Suddilive || Banglore
Shivamogga urdu journalist Mudassir Ahamad got prize. ಕರ್ನಾಟಕ ಉರ್ದು ಅಕಾಡೆಮಿಯಿಂದ 2024-25ರ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ ಮದಸರ ಅಹ್ಮದ್ ಅವರಿಗೆ ಪ್ರಧಾನ.
ಕರ್ನಾಟಕ ಉರ್ದು ಅಕಾಡೆಮಿಯು ಉರ್ದು ಭಾಷೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ತೋರುವ ಲೇಖಕರು, ಕವಿ ಮತ್ತು ಪತ್ರಕರ್ತರಿಗೆ ಪ್ರಶಸ್ತಿ ನೀಡಲು ಘೋಷಿಸಿದೆ. 2024-25ನೇ ಸಾಲಿನ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿಗೆ ಶಿವಮೊಗ್ಗದಿಂದ ಪ್ರಕಟವಾಗುವ "ಆಜ್ ಕಾ ಇನ್ಕಲಾಬ್" ಪತ್ರಿಕೆಯ ಸಂಪಾದಕರಾದ ಮುದಸ್ಸಿರ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಮುದಸ್ಸಿರ್ ಅಹ್ಮದ್ ಕಳೆದ 20 ವರ್ಷಗಳಿಂದ ಉರ್ದು ಮತ್ತು ಕನ್ನಡ ಭಾಷೆಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಲೇಖನಗಳು ದೇಶದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕರ್ನಾಟಕ ಉರ್ದು ಅಕಾಡೆಮಿಯು ನೀಡುವ ಈ ಪ್ರಶಸ್ತಿ ಬಹಳ ಮಹತ್ವದದ್ದಾಗಿದ್ದು, ಪತ್ರಿಕೋದ್ಯಮದಲ್ಲಿ ಅವರ ಸಾಧನೆಗೆ ದೊಡ್ಡ ಗೌರವಲಭಿಸಿದೆ.