16 God are being worshiped during Maha shivrathri-ರಾಗಿಗುಡ್ಡದಲ್ಲಿ ಎರಡು ದಿನಗಳ ಕಾಲ ವಿಶೇಷ ಪೂಜೆ-ಪ್ರಸಾದ ವಿನಿಯೋಗ-ರಾಯರಿಗೆ ವಿಶೇಷ ಬೆಣ್ಣೆ ಅಲಂಕಾರ

 Suddilive || Shivamogga


16 God are being worshiped and distribution of prasadam in shivamogga Ragigudda temple on the occasion of Shivrathri

God, Worshipped


ಶಿವರಾತ್ರಿ ಪ್ರಯುಕ್ತ ರಾಗಿಗುಡ್ಡದಲ್ಲಿ ಎರಡು ದಿನಗಳ ಕಾಲ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ. 

ಶಿವರಾತ್ರಿಯ ಇಂದು ಮತ್ತು ಜಾಗರಣೆಯ ಮಹಾಕಾಲದ ಪೂಜೆ ಮತ್ತು ಪ್ರಸಾದ ವಿನಿಯೋಗಕ್ಕಾಗಿ ರಾಗಿಗುಡ್ಡದಲ್ಲಿ ದೊಡ್ಡ ಪೆಂಡಾಲ್ ಹಾಕಲಾಗಿದೆ. 

ಬ್ರಹ್ಮ, ವಿಷ್ಣು, ಮಹೇಶ್ವರ, ಗಣಪತಿ, ವರಹಮೂರ್ತಿ, ಸುಬ್ರಹ್ಮಣ್ಯ, ಆಂಜನೇಯ, ಪಾಂಡುರಂಗ, ರುಕ್ಮಿಣಿ, ಸರಸ್ವತಿ, ಲಕ್ಷ್ಮಿ, ಪಾರ್ವತಿ, ಭೂದೇವಿ, ಶನಿಮಹಾತ್ಮ, ಪದ್ಮಾವತಿ ಹೀಗೆ 16 ದೇವಾನು ದೇವತೆಗಳಿಗೆ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಇವತ್ತು ನಡೆದಿದೆ. 

ನಾಳೆಯೂ ವಿಶೇಷ ಪೂಜೆ ನಡೆಯಲಿದ್ದು, ಜಾಗರಣೆಯ ಮಹಾಕಾಲ ಮರುದಿನ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ರಾಗಿಗುಡ್ಡ ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ. 

ರಾಯರಿಗೆ ವಿಶೇಷ ಬೆಣ್ಣೆ ಅಲಂಕಾರ

ಮಹಾಶಿವರಾತ್ರಿ ಪ್ರಯುಕ್ತ ತಿಲಕ್ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ರಾಯರ ವೃಂದಾವನದ ಮೇಲೆ ವಿಶೇಷ ಬೆಣ್ಣೆ ಅಲಂಕಾರದಿಂದ ಕಂಗೊಳಿಸುವ ಶಿವಲಿಂಗವನ್ನು ಮಾಡಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close