Eshwarappa Demands-ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದವರು ಪರಸ್ಪರ ಹೊಗಳಿಕೊಳ್ಳಲು ಆಶ್ರಯ ಮನೆ ಹಂಚಿದ್ದ-ಈಶ್ವರಪ್ಪ ಪ್ರಶ್ನೆ

Suddilive || Shivamogga

Eshwarappa Demands the amount of Mescom and contractors should be released for Ashraya Houses. Opposition party and congress were indulged in praising each other, 

Eshwarappa, demands


ಆಶ್ರಯ ಯೋಜನೆ ಬಡವರ ಪಾಲಿಗೆ ಗೋವಿಂದಾ ಮರೀಚಿಕೆಯಾಗಿವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಬಡವರಿಗೆ ಮನೆ ನೀಡಬೇಕೆಂಬ ಘೋಷಣೆ ಮಾತ್ರ ಮಾಡಿದೆ. ಮೊನ್ನೆ ಶಿವಮೊಗ್ಗ ನಗರಕ್ಕೆ  ಜಮೀರ್ ಅಹ್ಮದ್ ಬಂದಿದ್ದರು. ಬಂದವರು ಜನರಿಗೆ ಏನು ಕೊಟ್ಟಿದ್ದಾರೆ ಎಂಬ ಪ್ರಶ್ನೆ ನಾನು ಅವರಿಗೆ ಕೇಳುತ್ತಿದ್ದೇನೆ. ಆ ಮನೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅದಾದ ನಂತರ ಕೊಡುತ್ತೇವೆ ಎಂದರು

ಅದಕ್ಕೆ ಬೇಕಾದ 12 ಕೋಟಿ ಹಣವನ್ನು ಬಿಡುಗಡೆ ಮಾಡಿಸುತ್ತೇನೆಂದು ಮಧುಬಂಗಾರಪ್ಪ ಹೇಳಿದರು. ಆದರೆ ಅದಕ್ಕೆ ಯಾವುದೇ ಹಣ ಇದುವರೆಗೂ ಬಿಡುಗಡೆಯಾಗಿಲ್ಲ. ಈಗ ನಾವು ಮನೆ ಕಟ್ಟಿ ಕೊಟ್ವಿದ್ದೇವೆ ಎಂಬ ಕ್ರೆಡಿಟನ್ನು ತೆಗೆದು ಕೊಂಡರು. ಈಗಲೂ ಮೊನ್ನೆ ಬಂದವರು ಸಹ ಸುಳ್ಳು ಆಶ್ವಾಸನೆ ನೀಡಿದ್ದಾರೆ. ಇಲ್ಲಿಗೆ ಸಚಿವರು ಬಂದು 12 ಕೋಟಿ ಬಿಡುಗಡೆ ಮಾಡುತ್ತಾರೆ ಎಂದು  ಮಧು ಬಂಗಾರಪ್ಪ ಹೇಳಿದ್ರು. ಆದ್ರೆ ಜಮೀರ್ ಅಹ್ಮದ್ ಬಂದು ಯಾವುದೇ ಹಣವನ್ನು ಬಿಡುಗಡೆ ಮಾಡಲಿಲ್ಲ ಎಂದು ದೂರಿದರು. 

ಆ ಮನೆಯನ್ನು ಜಮೀರ್ ಅಹಮ್ಮದ್ಅವರು ಕೊಡಬೇಕಿರಲಿಲ್ಲ ಯಾರಾದರೂ ಗುಮಾಸ್ತರು ಕೊಟ್ಟಿದ್ದರೆ ಆಗುತ್ತಿತ್ತು. ಒಟ್ಟು 3 ಸಾವಿರ ಮನೆಗಳಲ್ಲಿ 1200 ಮನೆಗಳು ಮಾತ್ರ ಇದುವರೆಗೂ ಕೊಟ್ಟಿದ್ದಾರೆ. ಅದರಲ್ಲಿ 652 ಮನೆಗೆ ಮೂಲಭೂತ ಸೌಕರ್ಯಗಳಿಲ್ಲ ಎಂದು ದೂರಿದರು. 

ಇನ್ನುಳಿದ ಮನೆ ಯಾವಾಗ ಕೊಡುತ್ತೀರಿ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ಮನೆ ಕಟ್ಟಿ ಕೊಟ್ಟ ಕಂಟ್ರಾಕ್ಟರ್ ಗೆ ಇನ್ನು ಹಣ ಕೊಡುವುದು ಬಾಕಿ ಇದೆ. ಬಡವರ ದುಡ್ಡನ್ನು ಇವರು  ಬಳಸಿಕೊಂಡಿದ್ದಾರೆ. ಇದರಿಂದಾಗಿ 1 ಕ್ಕೆ ನಾಲ್ಕು ಪಟ್ಟು ಜಾಸ್ತಿ ಕಾರ್ಪೋರೇಶನ್ ಗೆ ವೆಚ್ಚ ಬೀಳುತ್ತೆ. 12 ಕೋಟಿ ಈಗಲೇ ಬಿಡುಗಡೆ ಮಾಡಿ, 24 ಕೋಟಿ ಹಣವನ್ನು ಕಂಟ್ರಾಕ್ಟರ್ ಗೆ ಬಿಡುಗಡೆ ಮಾಡಿ

ಆಮೇಲೆ ಮನೆ ಹಂಚುವ ವಿಚಾರದಲ್ಲಿ ಮುಂದುವರೆಯಿರಿ. ಕಾಂಗ್ರೆಸ್  ಸರ್ಕಾರ ಬಂದ ಮೇಲೆ ಆ ಯೋಜನೆಗೆ ಒಂದು ರೂಪಾಯಿ ಹಣ ಬಿಡುಗಡೆಯಾಗಿಲ್ಲ. ಅವರು ಇವರನ್ನೂ  ಹೊಗಳುತ್ತಾರೆ ಇವರು ಅವರನ್ನು ಹೊಗಳುತ್ತಾರೆ. ಇದರಿಂದ ನಮ್ಮ ಶಾಸಕರು ಸಂತೋಷ ಗೊಂಡರು. ಉಳಿದ ಮನೆಯನ್ನು ಯಾವಾಗ ಪೂರ್ಣ ಗೊಳಿಸುತ್ತಿರ ಎಂಬ ಪ್ರಶ್ನೆಯನ್ನು ನಮ್ಮ ಶಾಸಕರು ಸಚಿವರಿಗೆ ಕೇಳಲಿಲ್ಲ ಎಂದು ತಮ್ಮ ಶಿಕ್ಷ್ಯರನ್ನ ಹಾಗೂ ಕಾಂಗ್ರೆಸ್ ಗೆ ಕ್ಲಾಸ್ ತೆಗೆದುಕೊಂಡರು. 

1836 ಮನೆಗಳು ಗೋಪಿಶೆಟ್ಟಿಕೋಪದಲ್ಲಿ  ಇನ್ನೂ ಪೂರ್ಣ ಗೊಂಡಿಲ್ಲ. ಬಡವರು 500 ಮನೆಗಳಿಗೆ ಪೂರ್ತಿ ಹಣ ಕಟ್ಟಿದ್ದಾರೆ. ಕಳೆದ 1 ವರೆ ವರ್ಷದಿಂದ ಆ ಮನೆಯ ಕೆಲಸ ನಿಂತುಹೋಗಿದೆ. ನಿಮಗೆ ಯೋಗ್ಯತೆ ಇದ್ದರೆ ಮಾತ್ರ ಮನೆ ಕೊಡಿ. ಇಲ್ಲದಿದ್ದರೆ ಅದನ್ನು ಇಲ್ಲಿಗೆ ಕೈ ಬಿದ್ದುಬಿಡಿ. ನಿಜಕ್ಕೂ ಬಡವರನ್ನು  ಹೀನಾಯ ಸ್ಥಿತಿಗೆ ರಾಜ್ಯ ಸರ್ಕಾರ ತಲುಪಿಸಿದೆ.

ಮುಖ್ಯಮಂತ್ರಿಗಳೇ ನೀವೇ ಶಿವಮೊಗ್ಗಕ್ಕೆ ಬಂದು ನೋಡಿ. ಈ ಕೆಲಸಗಳು ಜಮೀರ್ ಅಹಮದ್ ರಿಂದ ಸಾಧ್ಯವಾಗಲ್ಲ. ಜಮೀರ್ ಅಹಮದ್ ರವರೇ ನೀವು ಶಿವಮೊಗ್ಗಕ್ಕೆ ಬಂದಿದ್ದು ಬಡವರಿಗೆ ಯಾವುದೇ ಉಪಯೋಗ ವಾಗಲಿಲ್ಲ.‌ ನಾನು ಮಾಡಿದ್ದನ್ನು ಹೊಗಳುವುದಕ್ಕೆ ಇಲ್ಲಿಗೆ ಬಂದಿದ್ದ ನೀವು ಎಂದು ಪ್ರಶ್ನಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close