ಪ್ರಯಾಗ್ ರಾಜ್ ಗೆ ವಿಶೇಷ ರೈಲಿನ ಬುಕಿಂಗ್ ಫುಲ್

A special train service has been announced for the people of Shimoga who want to go to the Mahakumbha Mela held once in 144 years at Prayagraj and it is already fully booked.

ಸುದ್ದಿಲೈವ್/ಶಿವಮೊಗ್ಗ

ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ತೆರಳಲಿಚ್ಛಿಸುವ ಮಲೆನಾಡಿನ ಶಿವಮೊಗ್ಗದವರಿಗೆ ತೆರಳಲು ವಿಶೇಷ ರೈಲು ಸೇವೆ ಘೋಷಿಸಲಾಗಿದ್ದು ಈಗಾಗಲೇ ಫುಲ್ ಬುಕ್ ಆಗಿದೆ. 

ಪ್ರಯಾಣಕ್ಕೆ ಒಂದು ಗಂಟೆಯ ಒಳಗೆ 15 ಬೋಗಿಗಳ 1250 ಮೀಸಲು ಸೀಟುಗಳು ಫುಲ್ ಆಗಿದೆ. ಅಲ್ಲಿಂದ ವಾಪಾಸ್ ಬರಲು ಇನ್ನೂ ಬುಕ್ಕಿಂಗ್ ಒಪನ್ ಆಗಬೇಕಿದೆ. ಬಹುಶಃ ನಾಳೆ ಒಪನ್ ಆಗುವ ನಿರೀಕ್ಷೆಯಿದೆ. 

ಫೆಬ್ರವರಿ 22ರ ಶನಿವಾರ ಸಂಜೆ 4:40ಕ್ಕೆ ಶಿವಮೊಗ್ಗದಿಂದ (ರೈಲು ಸಂಖ್ಯೆ. 06223) ರಂದು ಹೊರಟು ಫೆಬ್ರವರಿ 24ರ ಬೆಳಿಗ್ಗೆ 11:10ಕ್ಕೆ ಪ್ರಯಾಗರಾಜ್‌ ತಲುಪಲಿದೆ ಹಾಗೂ ಫೆಬ್ರವರಿ 25ರಂದು ಬೆಳಿಗ್ಗೆ 5.40ಕ್ಕೆ ಪ್ರಯಾಗರಾಜ್‍ನಿಂದ (ರೈಲು ಸಂಖ್ಯೆ 06224) ಫೆಬ್ರವರಿ 27ರ ಬೆಳಿಗ್ಗೆ 06:45ಕ್ಕೆ ಶಿವಮೊಗ್ಗ ತಲುಪಲಿದೆ ವಿಶೇಷ ರೈಲು ಚಲಿಸಲಿದ್ದು, ಯಾತ್ರಾರ್ಥಿಗಳು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗಿತ್ತು. 

ಫೆಬ್ರವರಿ 15 ರ ಮಧ್ಯಾಹ್ನದ ನಂತರ ವಿಶೇಷ ರೈಲಿನ ಬುಕಿಂಗ್ ಸೇವೆ ಆರಂಭವಾಗಲಿದ್ದು, ಯಾತ್ರಾರ್ಥಿಗಳ ಒಂದು ಗಂಟೆಯಲ್ಲಿ ಬುಕಿಂಗ್ ಫುಲ್ ಆಗಿದೆ. 

ಸಂಸದ ರಾಘವೇಂದ್ರ ಅವರು ಸಹ ತಮ್ಮ ಫೇಸ್ ಬುಕ್ ನಲ್ಲಿ ಈ ಒಂದು ಪೋಸ್ಟ್ ನ್ನ ಹಾಕಿಕೊಂಡಿದ್ದರು. ಈ ಪೋಸ್ಟ್ ಹಾಕಿ ಒಂದು ಗಂಟೆಯ ಒಳಗೆ 1250 ಸೀಟುಗಳು ಬುಕ್ ಆಗಿರುವುದು ತಿಳಿದು ಬಂದಿದೆ. ರೈಲು ಶಿವಮೊಗ್ಗ ಭದ್ರಾವತಿ, ಬೀರೂರು ಚಿಕ್ಕಜಾಜೂರು, ಚಿತ್ರದುರ್ಗ, ಹೊಸಪೇಟೆ, ಗದಗ, ಹೊಳೆ ಆಲೂರು, ಬಾದಾಮಿ, ಬಾಗಲಕೋಟೆ ಬಿಜಾಪುರ ಮೂಲಕ ಮಹಾರಾಷ್ಟ್ರ, ಮದ್ಯಪ್ರದೇಶ್ ಮೂಲಕ ಬನಾರಸ್ ಗೆ ರೈಲು ತಲುಪಲಿದೆ. 

ಬನಾರಸ್ ನಿಂದ ಪ್ರಯಾಗ್ ರಾಜ್ ಗೆ 122 ಕಿಮಿ ರಸ್ತೆ ಮಾರ್ಗವಾಗಿ ಪ್ರಯಾಗ್ ರಾಜ್ ಗೆ ತಲುಪಬೇಕಿದೆ. ಪ್ರಯಾಗ್ ರಾಜ್ ನ‌ ಕುಂಭ ಮೇಳಕ್ಕೆ ತೆರಳಲು ಸುಧೀಂದ್ರ ಕಟ್ಟೆ, ಮುರುಳೀಧರ್, ಸಂಚಾರಿ ನಾಗೇಶ್ ಅವರು ಒಂದು ತಿಂಗಳ ಹಿಂದೆ ಸಂಸದ ರಾಘವೇಂದ್ರ ಅವರನ್ನ ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಈಗ ಕೇಂದ್ರ ಸಚಿವ ವಿ.ಸೋಮಣ್ಣನವರಿಂದ ಅನುಕೂಲವಾಗಿದೆ. 

ಆದರೆ ಬುಕ್ಕಿಂಗ್ ಫುಲ್ ಆಗಿರುವುದರಿಂದ ಜೆನೆರಲ್ ಬೋಗಿಗಳೆರಡು ಸೇವೆ ಸಿಗಲಿದೆ. ಸಾರ್ವಜನಿಕರು ನೂಕು ನುಗ್ಗಲು ಮಾಡಿಕೊಳ್ಳದೆ ಇದರ ಪ್ರಯೋಜನವನ್ನ ಪಡೆಯಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close