Suddilive || Bhadravathi
A government employee has been convicted in a rare Lokayukta case. Imprisonment and fine for Bhadravati surveyor T. Mallikarjunaiah. ಭದ್ರಾವತಿ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ಆದೇಶ
ಅಪರೂಪದ ಲೋಕಾಯುಕ್ತ ಪ್ರಕರಣದಲ್ಲಿ ಸರ್ಕಾರಿ ನೌಕರನಿಗೆ ಶಿಕ್ಷೆಯಾಗಿದೆ. ಭದ್ರಾವತಿಯ ಭೂಮಾಪನ ಪರಿವೀಕ್ಷಕರಾಗಿ ಕೆಕಸ ನಿರ್ವಹಿಸುತ್ತಿದ್ದ ಟಿ. ಮಲ್ಲಿಕಾರ್ಜುನಯ್ಯನವರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಬಸವರಾಜಪ್ಪ.ಎಂ.ಹೆಚ್ ಬಿನ್ ಲೇಟ್ ಹನುಮಂತಪ್ಪ, ಮತ್ತಿಘಟ್ಟ ಗ್ರಾಮ. ಭದ್ರಾವತಿ ತಾಲ್ಲೂಕು ರವರ ಹೆಸರಿನಲ್ಲಿದ್ದ ಸ.ನಂ.56/10 ರಲ್ಲಿನ 1 ಎಕರೆ 20 ಗುಂಟೆ ಜಮೀನಿನ ಪಕ್ಕ ಪೋಡಿ ದುರಸ್ಥಿ ಮಾಡಿಕೊಡುವ ಬಗ್ಗೆ ಭದ್ರಾವತಿ ತಾಲ್ಲೂಕು ಎ.ಡಿ.ಎಲ್.ಆರ್ ಕಛೇರಿಯ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಎಂಬುವವರು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ದಿನಾಂಕ:23/07/2013 ರಂದು ಸದರಿ ಅಪಾದಿತ ಅಧಿಕಾರಿ ಪಿರ್ಯಾದುದಾರರಿಂದ 15,000/- ರೂ ಲಂಚದ ಹಣವನ್ನು ಶಿವಮೊಗ್ಗ ನಗರ ವಿನೋಬನಗರ ಬಡಾವಣೆಯ ಕೆಂಚಪ್ಪ ಲೇಔಟ್ ನ ಆಪಾದಿತರ ವಾಸದ ಮನೆಯಲ್ಲಿ ಕೇಳಿ ಪಡೆದುಕೊಳ್ಳುವಾಗ ಟ್ರ‍್ಯಾಪ್ ಮಾಡಲಾಗಿರುತ್ತದೆ. ಕೆ.ಸಿ.ಪುರುಷೋತ್ತಮ, ಪೊಲೀಸ್ ಇನ್ಸ್ಪೆಕ್ಟರ್, ಕ.ಲೋ.ಶಿವಮೊಗ್ಗ ರವರು ಪ್ರಕರಣವನ್ನು ತನಿಖೆ ಕೈಗೊಂಡು ಆಪಾದಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ದಿನಾಂಕ:28/02/2025 ರಂದು ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮರುಳಸಿದ್ದಾರಾದ್ಯ ಹೆಚ್.ಜೆ. ರವರು ಆರೋಪಿ ಟಿ.ಮಲ್ಲಿಕಾರ್ಜುನಯ್ಯ ಇವರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು 30,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ.ಡಿ.ಸುಂದರ್ ರಾಜ್ ರವರು ವಾದ ಮಂಡಿಸಿರುತ್ತಾರೆ.