Suddilive || Shivamogga
ಲಿಂಗನಮಕ್ಕಿ Dam leakage will be stopped soon after meeting with officers
ಲಿಂಗನಮಕ್ಕಿ ಡ್ಯಾಂ ನೀರು ಜಿನುಗುತ್ತಿದ್ದು ಅದರನ್ನ ಶೀಘ್ರದಲ್ಲಿಯೇ ಅಧಿಕಾರಿಗಳ ಜೊತೆ ಮಾತನಾಡುವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 20 ಕೋಟಿ ಕೆಪಿಸಿಎಲ್ ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ನೀರು ಜಿನುಗುವಿಕೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳ ಜೊತೆ ಮಾತನಾಡುವೆ. ಇದು ಬಹಳ ಮುಖ್ಯವಾಗಿದೆ ಎಂದರು.
ಉದ್ಯೋಗ ಮೇಳಕ್ಕೆ ತಾಲೂಕ ಮತ್ತು ಗ್ರಾಂಪಂ ಮಟ್ಟದಲ್ಲಿ ನಡೆಸಬೇಕಿದೆ. ಭಾಗಿಯಾಗುವ ಮಹಿಳೆಯರಿಗೆ ಮತ್ತು ಗಂಡುಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಉದ್ಯೋಗದಿಂದ ಯುವಕರಿಗೆ ವಿಶ್ವಾಸ ಹೆಚ್ಚಿಸಿದೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಸಚಿವ ಸಂಪುಟ ಬದಲಾವೇ ಕುರಿತು ಹೈಕಮಾಂಡ್ ನಿರ್ಧಾರಿಸಲಿದೆ. ಅದರ ಬಗ್ಗೆ ಮಾತನಾಡೊಲ್ಲ ಎಂದರು