ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ-ಮಾಹಿತಿ ಇಲ್ಲ ಎಂದ ಸಚಿವ ಸಂತೋಷ್ ಲಾಡ್

 


It is surprising that Minister Santosh Lad was not informed about the attack on the bus conductor in Belgaum.

ಸುದ್ದಿಲೈವ್/ಶಿವಮೊಗ್ಗ

ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಪುಂಡರು ಹಲ್ಲೆ ಮಾಡಿರುವುದು ಸಚಿವ ಸಂತೋಷ್ ಲಾಡ್ ಗೆ ಮಾಹಿತಿ ಇಲ್ಲದೇ ಇರುವುದು ಅಚ್ಚರಿ ಮೂಡಿಸಿದೆ.

ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.‌ ಬೆಳಗಾವಿಯಲ್ಲಿ ಇಂದು ಕನ್ನಡಿಗ ಸರ್ಕಾರಿ ಸಂಸ್ಥೆಯ ನೌಕರನ ಮೇಲೆ ಹಲ್ಲೆ ನಡೆದಿದ್ದರಿಂದ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಮಾಹಿತಿ ಇಲ್ಲ ಎಂದು ಸಚಿವರು ಹೇಳಿದ್ದಾರೆ. 

ಬೆಳಗಾವಿಯ ಸುಳೆಭಾವಿ ಗ್ರಾಮದಲ್ಲಿ ಯುವಕನ ಜೊತೆ ಬಸ್ ಹತ್ತಿದ ಯುವತಿಯೋರ್ವಳು ಮರಾಠಿಯಲ್ಲಿ ಮಾತನಾಡಿದ್ದಳು. ಆಗ ನಾನು ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡು ಎಂದು ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ತಿಳಿಸಿದ್ದರು. ಹೀಗೆ ಹೇಳಿದ್ದಕ್ಕೆ ಜನರನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕನ್ನಡಿಗ ನೌಕರಸ್ಥನ ಮೇಲೆ ಹಲ್ಲೆ ನಡೆದಿರುವುದು ಸಚಿವರಿಗೆ ಗೊತ್ತಿಲ್ಲದೆ ಇರುವುದು ದುರಂತವೇ ಸರಿ.

ಡಿಕೆಶಿ ವಿರುದ್ಧ ಶಾಸಕ ಮುನೀರತ್ನ 2000 ಕೋಟಿ ಹಗರಣದ ಆರೋಪ ಮಾಡಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೂ ಮಾಹಿತಿ ಇಲ್ಲ. ಸಂಬಂಧ ಪಟ್ಟ ಇಲಾಖೆ ಇದೆ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು. ಆರೋಪ ಯಾರು ಯಾರಮೇಲಾದರೂ ಮಾಡಬಹುದು. ಇದು ಎಷ್ಟು ಸತ್ಯತೆ ಇದೆ ತನಿಖೆಯಾಗಲಿ ಎಂದರು.

ಡಿಕೆಶಿ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಸನದಿಂದ ಇಳಿಸುವ ಯತ್ನ ನಡೆದಿದೆ ಎಂಬ ಮಾಧ್ಯದವರ ಪ್ರಶ್ನೆಗೆ ಪ್ರಧಾನಿ ಸ್ಥಸನಕ್ಕೆ ನಿತಿನ್ ಗಡ್ಕರಿಯವರನ್ನ ತರುವ ಪ್ರಯತ್ನ ನಡೆಯುತ್ತಿದೆ ಆ ಮಾಹಿತಿ ನಿಮಗೆ ಇಲ್ಲವಾ ಎಂದು ಮರು ಪ್ರಶ್ನಿಸಿದ ಸಚಿವರು, ಭಾರತ ದೇಶ ನಿಮಗೆ ಬೇಡವಾ ಎಂದು ಕೇಳಿದರು.

ಕಸ್ಡ್ರಕ್ಷನ ಬೋರ್ಡ್ ನಲ್ಲಿ ವಿದ್ಯಾರ್ಥಿಗಳಿಗೆ ಸ್ಕಸಲರ್ ಶಿಪ್ ಇದೆ. ಗಿಗ್ ವರ್ಕರ್ ಸ್ಕೀಮ್, ಗಿಗ್ ಬಿಲೆ, ಟ್ರಾನ್ಸ್ ಬೋರ್ಡ್ ತರಲಾಗುತ್ತಿದೆ. ಸಣ್ಣ ಉದ್ದಿಮೆ ಮೇಲೆ ಅವಲಂಭಿತರಾಗಿರುವನ್ನ ಕಾರ್ಮಿಕ ಇಲಾಖೆಗೆ ಕರೆತಲಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close