ಕೊಟ್ಟಿಗೆಗೆ ದಿಡೀರ್ ಬೆಂಕಿ ಕರು ಮತ್ತು ಹಸು ಜೀವಂತ ಸಾವು-6 ಹಸುಗಳಿಗೆ ಗಾಯ

Shimoga taluk Hasudi post Chikkamari village fire broke out in a barn and two cattle were burnt alive while 6 cows were injured.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲೂಕು ಹಸೂಡಿ ಪೋಸ್ಟ್ ಚಿಕ್ಕಮರಡಿ ಗ್ರಾಮದಲ್ಲಿ ಕೊಟ್ಟಿಗೆಗೆ ಬೆಂಕಿ ಬಿದ್ದು ಎರಡು ಜಾನುವಾರುಗಳು ಜೀವಂತ ಸುಟ್ಟು ಹೋದರೆ, ಭಸ್ಮವಾದರೆ 6 ಹಸುಗಳಿಗೆ ಗಾಯಗಳಾಗಿವೆ. 

ಚಿಕ್ಕಮರಡಿ ಗ್ರಾಮದಲ್ಲಿ ನಾಗರಾಜ್ ನಾಯ್ಕ್ ಎಂಬುವರ ದನದಕೊಟ್ಟಿಗೆಗೆ ಶಾರ್ಟ್ ಸೆರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಬೆಂಕಿ ತಗುಲಿ ಕೊಟ್ಟಿಗೆಯಿಂದ ಹೊಗೆಯಾಡುವುದನ್ನ ಗಮನಿಸಿದ ಯಜಮಾನರಿಗೆ ವಿಷಯ ತಲುಪಿದೆ. 

ತಕ್ಷಣವೇ ಓಡಿ ಬಂದು ನೋಡುವಷ್ಟರಲ್ಲಿ ಕರುವೊಂದು ಹಾಗೂ ಕರುವಿನ ತಾಯಿ ಬೆಂಕಿಗೆ ಆಹುತಿಯಾಗಿವೆ. ಉಳಿದ ಹಸುಗಳಿಗೆ ಬೆಂಕಿ ತಗುಲಿ ಗಾಯಗಳಾಗಿವೆ. ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. 


ಮನೆಯಿಂದ ಹಸುವಿನ ಕೊಟ್ಟಿಗೆ ಸುಮಾರು 15 ಮೀಟರ್ ದೂರದಲ್ಲಿ ಕೊಟ್ಟಿಗೆ ಇದೆ. ಎರಡು ಸಿಂಧಿ ಆಕಳು, ಎರಡು ನಾಟಿ ಆಕಳು ಸೇರಿ ವಿವಿಧ ಜಾತಿಯ ಹಸುವನ್ನ ನಾಗರಾಜ್ ನಾಯ್ಕ್ ಏಳೆಂಟು ವರ್ಷದಿಂದ ಸಾಕುತ್ತಾ ಬಂದಿದ್ದಾರೆ. ಜಾನುವಾರುಗಳ ಹಾಲು ಮಾರಾಟದಿಂದಲೇ ಜೀವನ ಸಾಗಿಸುತ್ತಿದ್ದಾರೆ. 

ಇಂದು ನಡೆದ ದುರಂತ ನಾಯ್ಕರನ್ನ ಕಂಗಾಲಾಗಿಸಿದೆ. ಶಿವಮೊಗ್ಗ ಗ್ರಾಮಾಂತ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close