Suddilive || Shivamogga
ಟೆಕ್ನಿಕಲ್ ಆಫಿಸರ್ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ, application invited for technical officer
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೆಎಸ್‌ಎಪಿಎಸ್ ವತಿಯಿಂದ ವೈರಲ್ ಲೋಡ್ ಲ್ಯಾಬೊರೇಟರಿ(ವಿಎಲ್‌ಎಲ್) ಮಂಜೂರಾಗಿದ್ದು ಈ ವಿಭಾಗಕ್ಕೆ ಅವಶ್ಯವಿರುವ ಟೆಕ್ನಿಕಲ್ ಅಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾ.05 ಕಡೆಯ ದಿನವಾಗಿರುತ್ತದೆ. ಟೆಕ್ನಿಕಲ್ ಆಫಿಸರ್ ಹುದ್ದೆ 01, ವೇತನ ರೂ.35000/- ಇರುತ್ತದೆ. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು ಸಂಸ್ಥೆಯ ವೆಬ್‌ಸೈಟ್ ತಿತಿತಿ.sims_shimogಚಿ.ಛಿom ನಲ್ಲಿ ಪಡೆಯತಕ್ಕದ್ದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಹೆಸರಿಗೆ ಪಡೆದಿರುವ ರೂ.1000 ಡಿಡಿ ಯೊಂದಿಗೆ ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವೊಗ್ಗ 577201 ಈ ವಿಳಾಸಕ್ಕೆ ಸಲ್ಲಿಸಬೇಕು. ಲಕೋಟೆಯ ಮೇಲೆ ಟೆಕ್ನಿಕಲ್ ಆಫೀಸರ್ ಎಂದು ಕಡ್ಡಾಯವಾಗಿ ನಮೂದಿಸಬೇಕು. ಆಯ್ಕೆಯನ್ನು ನಿಯಮಾವಳಿಗಳ ಪ್ರಕಾರ ನಡೆಸಲಾಗುವುದು ಎಂದು ಸಿಮ್ಸ್ ನಿರ್ದೇಶಕರು ಮತ್ತು ಡೀನ್ ತಿಳಿಸಿದ್ದಾರೆ.