ಇಬ್ಬರ ಸ್ಥಿತಿ ಗಂಭೀರ, ಓರ್ವ ಸ್ಥಳದಲ್ಲೇ ಸಾವು

A road accident took place near a petrol station on the Bhadravati-Channagiri road in which a bike rider was killed and the other two were seriously injured this evening.


ಸುದ್ದಿಲೈವ್/ಭದ್ರಾವತಿ

ಭದ್ರಾವತಿ-ಚನ್ನಗಿರಿ ರಸ್ತೆಯಲ್ಲಿ ಬರುವ ಪೆಟ್ರೋಲ್ ಬಂಕ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನೋರ್ವ ಅಪಘಾತತದಲ್ಲಿ ಸಾವನ್ನಪ್ಪಿದರೆ ಉಳಿದಿಬ್ಬರಿಗೆ ತೀವ್ರ ಗಂಭೀರ ಗಾಯಗಳಾಗಿರುವ ಘಟನೆ ಇಂದು ಸಂಜೆ ನಡೆದಿದೆ. 

ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ ಬರುವ ಲಕ್ಕಪ್ಪಕೇರಿ ಕ್ಯಾಂಪ್ ನ ಪೆಟ್ರೋಲ ಬಳಿ ಎರಡು ಬೈಕ್ ಗಳ ನಡುವೆ ಅಪಘಾತ ಉಂಟಾಗಿವೆ. ಇಬ್ಬರು ಸವಾರರು ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ಬರುತ್ತಿದ್ದರೆ ಒಬ್ಬ ಪಲ್ಸರ್ ವಾಹನದಲ್ಲಿ ಬಂದು ಡಿಕ್ಕಿ ಹೊಡೆದಿದ್ದು ಓರ್ವ ಸ್ಥಳದಲ್ಲೇ ಸಾವುಕಂಡಿದ್ದರೆ.

ಪಲ್ಸರ್ ಎನ್ ಎಸ್  ವಾಹನದಲ್ಲಿ ರವಿ ಎಂಬುವರು ಭದ್ರಾವತಿ ಕಡೆ ಬರುತ್ತಿದ್ದ ವೇಳೆ ಹೀರೋಹೊಂಡಾ ವಾಹನದಲ್ಲಿ ಚನ್ನಗಿರಿ ಮಾರ್ಗವಾಗಿ ತೆರಳುತ್ತಿದ್ದ ಹೀರೋಹೊಂಡಾ ಬೈಕ್ ಗೆ ಡಿಕ್ಕಿ ಹೊಡೆದಿದೆ. ಹೀರೋ ಹೊಂಡಾ ಸ್ಪ್ಲೆಂಡರ್ ವಾಹನ ಚಲಾಯಿಸುತ್ತಿದ್ದ  ಏಳುಮಲೈ (47) ಸ್ಥಳದಲ್ಲೇ ಸಾವು ಕಂಡಿದ್ದಾರೆ. 

ಸ್ಪ್ಲೆಂಡರ್ ವಾಹನದ ಹಿಂಬದಿ ಕುಳಿತಿದ್ದ ಅಮಾವಾಸೆ ಎಂಬುವರಿಗೆ ಮತ್ತು ಪಲ್ಸರ್ ಎನ್ ಎಸ್ ವಾಹನ ಸವಾರನಿಗೆ ತಲೆಗೆ ತೀವ್ರ ಹೊಡೆತ ಬಿದ್ದಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನೂ ಶಿವಮೊಗ್ಗ ಮೆಗ್ಗಾನ್ ಗೆ ದಾಖಲಿಸಲಾಗಿದೆ. 

ಮೂವರು ಸಹ ಹೆಲ್ಮೆಟ್ ಧರಿಸದೆ ವಾಹನ ಚಲಿಸುತ್ತಿದ್ದ ಪರಿಣಾಮ ಈ ಘಟನೆ ನಡೆದಿದೆ. ಪೊಲೀಸರ ಎಚ್ಚರಿಕೆಯ ನಾಮಫಲಕಗಳಿದ್ದರೂ ರಸ್ತೆ ನಿಯಮ ಪಾಲಿಸದೆ ಈ ಘಟನೆ ನಡೆದಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close