Election for Sagar Municipal President and vice-president || ನಾಳೆ ಕುತೂಹಲ ಮೂಡಿಸಿದ ಸಾಗರದ ನಗರಸಭೆ ಎಲೆಕ್ಷನ್

 Suddilive || Sagara


Election for Sagar Municipal President and vice-president, ಸಾಗರದ ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಾಳೆ

Election, Muncipal


ಸಾಗರದ ನಗರ ಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಗೆ ನಾಳೆ ಮೂಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಫೈಟ್ ಮುಂದುವರೆದಿದೆ. ಕಾಂಗ್ರೆಸ್ ಗೆ ಬಲಾಬಲ ಇಲ್ಲವಾದರೂ ಹೇಗಾದರೂ ಮಾಡಿ ಬಿಜೆಪಿಯ ಮಣ್ಣು ಮುಕ್ಕಿಸಿ ಅಧಿಕಾರ ಹಿಡಿಯುವ ತವಕ ಇದ್ದರೆ. 

ಬಿಜೆಪಿಗೆ ಕಾಂಗ್ರೆಸ್ ಹಿಂಬದಿಯ ದಾರಿಯಿಂದ ಅಧಿಕಾರ ಹಿಡಿಯುವ ಆತಂಕ ಹೆಚ್ಚಾಗಿದೆ. 31 ಸದಸ್ಯರಿರುವ ಸಭೆಯಲ್ಲಿ ಶಾಸಕರು, ಎಂಪಿ ಸೇರಿ 33-35 ಜನ ಮತಹಾಕಲು ಅರ್ಹರಿರುತ್ತಾರೆ. ಬಿಜೆಪಿ 16 ಜನ ಮೆಜಾರಿಟಿ ಇದ್ದರೂ ಕಾಂಗ್ರೆಸ್ 9 ಜನರ ಸದಸ್ಯರನ್ನ ಹೊಂದಿದೆ. 

ಜೆಡಿಎಸ್, ಪಕ್ಷೇತರು ಸೇರಿ ಐದು ಜನ ಇದ್ದಾರೆ. ಬಿಜೆಪಿ ಗೆ ಸಿಂಪಲ್ ಮೆಜಾರಿಟಿ ಇದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ದೊರೆತಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಬಿಸಿಎಂ ಎ ಮೀಸಲು ಘೋಷಣೆಯಾಗಿದೆ. ಬಿಜೆಪಿಯಲ್ಲಿರುವ 7 ಜನ ಮಹಿಳೆಯರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ(ಈ ಹಿಂದೆ ಅಧ್ಯಕ್ಷರಾದವರನ್ನ ಹೊರತು ಪಡಿಸಿ)

ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಎ ಇರುವುದರಿಂದ ಕುರುಬ, ವಿಶ್ವಕರ್ಮ, ಅಲ್ಪಸಂಖ್ಯಾತ ಮೊದಲಾದವರು ಈ ಮೀಸಲಿಗೆ ಅರ್ಹರಿದ್ದಾರೆ. ನಾಳೆ ಕಾಂಗ್ರೆಸ್ ಎರಡೂ ಸ್ಥಾನಕ್ಕೂ ಅರ್ಜಿ ಸಲ್ಲಿಸಲಿದೆ. ಬಿಜೆಪಿಯಲ್ಲಿ ಭಾವನ ಸಂತೋಷ್, ಸವಿತಾ ವಾಸು ಮತ್ತು ಮೈತ್ರಿ ಪಟೇಲ್ ಸ್ಪರ್ಧೆಯಲ್ಲಿದ್ದಾರೆ. ಆದರೆ ಉಪಾಧ್ಯಕ್ಷರ ಸ್ಪರ್ಧೆಯಲ್ಲಿ ಯಾರು ಎಂಬುದು ಬಿಜೆಪಿಯಲ್ಲಿ ನಿಗೂಢವಾಗಿದೆ. 

ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಧು ಮಾಲತಿ, ಉಪಾಧ್ಯಕ್ಷ ಸ್ಥಾನಕ್ಕೆ  ಮಂಡಗಳಲೆ ಗಣಪತಿ ಅರ್ಜಿ ಹಾಕಲಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನ ಹಿಡಿಯಲು ತಂತ್ರ ಪ್ರತಿತಂತ್ರ ಎರಡೂ ಪಕ್ಷದಲ್ಲೂ ನಡೆಯುತ್ತಿದೆ. ಈಗಾಗಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಕಾಂಗ್ರೆಸ್ ನ ಯಾವ ಷಡ್ಯಂತ್ರ, ತಂತ್ರಗಾರಿಕೆ ನಡೆಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೂ ನಾಳೆ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Conclusion- Election, Municipal Election

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close