There is a commotion in the name of selling Golguppa during the fair of Anjaneya Swami Deva in the Shimoga Fort. Late in the case, a complaint was filed in the Kote police station.
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವರ ಜಾತ್ರೆಯ ವೇಳೆ ಗೋಲ್ಗುಪ್ಪ ಮಾರಾಟ ಮಾಡುವನ ಹೆಸರಿನಲ್ಲಿ ಗಲಾಟೆಯಾಗಿದೆ. ಪ್ರಕರಣ ತಡವಾಗಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಾತ್ರೆಯಲ್ಲಿ ಮಂಡಕ್ಕಿ ಮಾರಾಟ ಮಾಡುವರ ಅಂಗಡಿ ಮುಂದೆ ಗೋಲ್ಗುಪ್ಪ ಮಾರಾಟ ಮಾಡಲು ಮುಂದಾದ ಹುಡುಗನೊಂದಿಗೆ ಅಂಗಡಿ ಇಡಬಾರದೆಂಬ ವಿಚಾರಕ್ಕೆ ಗಲಾಟೆಯಾಗುತ್ತೆ. ಗೋಲ್ಗುಪ್ಪೆ ಮಾರಾಟ ಮಾಡುವನಿಗೆ ಪಕ್ಕದಲ್ಲಿದ್ದ ಬ್ಯಾಗ್ ಮಾರಾಟ ಮಾಡುವನು ಸಹಕಾರ ನೀಡಿದ್ದಾರೆ
ಇದನ್ನ ಸಹಿಸದ ಮಂಡಕ್ಕಿ ಮಾರಾಟಗಾರರು ಬ್ಯಾಗ್ ಮಾರಾಟ ಮಾಡುವನಿಗೂ ಉರ್ದು ಭಾಷೆಯಲ್ಲಿ ಬೈದಿದ್ದಾರೆ. ನೀನು ಆತನ ಸಹಾಯಕ್ಕೆ ಬಂದರೆ ನಿನ್ನ ಅಂಗಡಿಯನ್ನ ಎತ್ತಂಗಡಿ ಮಾಡಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ಮಂಡಕ್ಕಿ ಮಾರಾಟ ಮಾಡುವರು ಕೈಯಿಂದ ಥಳಿಸಿದ್ದಾರೆ.
ಅದಕ್ಕೆ ಬ್ಯಾಗ್ ಮಾರಾಟ ಮಾಡುವರು ಹಾರ್ಟ್ ಪೇಷೆಂಟ್ ಇದ್ದೇನೆ. ಹೊಡೆಯ ಬೇಡಿ ಎಂದು ತಿಳಿಸಿದರೂ ಬ್ಯಾಗ್ ನ್ನ ನೆಲಕ್ಕೆ ಬಿಸಾಡಿ 15 ಸಾವಿರ ರೂ.ಲುಕ್ಸಾನ್ ಮಾಡಿರುವುದಾಗಿ ಅಲ್ಲಾಬಕ್ಷಿ ಅವರು ದೂರು ನೀಡಿದ್ದಾರೆ. ಮಂಡಕ್ಕಿ ಮಾರಾಟಗಾರರಾದ ಸೈಯ್ಯದ್ ಹುಸೇನ್, ಜಬೀವುಲ್ಲ ಸೇರಿದಂತೆ ಇತರೆ ಮೂವರ ವಿರುದ್ಧ ದೂರು ದಾಖಲಾಗಿದೆ.