MP Raghvendra- ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಫಿಕ್ಸ್ ಆಗಿದೆ-ಸಂಸದ ರಾಘವೇಂದ್ರ ಗಂಭೀರ ಆರೋಪ

Suddilive || Shivamogga

Member of parliament B.Y Raghavendra said about bribe is fixed for Government officials  

MP Raghavendra


ಯತ್ನಾಳ್ ಅಧ್ಯಕ್ಷರ ಚರ್ಚೆ ವಿಚಾರ ಕುರಿತು ಸಂಸದ ರಾಘವೇಂದ್ರ ಪ್ರತಿಕ್ರಿಯಿಸಿದ್ದು, ಸಂಘಟನೆ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ತಾರೆ. ಯಾವುದೇ ಗೊಂದಲವಿಲ್ಲ ಎಂದರು. 

ಮಾಧಯಮಗಳ ಜೊತೆ ಮಾತನಾಡಿದ ಅವರು,  ಆದಷ್ಟು ಬೇಗ ಈ ಚರ್ಚೆಯ ವಿಚಾರ ಕೊನೆಗೊಳ್ಳುತ್ತದೆ. 15 ದಿನದಲ್ಲಿ ಜಿಲ್ಲಾಧ್ಯಕ್ಷರ ಪಟ್ಟಿ ಅಂತಿಮವಾಗುತ್ತದೆ ಎಂದರು. 

ಇಶಾ ಫೌಂಡೇಶನ್ ಶಿವರಾತ್ರಿ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾದ ವಿಚಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಂಸದರು, ಈ ಕಾರ್ಯಕ್ರಮದಲ್ಲಿ  ಅಮಿತ್ ಶಾ ಮತ್ತು ಡಿಕೆ ಶಿವಕುಮಾರ್.ಭಾಗಿಯಾಗಿದ್ದಾರೆ. ಯಾವ ಪಕ್ಷದಿಂದ ಹಿಂದೂಗಳ ಅವಹೇಳನ ಯಾಗುತ್ತಿತ್ತು.  ಆ ಪಕ್ಷದವರೆ ಹಿಂದೂ ಸಂಸ್ಕೃತಿಯ ಕಾರ್ಯಕ್ರಮದಲ್ಲಿ  ಈಗ ಭಾಗಿಯಾಗಿದ್ದು ಸಂತೋಷ ತಂದಿದೆ ಎಂದರು. 

ಜನರಿಗೆ ಸತ್ಯ ಗೊತ್ತಾಗಿದೆ. ಖಾಲಿ ಮಾತಿಗೆ ಜನ ಬೆಲೆ ಕೊಡೊಲ್ಲ. ಅದಕ್ಕೆ ಮಹಾಕುಂಭಾಮೇಳ ಸಾಕ್ಷಿ ಆಗಿದೆ. ಕಾಂಗ್ರೆಸ್ ಅರ್ಥ ಮಾಡಿಕೊಂಡ್ರೆ ಸಾಕು ಎಂದರು.

ಭ್ರಷ್ಠಾಚಾರ ಮಿತಿ ಮೀರಿದೆ. 

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಠಾಚಾರ ಮಿತಿ ಮೀರಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯ ಜೊತೆ ಭ್ರಷ್ಠಾಚಾರ ಮಿತಿ ಮೀರಿದೆ. ಅಧಿಕಾರಿಗಳು ಕಣ್ಣೀರಿಡುತ್ತಿದ್ದಾರೆ. ಅಧಿಕಾರಿಗಳ ನೋವಿನ ಮಾತು ಹೇಳ್ತಾ ಇದ್ದಾರೆ. ತಿಂಗಳ ಮಾಮೂಲಿ ಕೂಡ ಫಿಕ್ಸ್ ಆಗಿದೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದರು. 

ಯಡಿಯೂರಪ್ಪನವರಿಗೆ ಕೋರ್ಟ್ ಸಮನ್ಸ್ ವಿಚಾರ

ಯಡಿಯೂರಪ್ಪ ಜೀವನಪೂರ್ತಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಇದೆ. ಇಂದು ಕೂಡ ಕಾನೂನಿನ ಹೋರಾಟ ಎದುರಿಸಬೇಕಿದೆ. ಆದಷ್ಟು ಬೇಗಾ ನಿರ್ದೋಷಿ ಯಾಗಿ ಹೊರಗೆ ಬರ್ತಾರೆ  ಎಂಬ ವಿಶ್ವಾಸ ವ್ಯಕ್ತಪಡಿಸಿದರು.

600 ಜನ ದಾಸೋಹದಲ್ಲಿ ಭಾಗಿ

ನಂತರ ಯಡಿಯೂರಪ್ಪನವರ ಹುಟ್ಟುಹಬ್ವದ ಪ್ರಯುಕ್ತ ಮೆಗ್ಗಾನ್ ನಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಪಾಲ್ಗೊಂಡ ಸಂಸದರು ಸಾರ್ವಜನಿಕರಿಗೆ ಊಟ ಬಡಿಸುವ ಮೂಲಕ ದಾಸೋಹದಲ್ಲಿ ಪಾಲ್ಗೊಂಡರು. ಈ ವೇಳೆ 600 ಜನರಿಗೆ ದಾಸೋಹದಲ್ಲಿ ಹಸಿವು ನೀಗಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close