Jilan Khan elected as New sdpi shivamogga district president || SDPI ನೂತನ ಜಿಲ್ಲಾಧ್ಯಕ್ಷರಾಗಿ ಜಿಲಾನ್ ಖಾನ್ ಆಯ್ಕೆ

Suddilive || Shivamogga

Jilan Khan elected sdpi New district president. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ನೂತನ ಜಿಲ್ಲಾ ಸಮಿತಿ ಆಯ್ಕೆ, ಜೀಲಾನ್ ಖಾನ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ.

Jilan Khan, New president


ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆ ಇಂದು ನಗರದ ಬೈಪಾಸ್ ರಸ್ತೆಯಲ್ಲಿರುವ ತಾಹಾ ಸಭಾಂಗಣದಲ್ಲಿ ನಡೆಯಿತು, ಈ ಸಭೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ತಾಲ್ಲೂಕು ಸಮಿತಿ, ನಗರ ಸಮಿತಿಗಳು ಭಾಗವಹಿಸಿದ್ದರು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಕಾರ್ಯದರ್ಶಿಯಾದ ಅಂಗಡಿ ಚಂದ್ರು ಮತ್ತು ರಾಜ್ಯ ನಾಯಕರಾದ ಅಕ್ರಮ್ ಮೈಸೂರುರವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಕಳೆದ ಮೂರು ವರ್ಷಗಳ ಅವಧಿ ವರಧಿ ಪ್ರಸಾರ ಮಾಡಲಾಯಿತು ನಂತರ ನಡೆದ 2024-2027ರ ಅಂದರೆ ಮುಂಬರುವ ಮೂರು ವರ್ಷಗಳ ಆವಧಿಗೆ ನೂತನ ಜಿಲ್ಲಾ ಸಮಿತಿಯ ಆಯ್ಕೆ ಮಾಡಲಾಯಿತು.

ನೂತನ ಜಿಲ್ಲಾ ಸಮಿತಿ ವಿವರ.

ಜಿಲ್ಲಾಧ್ಯಕ್ಷರಾಗಿ - ಜೀಲಾನ್ ಖಾನ್, ಉಪಾಧ್ಯಕ್ಷರುಗಳಾಗಿ - ದೇವೇಂದ್ರ ಪಾಟಿಲ್ & ಸಲೀಂ ಖಾನ್, ಪ್ರಧಾನ ಕಾರ್ಯದರ್ಶಿಗಳಾಗಿ - ಇಮ್ರಾನ್ ಅಹ್ಮದ್ & ಅಬ್ದುಲ್ ಜಮೀರ್, ಕಾರ್ಯದರ್ಶಿಯಾಗಿ - ಮನ್ಸೂರ್ ಖಾನ್, ಖಜಾಂಚಿಯಾಗಿ - ರಹೀಂ ಖಾನ್, ಸಮಿತಿ ಸದಸ್ಯರಾಗಿ - ಇಸಾಕ್ ಅಹ್ಮದ್ & ಕಲೀಂ ಉಲ್ಲಾ ಆಯ್ಕೆಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close