Suddilive || shivamogga
A male Tiger died of old age and appetite in shivamogga Lion safari. ಸಫಾರಿಯಲ್ಲಿ ಏಕೈಕ ಗಂಡು ಹುಲಿ ಸಾವಾಗಿದೆ.
ಮೃಗಾಲಯದಲ್ಲಿ ಜನಿಸಿದ 17 ವರ್ಷ ಪ್ರಾಯದ ವಿಜಯ್ ಎಂಬ ಗಂಡು ಹುಲಿಯು ನಿನ್ನೆ ಸಫಾರಿಯಲ್ಲಿ ಸಾವುಕಂಡಿದೆ. ವಯೋಸಹಜ ಕಾರಣ ಒಂದು ತಿಂಗಳಿನಿಂದ ಹಸಿವಿನಿಂದ ಬಳಲುತ್ತಿತ್ತು. ಹಿಂಭಾಗದ ಸ್ನಾಯುಗಳ ಸೆಳತ ಮತ್ತು ಹಸಿವಿನಿಂದ ಬಳಲುತ್ತಿದ್ದ ಹುಲಿ ನಿನ್ನೆ ಸಾವು ಕಂಡಿದೆ.
ವಿಜಯ್ ಸಫಾರಿಯಲ್ಲಿ ಏಕೈಕ ಗಂಡು ಹುಲಿಯಾಗಿದ್ದು ಸಫಾರಿಯ ಆಕರ್ಷಕ ಹುಲಿಯಾಗಿ ಬೆಳೆದಿತ್ತು. ಜ.8 ರಂದು ಅಂಜನಿ ಎಂಬ 17 ವರ್ಷದ ಹುಲಿ ಸಾವು ಕಂಡಿತ್ತು. ಈಗ ವಿಜಯ್ ಸಾವು ಕಂಡಿದೆ.
ಅಂಜನಿ ಸಾವುಕಂಡ ನಂತರ ಇದರ ಸಂಖ್ಯೆ ಐದಕ್ಕೆ ಇಳಿದಿತ್ತು. ಈಗ ವಿಜಯ್ ಸಾವಿನಿಂದ ನಾಲ್ಕಕ್ಕೆ ಇಳಿದಿದೆ. ಒಂದು ಗಂಡು ಹುಲಿ ಇಲ್ಲವಾಗಿದೆ. ಸಧ್ಯಕ್ಕೆ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ ಹೀಗಿದೆ - 17 ವರ್ಷ ದಶಮಿ, 16 ವರ್ಷದ ಸೀತಾ, ಸುಮಾರು 12 ವರ್ಷದ ಪೂರ್ಣಿಮಾ ಮತ್ತು ನಿವೇದಿತಾ ಮೃಗಾಲಯದಲ್ಲಿವೆ.