Life impresionment || ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

 Suddilive || Shivamogga

Accused have been sentenced to life imprisinment by the court

Life, impresionment

ಸುದ್ದಿಲೈವ್/ಶಿವಮೊಗ್ಗ

ದಿನಾಂಕಃ 12-08-2020 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರವಂತೆ ಗ್ರಾಮದ ವಾಸಿ 44 ವರ್ಷದ ಮಹಿಳೆಯೊಬ್ಬಳನ್ನು ಬರ್ಬರ ಹತ್ಯೆಗೈದು, ಆಕೆಯ ಬಳಿ ಇದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋದ ಪ್ರಕರಣವನ್ನ ಸಾಗರ ಗ್ರಾಮಾಂತರ ಪೊಲೀಸರು ಬೇಧಿಸಿದ್ದಾರೆ.  

ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಪತ್ತೆ ಮಾಡಿ ನ್ಯಾಯಾಲಯಕ್ಜೆ ಹಾಜರು ಪಡಿಸಿದ್ದರು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಸಾಗರ ಗ್ರಾಮಾಂತರ ಠಾಣೆಯ ಸಿಪಿಐ  ಸುನಿಲ್‌ ಕುಮಾರ್ ಎಂ ಪ್ರಕರಣದ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.‌

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ * ಅಣ್ಣಪ್ಪ ನಾಯಕ್ ಜಿ, ಪ್ರಕರಣದ ವಾದ ಮಂಡಿಸಿದ್ದರು, ಘನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.

ಆರೋಪಿತರ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಪ್ರಭಾವತಿ ರವರು ದಿನಾಂಕ:- 24-02-2025 ರಂದು ಪ್ರಕರಣದ ಆರೋಪಿತರಾದ 1) ಅರುಣ @ ಗೆಂಡೆ ಅರುಣ, 27  ವರ್ಷ, 2) ಅಭಿಜಿತ್, 28 ವರ್ಷ, ಮತ್ತು 3) ಇರ್ಫಾನ್‌, 20 ವರ್ಷ, ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 10,000/- ದಂಡ ವಿಧಿಸಿ ಆದೇಶಿಸಿರುತ್ತಾರೆ. ಮೂವರು ಸಾಗರ ಟೌನ್ ನಿವಾಸಿಗಳಾಗಿದ್ದಾರೆ.

Conclusion-life, Impresionment

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close