Suddilive || Shivamogga
ಬ್ಲೂಮೂನ್ ಬಾರ್ ಎದುರು ಇಬ್ಬರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ Two persons arrest
ಶಿವಮೊಗ್ಗದ ಬ್ಲೂಮೂನ್ ಎದುರು ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಲಾಗಿತ್ತು. ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನ ತುಂಗನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹರೀಶ್ ಮತ್ತು ಮಂಜುನಾಥ್ ಅಜ್ಜಿ ಪುಟ್ಟಮ್ಮನವರ ಅಂತ್ಯಕ್ರಿಯೆ ಮುಗಿಸಿ ಸಾಗರ ರಸ್ತೆಯಲ್ಲಿದ್ದ ಬ್ಲೂಮೂನ್ ಬಾರ್ ಗೆ ತೆರಳಿದ್ದರು. ಮದ್ಯ ಸೇವಿಸಿ ಬಾರ್ ಮುಂಭಾಗ ನಿಂತಿದ್ದಾಗ ಹರೀಶ್ ಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹರೀಶ್ ಮತ್ತು ಮಂಜುನಾಥ್ ಇಬ್ಬರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಬ್ಬರೂ ಈಗ ಸಾವಿನಿಂದ ಪಾರಾಗಿದ್ದಾರೆ. ಆದರೆ ಹಲ್ಲೆ ನಡೆಸಿದ್ದರ ಬಗ್ಗೆ ಹಲವು ಗೊಂದಲ ಮೂಡಿತ್ತು.
ಚಾಲುಕ್ಯ ನಗರದ ಈಶ್ವರ್ ಎಂಬಾತನೊಂದಿಗೆ ಹರೀಶ್ ಮತ್ತು ಮಂಜುನಾಥ್ ಕುಡಿಯುವ ವೇಳೆ ಕಿರಿಕ್ ಆಗಿದೆ. ಈಶ್ವರ್ ಮತ್ತು ಹರೀಶ್, ಮಂಜುನಾಥರ ನಡುವೆ ಮಾತಿನ ಚಕಮಕಿ ನಡೆದಿದ್ದು ಕೆಳಗೆ ಬಾ ನೋಡ್ಕೊಂತೀವಿ ಎಂದು ಈ ಇಬ್ಬರು ಹೇಳಿದ್ದರಂತೆ.
ಇದರಿಂದ ಭಯಭೀತನಾದ ಈಶ್ವರ್ ಮಗನಿಗೆ ಕರೆ ಮಾಡಿ ಇಬ್ಬರು ನನಗೆ ಹೊಡೆಯಲು ಹೊಂಚು ಹಾಕಿದ್ದಾರೆ ಎಂದು ಮೊಬೈಲ್ ಕರೆಯಲ್ಲಿ ತಿಳಿಸಿದ್ದಾನೆ. ಅಷ್ಟೆ ಮಗ ಸಚಿನ್ ಆಟೋ ಹತ್ತಿಕೊಂಡು ಬಂದವನೆ ಕಬ್ಬಿಣದ ರಾಡಿನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆ ನಡೆಸಿದ ಇಬ್ಬರೂ ಚಾಲುಕ್ಯ ನಗರದ ನಿವಾಸಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲಗಲೆ ನಡೆದಿತ್ತು. ಈಗ ಇಬ್ಬರೂ ಅರೆಸ್ಟ್ ಆಗಿದ್ದಾರೆ.
Conclusion-arrest, two persons