೆಯ 24 ರ ಸಂಖ್ಯೆಯ ಪಾನಾ ರಹಸ್ಯ ಬಗೆಹರಿದಿಲ್ಲ. ಓಸಿ ಬಿಡ್ಡರ್ ನಾಪತ್ತೆ ಗ್ಯಾಂಗ್ ಗಳ ನಡುವೆ ನಿತ್ಯವೂ ಬಡಿದಾಟ ನಡೆಯುತ್ತಿದೆ.  ಭದ್ರಾವತಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಪೊಲೀಸರಿಗೆ ಕೈಕಟ್ ...! ಬಾಯ್ ಮುಚ್ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close