B.S Yediyurappa Birth day || ಮೂರುದಿನ ಕ್ರಿಕೆಟ್, ಹೊನಲು ಬೆಳಕು ಥ್ರೋಬಾಲ್ ಪಂದ್ಯಾವಳಿ

 Suddilive || Shivamogga

Ex-chief Minister B.S Yediyurappa Birth day on Feb-27th,  

B.S.Yediyurappa, Birth day


ಹುಟ್ಟುಹಬ್ವದ ಪ್ರಯುಕ್ತ ಶಿವಮೊಗ್ಗದ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್, ಮತ್ತು ಹುಟ್ಟುಹಬ್ಬದ ಹಿಂದಿನ ದಿನ ಕ್ರಿಕೆಟ್ ಪಂದ್ಯಾವಳಿ  ಹಮ್ಮಿಕೊಳ್ಳಲಾಗಿದೆ. 


ಈ ಕುರಿತು ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಬಳ್ಳೇಕೆರೆ, ಮಾಜಿ ಸಿಎಂ ಹುಟ್ಟು ಹಬ್ಬದ ಪ್ರಯುಕ್ತ ಫೆ26 ರಂದು ಮತ್ತು ಮಾ1 ಮತ್ತು 2 ರಂದು  ಬಿಎಸ್ ವೈ ಕಪ್ ಹೆಸರಿನಲ್ಲಿ ಮೂರು ದಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಟೆನಿಸ್ ಬಾಲ್ ಪಂದ್ಯಾವಳಿಯಾಗಿದ್ದು ಪಂದ್ಯಾವಳಿಗಳು ಎನ್ ಇಎಸ್ ಗ್ರೌಂಡ್ ನಲ್ಲಿ ನಡೆಯಲಿದೆ 32 ತಂಡಗಳು ಭಾಗಿಯಾಗಲಿದೆ. ಇದು 6 ಓವರ್ ಗಳ ಪಂದ್ಯಾವಳಿಯಾಗಿದೆ ಎಂದರು. 


ಫೆ.27 ರಂದು ಬೆಳಿಗ್ಗೆ ಥ್ರೋಬಾಲ್ ಪಂದ್ಯಾವಳಿಯನ್ನ  ಮಾಜಿ ಸಿಎಂ ಬಿಎಸ್ ವೈ ಘನ ಉಪಸ್ಥಿತಿಯಲ್ಲಿ, ಬಹಳ ಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ, ಸಂಸದ ರಾಘವೇಂದ್ರ ಉದ್ಘಾಟಿಸಲಿದ್ದಾರೆ.  ಎಂಎಲ್ ಸಿ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಶಾಸಕ ಚೆನ್ನಬಸಪ್ಪ, ಮಾಜಿ ಎಂಎಲ್ ಸಿ ರುದ್ರೇಗೌಡ, ಮೊದಲಾದವರು ಭಾಗಿಯಾಗಲಿದ್ದಾರೆ. 


ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಎಂಎಲ್ ಸಿ ಡಿ‌ಎಸ್ ಅರುಣ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಮಾಜಿ ಸೂಡ ಅಧ್ಯಕ್ಷ ಜ್ಯೋತಿ ಪ್ರಕಾಶ್,  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿ.ಎಸ್ ಷಡಾಕ್ಷರಿ ರಾಜೇಶ್ ಕಾಮತ್, ದಿವಾಕರ ಶೆಟ್ಟಿ ನಿರಂಜನ ಮೂರ್ತಿ, ಮೊದಲಾದವರು ಭಾಗಿಯಾಗಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close